ಜಾರ್ಖಂಡ್‌ನಲ್ಲಿ ಬಾವಿ ತೋಡುತ್ತಿದ್ದ ನಾಲ್ವರು ಕಾರ್ಮಿಕರ ಜೀವಂತ ಸಮಾಧಿ

|

Updated on: May 23, 2024 | 8:37 PM

ಜಾರ್ಖಂಡ್​ನ ರಾಜಧಾನಿ ರಾಂಚಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಸೆನ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ರಿ ಅಂಬತೋಲಿ ಗ್ರಾಮದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಮಿಕರು ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಬಾವಿಯನ್ನು ಅಗೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಬಾವಿ ತೋಡುತ್ತಿದ್ದ ನಾಲ್ವರು ಕಾರ್ಮಿಕರ ಜೀವಂತ ಸಮಾಧಿ
ಪೊಲೀಸರು
Follow us on

ರಾಂಚಿ: ಜಾರ್ಖಂಡ್‌ನ (Jharkhand) ಲೋಹರ್ಡಗಾ ಜಿಲ್ಲೆಯಲ್ಲಿ ಇಂದು (ಗುರುವಾರ) ಮಹಿಳೆ ಸೇರಿದಂತೆ ರಾಂಚಿಯ (Ranchi) ನಾಲ್ವರು ಕಾರ್ಮಿಕರು ಬಾವಿ ತೋಡುವ ವೇಳೆ ಜೀವಂತ ಸಮಾಧಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್​ನ ರಾಜಧಾನಿ ರಾಂಚಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಸೆನ್ಹಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ರಿ ಅಂಬತೋಲಿ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಕಾರ್ಮಿಕರು ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ಬಾವಿಯನ್ನು ಅಗೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಈ ಬಗ್ಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟರೊಳಗೆ ಎಲ್ಲಾ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Fire Accident: ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಸ್ಫೋಟ; ದುರಂತದಲ್ಲಿ 4 ಮಂದಿ ಸಾವು, 25 ಜನರಿಗೆ ಗಾಯ

“ನಾಲ್ವರು ಕಾರ್ಮಿಕರು ಬಾವಿಯನ್ನು ಅಗೆಯುತ್ತಿದ್ದಾಗ ಮೇಲಿನ ಭೂಮಿಯ ಒಂದು ಭಾಗವು ಕುಸಿದಿದೆ. ಈ ವೇಳೆ ಅಗೆಯುವ ಯಂತ್ರಗಳು ಮತ್ತು ಇತರ ಉಪಕರಣಗಳನ್ನು ನಿಯೋಜಿಸಲಾಗಿತ್ತು. ಆ ವೇಳೆಗಾಗಲೇ ನಾಲ್ವರು ಸತ್ತಿರುವುದು ಪತ್ತೆಯಾಗಿದೆ” ಎಂದು ಸೇನ್ಹ ಪೊಲೀಸ್ ಠಾಣೆಯ ಉಸ್ತುವಾರಿ ವೇದಾಂತ್ ಶಂಕರ್ ಹೇಳಿದ್ದಾರೆ.

ಮೃತರನ್ನು ಅಬು ರೆಹಾನ್ ಅನ್ಸಾರಿ (35), ಶಬ್ನಮ್ ಖಾತುನ್ (21), ರಂಜಾನ್ ಅನ್ಸಾರಿ (35) ಮತ್ತು ಭಗತ್ ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ