AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತರೆ ಮಮತಾ ಬ್ಯಾನರ್ಜಿಯ ಹತ್ಯೆ ಆದೀತು‘

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹತ್ಯೆ ಮಾಡಲು ಪಿತೂರಿ ನಡೆಸಬಹುದು. ಅದಕ್ಕಾಗಿ ಬಿಜೆಪಿ ರಹಸ್ಯವಾಗಿ ಜನರನ್ನು ಕಳಿಸಬಹುದು’

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತರೆ ಮಮತಾ ಬ್ಯಾನರ್ಜಿಯ ಹತ್ಯೆ ಆದೀತು‘
ಮಮತಾ ಬ್ಯಾನರ್ಜಿ (ಎಡ), ಸುಬ್ರತಾ ಮುಖರ್ಜಿ (ಬಲ)
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 13, 2020 | 3:51 PM

Share

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ಕಟ್ಟಾ ವೈರಿಪಕ್ಷಗಳು ಎಂದರೂ ತಪ್ಪಾಗಲಾರದು. ಪರಸ್ಪರ ಆರೋಪ-ಪ್ರತ್ಯಾರೋಪಗಳು ಸಾಮಾನ್ಯವಾಗಿದೆ. ಆದರೆ ಈಗ ಟಿಎಂಸಿ ನಾಯಕ, ಸಚಿವ ಸುಬ್ರತಾ ಮುಖರ್ಜಿ ಒಂದು ಗಂಭೀರ ಆರೋಪವನ್ನು ಬಿಜೆಪಿ ವಿರುದ್ಧ ಮಾಡಿದ್ದಾರೆ. ಅದೂ ಒಂದು ಊಹೆಯ ಆಧಾರದ ಮೇಲೆ!

ಮುಂಬರುವ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಮಮತಾ ಬ್ಯಾನರ್ಜಿಯವರನ್ನು ಸೋಲಿಸಲು ವಿಫಲವಾದರೆ, ಅವರಿಗೆ ಸರ್ಕಾರ ರಚನೆ ಮಾಡಲು ಆಗದೆ ಇದ್ದರೆ, ಅವರು ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹತ್ಯೆ ಮಾಡಲು ಪಿತೂರಿ ನಡೆಸಬಹುದು. ಅದಕ್ಕಾಗಿ ಬಿಜೆಪಿ ರಹಸ್ಯವಾಗಿ ಜನರನ್ನು ಕಳಿಸಬಹುದು ಎಂಬ ಬಹುದೊಡ್ಡ ವಿವಾದಾತ್ಮಕ ಹೇಳಿಕೆಯನ್ನು ಸುಬ್ರತಾ ನೀಡಿದ್ದಾರೆ.

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಸಿರಾಕೋಲ್​ಗೆ ಗುರುವಾರ ಬೆಳಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಚುನಾವಣಾ ಪ್ರಚಾರದ ನಿಮಿತ್ತ ಭೇಟಿ ಕೊಟ್ಟಾಗ, ಅವರ ಕಾರಿಗೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಈ ಕಲ್ಲು ತೂರಾಟದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್​ ವಿಜಯ್​ ವರ್ಗಿಯಾ ಸೇರಿ ಹಲವರು ಗಾಯಗೊಂಡಿದ್ದರು. ಟಿಎಂಸಿ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿದ ಬಿಜೆಪಿ ಮುಖಂಡರು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಆಡಳಿತದಲ್ಲಿ ದಬ್ಬಾಳಿಕೆ, ಅರಾಜಕತೆ ಮತ್ತು ಅಂಧಕಾರವನ್ನು ಸೃಷ್ಟಿಯಾಗಿದೆ ಎಂದು ಕಿಡಿಕಾರಿದ್ದರು.

ಅಲ್ಲಿಂದ ಶುರುವಾದ ಆರೋಪ-ಪ್ರತ್ಯಾರೋಪ ಈಗ ಮುಖ್ಯಮಂತ್ರಿ ಹತ್ಯೆ ಸಾಧ್ಯತೆಯವರೆಗೂ ಬಂದು ತಲುಪಿದೆ.

‘ಸವದಿಯವ್ರೇ.. ಬಿಕ್ಕಟ್ಟು ನಿರ್ವಹಿಸುವುದೆಂದರೆ, ಸದನದಲ್ಲಿ ಕೂತು ರೋಮಾಂಚನ ಚಿತ್ರ ವೀಕ್ಷಿಸಿದಂತಲ್ಲ’