ಅರುಣಾಚಲ ಪ್ರದೇಶ(Arunachal Pradesh)ದ ಹೋಟೆಲ್ವೊಂದರಲ್ಲಿ ಕೇರಳದ ದಂಪತಿ ಮತ್ತವರ ಸ್ನೇಹಿತೆ ಸೇರಿ ಮೂವರ ಶವ ಪತ್ತೆಯಾಗಿದೆ. ಮೂವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಈಶಾನ್ಯ ರಾಜ್ಯಕ್ಕೆ ತಂಡವನ್ನು ಕಳುಹಿಸಲಿದ್ದಾರೆ. ಸಾವಿಗೆ ಮಾಟಮಂತ್ರವೇ ಕಾರಣ ಎಂದು ಹೇಳಲಾಗುತ್ತಿದ್ದು, ಆದರೆ ಪೊಲೀಸರು ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮೂವರ ವರ್ತನೆಯನ್ನು ಏನೋ ಅಸಹಜ ವರ್ತನೆ ಇತ್ತು ಎಂದು ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಸಿ ನಾಗರಾಜು ಹೇಳಿದ್ದಾರೆ. ಇಂದು ರಾತ್ರಿಯೇ ನಮ್ಮ ತಂಡ ಅಲ್ಲಿಗೆ ಹೋಗಲಿದೆ.ತನಿಖೆ ಮುಗಿದ ಬಳಿಕ ಅಲ್ಲಿಂದ ಸಾಕ್ಷ್ಯ ತರುತ್ತೇವೆ, ದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದರು. ಮೂವರು ಅಲ್ಲಿಗೆ ಏಕೆ ಹೋದರು ಮತ್ತು ಅವರು ಹೇಗೆ ಸತ್ತರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಪೊಲೀಸರು ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ಹೋಟೆಲ್ ಕೊಠಡಿಯಿಂದ ನಿಗೂಢ ಸ್ಥಿತಿಯಲ್ಲಿ ಮೂರು ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಮೃತರಲ್ಲಿ ದಂಪತಿ ಹಾಗೂ ಅವರ ಸ್ನೇಹಿತರೂ ಸೇರಿದ್ದಾರೆ. ದಂಪತಿಯನ್ನು ಕೊಟ್ಟಾಯಂ ನಿವಾಸಿಗಳಾದ ನವೀನ್ ಮತ್ತು ಅವರ ಪತ್ನಿ ದೇವಿ ಮತ್ತು ತಿರುವನಂತಪುರಂ ನಿವಾಸಿ ಆರ್ಯ ಎಂದು ಗುರುತಿಸಲಾಗಿದೆ. ಸ್ನೇಹಿತೆಯನ್ನು ಆರ್ಯ ಬಿ ನಾಯರ್ ಎಂದು ಗುರುತಿಸಲಾಗಿದೆ.
ಮೃತ ನವೀನ್‌ಗೆ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ಆಗಾಗ ತಂದೆ-ತಾಯಿಯನ್ನು ಭೇಟಿಯಾಗಲು ಬರುತ್ತಿದ್ದರು ಎಂದು ತಿಳಿಸಿದ್ದಾರೆ. ಮೂವರೂ ಮಾರ್ಚ್ 28 ರಂದು ಹೋಟೆಲ್‌ಗೆ ಬಂದಿದ್ದರು. ಅರುಣಾಚಲ ಪೊಲೀಸರು ಆತ್ಮಹತ್ಯೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ:
ಕೈ ಮಣಿಕಟ್ಟನ್ನು ಸೀಳಲಾಗಿತ್ತು, ಮೂವರು ಮಾರ್ಚ್ 28 ರಂದು ಹೋಟೆಲ್‌ಗೆ ತಲುಪಿದ್ದರು ಮತ್ತು ಅವರು ಮಾರ್ಚ್ 27 ರಂದು ತಿರುವನಂತಪುರಂ ವಿಮಾನ ನಿಲ್ದಾಣದಿಂದ ಗುವಾಹಟಿಗೆ ತೆರಳಿದ್ದರು ಎಂದು ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲೋವರ್ ಸುಬನ್ಸಿರಿಯ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಶವದ ಪಕ್ಕದಲ್ಲಿ ಆತ್ಮಹತ್ಯೆ ಪತ್ರ ಕೂಡ ಸಿಕ್ಕಿದ್ದು, ಇಲ್ಲಿಯವರೆಗೆ ಸಂತೋಷವಾಗಿ ಬದುಕಿದ್ದೇವೆ ಇನ್ನು ನಾವು ಹೋಗುತ್ತೇವೆ ಎಂದು ಬರೆದಿದ್ದಾರೆ. ತಿರುವನಂತಪುರಂ ಮೂಲದ ದೇವಿ ಆಯುರ್ವೇದ ವೈದ್ಯರಾಗಿದ್ದರು. ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಬಾಲನ್ ಮಾಧವನ್ ಮತ್ತು ಲತಾ ಅವರ ಪುತ್ರಿ ದೇವಿ ಅವರು 2011 ರಲ್ಲಿ ನವೀನ್ ಅವರನ್ನು ವಿವಾಹವಾದರು ಮತ್ತು ನಂತರ ಕೊಟ್ಟಾಯಂಗೆ ತೆರಳಿದರು.
ದೇವಿ ಮತ್ತು ಆರ್ಯ ಅವರು ಕೆಲವು ವರ್ಷಗಳ ಹಿಂದೆ ಶಿಕ್ಷಕರಾಗಿ ತಿರುವನಂತಪುರದ ಶಾಲೆಯೊಂದರಲ್ಲಿ ಕೆಲಸ ಮಾಡಿದ್ದರಿಂದ ಸ್ನೇಹಿತರಾಗಿದ್ದರು ಮತ್ತು ವರ್ಷಗಳಲ್ಲಿ ಅವರ ಸ್ನೇಹ ಬೆಳೆಯಿತು. ಆರ್ಯ ಫ್ರೆಂಚ್ ಮತ್ತು ದೇವಿ ಜರ್ಮನ್ ಕಲಿಸುತ್ತಿದ್ದರು. ಆರ್ಯ ನಾಪತ್ತೆಯಾದ ಬಳಿಕ ಮಾರ್ಚ್ 27ರಂದು ಆಕೆಯ ತಂದೆ ಪೊಲೀಸರ ಬಳಿ ಹೋಗಿ ದೂರು ದಾಖಲಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ