ಕೇರಳದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ಜಾಥಾದಲ್ಲಿ ಹಮಾಸ್ ನಾಯಕ ಖಾಲಿದ್ ಭಾಷಣ, ಭುಗಿಲೆದ್ದ ಆಕ್ರೋಶ

|

Updated on: Oct 29, 2023 | 10:34 AM

ಕೇರಳದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ಜಾಥಾದಲ್ಲಿ ಹಮಾಸ್ ನಾಯಕ ಖಲೀದ್ ಮಾಶಲ್ ಪಾಲ್ಗೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ. ಕೇರಳದ ಮಲಪ್ಪುರಂನಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಜಾಥಾವನ್ನು ಆಯೋಜಿಸಲಾಗಿತ್ತು. ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್​ಮೆಂಟ್​ ಇದನ್ನು ಆಯೋಜಿಸಿತ್ತು. ಭಯೋತ್ಪಾದಕ ಸಂಘಟನೆ ಹಮಾಸ್‌ನ ನಾಯಕ ಈ ರ್ಯಾಲಿಯಲ್ಲಿ ಆನ್​ಲೈನ್​ ಮೂಲಕ ಭಾಗಿಯಾಗಿದ್ದರು.

ಕೇರಳದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ಜಾಥಾದಲ್ಲಿ ಹಮಾಸ್ ನಾಯಕ ಖಾಲಿದ್ ಭಾಷಣ, ಭುಗಿಲೆದ್ದ ಆಕ್ರೋಶ
ಖಾಲಿಸ್
Image Credit source: India Today
Follow us on

ಕೇರಳದಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ನಡೆದ ಜಾಥಾದಲ್ಲಿ ಹಮಾಸ್ ನಾಯಕ ಖಾಲಿದ್ ಮಾಶಲ್ ಪಾಲ್ಗೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಕೇರಳದ ಮಲಪ್ಪುರಂನಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಜಾಥಾವನ್ನು ಆಯೋಜಿಸಲಾಗಿತ್ತು. ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್​ಮೆಂಟ್​ ಇದನ್ನು ಆಯೋಜಿಸಿತ್ತು. ಭಯೋತ್ಪಾದಕ ಸಂಘಟನೆ ಹಮಾಸ್‌ನ ನಾಯಕ ಈ ರ್ಯಾಲಿಯಲ್ಲಿ ಆನ್​ಲೈನ್​ ಮೂಲಕ ಭಾಗಿಯಾಗಿದ್ದರು.

ಈ ವಿಚಾರವಾಗಿ ಬಿಜೆಪಿ ನಾಯಕರು ಪ್ರತಿಪಕ್ಷಗಳ ಮೈತ್ರಿಕೂಟ ಮತ್ತು ಕೇರಳ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಖಾಲಿದ್ ಹಮಾಸ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಮತ್ತು 2017 ರವರೆಗೆ ಹಮಾಸ್ ಅಧ್ಯಕ್ಷರಾಗಿದ್ದರು. ಬಿಬಿಸಿ ವರದಿಯ ಪ್ರಕಾರ, ಖಾಲಿದ್ ಮಶಾಲ್ ಪ್ಯಾಲೆಸ್ತೀನ್​ನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಜನಿಸಿದರು ಮತ್ತು ಅವರ ಜೀವನದ ಬಹುಪಾಲು ಜೋರ್ಡಾನ್ ಮತ್ತು ಕುವೈತ್‌ನಲ್ಲಿ ಕಳೆದಿದ್ದಾರೆ.

ಖಲೀದ್ ಮಶಾಲ್ ಅವರನ್ನು 2004 ರಲ್ಲಿ ಹಮಾಸ್‌ನ ರಾಜಕೀಯ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಮಶಾಲ್ ಎಂದೂ ಗಾಜಾದಲ್ಲಿ ಎಂದಿಗೂ ವಾಸಿಸಲಿಲ್ಲ ಮತ್ತು ಜೋರ್ಡಾನ್, ಸಿರಿಯಾ, ಕತಾರ್ ಮತ್ತು ಈಜಿಪ್ಟ್‌ನಿಂದ ಯಾವಾಗಲೂ ಹಮಾಸ್ ಅನ್ನು ನಿರ್ವಹಿಸುತ್ತಿದ್ದರು.

ರ‍್ಯಾಲಿಯಲ್ಲಿ ಹಮಾಸ್ ನಾಯಕ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಅದರ ಬಗ್ಗೆ ವಿವಾದ ಎದ್ದಿದೆ.

ಮತ್ತಷ್ಟು ಓದಿ: ಹಮಾಸ್, ಇಸ್ರೇಲ್​ ಯುದ್ಧದ ಬಗ್ಗೆ ಕಳವಳ, ಪ್ರಧಾನಿ ಮೋದಿ ಈಜಿಪ್ಟ್​ ಅಧ್ಯಕ್ಷ ಅಬ್ದೆಲ್ ನಡುವೆ ಚರ್ಚೆ

ಪೋಸ್ಟರ್​ನಲ್ಲಿ  ಹಿಂದುತ್ವ ಮತ್ತು ವರ್ಣಭೇದ ನೀತಿಯನ್ನು ಬೇರುಸಹಿತ ಕಿತ್ತುಹಾಕಿ ಎಂದು ಬರೆಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ಯಾಲೆಸ್ತೀನ್ ಉಳಿಸುವ ನೆಪದಲ್ಲಿ ಭಯೋತ್ಪಾದಕ ಸಂಘಟನೆಯನ್ನು ವೈಭವೀಕರಿಸುತ್ತಿರುವುದು ಅತ್ಯಂತ ಆಘಾತಕಾರಿ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ