ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಡೆಂಗ್ಯೂವಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಗೆ ಕಾಂಪೌಂಡರ್ನಿಂದ ಕಿರುಕುಳ
ಆಸ್ಪತ್ರೆಯಲ್ಲಿ ಡೆಂಗ್ಯೂವಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಗೆ ಕಾಂಪೌಂಡರ್ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 22 ವರ್ಷದ ಮಹಿಳೆಯ ಕುಟುಂಬವು ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಲಾಗಿದೆ. ರಾತ್ರಿ ರೋಗಿಗಳೆಲ್ಲರೂ ಮಲಗಿದ್ದಾಗ ಈ ಘಟನೆ ನಡೆದಿದೆ. ಸಿಸಿಟಿವಿ ಕ್ಲಿಪ್‌ನಲ್ಲಿ ಮಹಿಳೆ ಮಲಗಿದ್ದಾಗ ಆಕೆಯ ಹಾಸಿಗೆಯ ಪಕ್ಕದಲ್ಲಿ ಕಾಂಪೌಂಡರ್ ನಿಂತಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮಹಿಳೆ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದು, ತುಂಬಾ ದುರ್ಬಲಳಾಗಿದ್ದಳು ಎಂದು ವೈದ್ಯರು ತಿಳಿಇಸದ್ದಾರೆ. ಶೋಯೆಬ್ ಎಂಬ ಆಸ್ಪತ್ರೆಯ ಕಂಪೌಂಡರ್ ಆಕೆ ಮಲಗಿದ್ದಾಗ ಆಕ್ಷೇಪಾರ್ಹ ಕೃತ್ಯ ಎಸಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆತನ ಬಳಿ ಇದ್ದದ್ದು ಸ್ಪಷ್ಟವಾಗಿ ಗೋಚರಿಸಿದೆ.
ಬೆಡ್‌ಶೀಟ್‌ನೊಳಗೆ ಕೈಕಾಲುಗಳು, ಸೊಂಟವನ್ನು ಮುಟ್ಟಿದ್ದಾನೆ ಎಂದು ರೋಗಿ ದೂರು ನೀಡಿದ್ದಾರೆ. ಕೃತ್ಯವನ್ನು ಕಾಂಪೌಂಡರ್ ಒಪ್ಪಿಕೊಂಡಿದ್ದಾನೆ. ಎರಡು ತಿಂಗಳ ಹಿಂದೆ ಶೋಯೆಬ್‌ನನ್ನು ಕಾಂಪೌಂಡರ್ ಆಗಿ ನೇಮಿಸಲಾಗಿತ್ತು.
ಮತ್ತಷ್ಟು ಓದಿ: ಹೆಣ್ಣು ನಾಯಿ ಮೇಲೆ ಅತ್ಯಾಚಾರ ನಡೆಸಿ, 3ನೇ ಮಹಡಿಯಿಂದ ಎಸೆದ ಕಾಮುಕ
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ವೃತ್ತಾಧಿಕಾರಿ ಹೇಮಂತ್ ಕುಮಾರ್ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆಯ ಕುಟುಂಬದವರು ಒತ್ತಾಯಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ