ಕಾರ್ಯಕ್ರಮವೊಂದರಲ್ಲಿ ಕಾಳಿದೇವಿಯ ಪಾತ್ರಧಾರಿ ಬಾಲಕನ ಕತ್ತು ಸೀಳಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ 14 ವರ್ಷದ ಬಾಲಕ ಮತ್ತು ಇತರ ಇಬ್ಬರು ಮಕ್ಕಳನ್ನು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಪೊಲೀಸರ ಪ್ರಕಾರ, ಕಾನ್ಪುರದ ಬಿಲಹೌರ್ ಪ್ರದೇಶದ ಬಂಬಿಯಾನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಭಾಷ್ ಸೈನಿ ಎಂಬುವವರ ಮನೆಯಲ್ಲಿ ಭಗವತ್ ಕಥಾವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ, ಮಕ್ಕಳು ಭಗವತ್ ಕಥಾದ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ, ಕಾಳಿ ದೇವಿಯ ಪಾತ್ರವನ್ನು ನಿರ್ವಹಿಸುತ್ತಿದ್ದ ಬಾಲಕ, ಮತ್ತೊಬ್ಬ ಬಾಲಕನ ಕುತ್ತಿಗೆಯನ್ನು ಸೀಳಿರುವ ಘಟನೆ ನಡೆದಿದೆ.
ಘಟನೆಯ ನಂತರ, ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವನು ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.
ಕಾಳಿಯ ಪಾತ್ರ ನಿರ್ವಹಿಸುತ್ತಿದ್ದ ಬಾಲಕ ಅಲ್ಲಿ ಬರುವ ಹತ್ಯೆ ಘಟನೆಯ ಸಂದರ್ಭದಲ್ಲಿ ತ್ರಿಶೂಲವನ್ನು ತೆಗೆದುಕೊಳ್ಳಲು ಹೇಳಲಾಯಿತು ಆದರೆ ತ್ರಿಶೂಲ ಸಿಗದ ಕಾರಣ ಕಾಳಿ ಪಾತ್ರಧಾರಿ ಹರಿತವಾದ ಚಾಕುವನ್ನು ತಂದಿದ್ದಾನೆ.
ಮತ್ತಷ್ಟು ಓದಿ: ಬೀದರ್: ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿ: ಐವರ ಪೈಕಿ ಮೂವರು ದುರ್ಮರಣ
ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಕಾನ್ಪುರ ಪೊಲೀಸ್‌ನ ಡಿಸಿಪಿ ವಿಜಯ್ ಧುಲ್, ಮೃತನ ತಂದೆ ನೀಡಿದ ದೂರಿನ ನಂತರ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಬಾಲಕನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ