BMC ಬೀಳಿಸಿದ ಕಚೇರಿಯನ್ನ ರಣಾವತ್​ ರಿಪೇರಿ ಮಾಡಿಸ್ತಾರಂತಾ ಅಥವಾ!?

| Updated By: ಸಾಧು ಶ್ರೀನಾಥ್​

Updated on: Sep 11, 2020 | 3:45 PM

ಮುಂಬೈ:ಮೊನ್ನೆ ಬುಧವಾರ ಧ್ವಂಸಗೊಳಿಸಲಾದ ತನ್ನ ಕಚೇರಿಯ ಆವರಣವನ್ನು ಸರಿಪಡಿಸಲು ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಹೀಗಾಗಿ, ನಾನು ಅದೇ ಕಟ್ಟಡದ ಅವಶೇಷಗಳಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್ ಟ್ವೀಟ್​ ಮಾಡಿದ್ದಾರೆ. ಧ್ವಂಸಗೊಳಿಸಲಾದ ನನ್ನ ಕಚೇರಿ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳುತ್ತೇನೆ. ನನ್ನ ಕಟ್ಟಡದ ಅವಶೇಷಗಳು ಇಡೀ ಜಗತ್ತಿನ ವಿರುದ್ಧ ಸೆಡ್ಡುಹೊಡೆದು ನಿಂತ ನಾರಿಯೊಬ್ಬಳ ಪ್ರತೀಕವಾಗಿ ಗೋಚರಿಸಲಿ ಎಂದು ಟ್ವೀಟ್​ ಮಾಡಿದ್ದಾರೆ. ಕ್ವೀನ್​ ಹಾಗೂ ಮಣಿಕರ್ಣಿಕಾ ಸಿನಿಮಾಗಳ ಖ್ಯಾತಿಯ ನಟಿ ಕಂಗನಾ ರಣಾವತ್ ಕಚೇರಿಯನ್ನು ಮುಂಬೈ […]

BMC ಬೀಳಿಸಿದ ಕಚೇರಿಯನ್ನ ರಣಾವತ್​ ರಿಪೇರಿ ಮಾಡಿಸ್ತಾರಂತಾ ಅಥವಾ!?
Follow us on

ಮುಂಬೈ:ಮೊನ್ನೆ ಬುಧವಾರ ಧ್ವಂಸಗೊಳಿಸಲಾದ ತನ್ನ ಕಚೇರಿಯ ಆವರಣವನ್ನು ಸರಿಪಡಿಸಲು ಸದ್ಯಕ್ಕೆ ನನ್ನ ಬಳಿ ಹಣವಿಲ್ಲ. ಹೀಗಾಗಿ, ನಾನು ಅದೇ ಕಟ್ಟಡದ ಅವಶೇಷಗಳಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್ ಟ್ವೀಟ್​ ಮಾಡಿದ್ದಾರೆ.

ಧ್ವಂಸಗೊಳಿಸಲಾದ ನನ್ನ ಕಚೇರಿ ಕಟ್ಟಡವನ್ನು ಹಾಗೇ ಉಳಿಸಿಕೊಳ್ಳುತ್ತೇನೆ. ನನ್ನ ಕಟ್ಟಡದ ಅವಶೇಷಗಳು ಇಡೀ ಜಗತ್ತಿನ ವಿರುದ್ಧ ಸೆಡ್ಡುಹೊಡೆದು ನಿಂತ ನಾರಿಯೊಬ್ಬಳ ಪ್ರತೀಕವಾಗಿ ಗೋಚರಿಸಲಿ ಎಂದು ಟ್ವೀಟ್​ ಮಾಡಿದ್ದಾರೆ.

ಕ್ವೀನ್​ ಹಾಗೂ ಮಣಿಕರ್ಣಿಕಾ ಸಿನಿಮಾಗಳ ಖ್ಯಾತಿಯ ನಟಿ ಕಂಗನಾ ರಣಾವತ್ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ನಿಯಮ ಉಲ್ಲಂಘನೆ ಅಡಿಯಲ್ಲಿ ಕಳೆದ ಬುಧವಾರ ಧ್ವಂಸಗೊಳಿಸಿದ್ದರು.

Published On - 3:20 pm, Fri, 11 September 20