ಡೆಂಗ್ಯೂ ತಡೆಯಲು ಜಿಲ್ಲಾಡಳಿತ ಹರಸಾಹಸ; ವೈರಲ್ ಫಿವರ್​ನಿಂದ ಜಿಲ್ಲಾಸ್ಪತ್ರೆ ಫುಲ್

ಬರದ ಛಾಯೆಯಿಂದ ಕಂಗೆಟ್ಟಿರುವ ಹಾವೇರಿ ಜಿಲ್ಲೆಯ ಜನರಿಗೆ, ಇದೀಗ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಟ ಹೆಚ್ಚಾಗಿದೆ. ಜಿಲ್ಲಾಡಳಿತ ಹತ್ತಾರೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹಿತ, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ. ಈ ಹಿನ್ನಲೆ ಜನರು ನಮ್ಮ ಜೊತೆ ಕೈ ಜೊಡಿಸದಿದ್ರೆ, ರೋಗ ತಡೆಯುವುದು ಕಷ್ಟ ಎನ್ನುತ್ತಿದ್ದಾರೆ ಅಧಿಕಾರಿಗಳು. 

ಡೆಂಗ್ಯೂ ತಡೆಯಲು ಜಿಲ್ಲಾಡಳಿತ ಹರಸಾಹಸ; ವೈರಲ್ ಫಿವರ್​ನಿಂದ ಜಿಲ್ಲಾಸ್ಪತ್ರೆ ಫುಲ್
ವೈದ್ಯಾಧಿಕಾರಿ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 17, 2023 | 6:03 PM

ಹಾವೇರಿ, ಅ.17: ಜಿಲ್ಲೆಯಲ್ಲಿ ಮಾರಣಾಂತಿಕ ಡೆಂಗ್ಯೂ(Dengue Fever) ಹಾಗೂ ಮಲೇರಿಯಾ ರೋಗವನ್ನು ತಡೆಯಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಈ ಬಾರಿ ಜಿಲ್ಲಾಡಳಿತ ಕೈಗೊಂಡ ಕಾರ್ಯಕ್ರಮ ನೋಡಿದರೆ, ಕಳೆದ ಬಾರಿಗಿಂತ ಬಹಳಷ್ಟು ಕಮ್ಮಿ ಪ್ರಕರಣಗಳು ದಾಖಲಾಗಬೇಕಿತ್ತು. ಆದ್ರೆ, ಈ ಬಾರಿಯ ಹವಾಮಾನ ವೈಪರಿತ್ಯದಿಂದ ಕಳೆದ ಬಾರಿಗಿಂತ ಜಾಸ್ತಿ ಪ್ರಕರಣಗಳು ದಾಖಲಾಗಿವೆ. ಹೌದು, ಈಗಾಗಲೇ ಬರೊಬ್ಬರಿ 90 ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಹಿನ್ನಲೆ ಎಚ್ಚೆತ್ತ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿಯವರು  ಜಾಥಾ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರೆ, ಇನ್ನೊಂದೆಡೆ ಆಸ್ಪತ್ರೆ ರೋಗಿಗಳಿಂದ ಫುಲ್ ಆಗಿದೆ.

ಈ ಕುರಿತು ಮಾತನಾಡಿದ ವೈದ್ಯಾಧಿಕಾರಿ ಡಾ.ಸರೀತಾ ಅವರು ‘ಈಗಾಗಲೇ ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಜನರು ಸಾಥ್ ಕೊಡದೆ ಇದ್ದರೆ ನಾವು ಯಾವ ಕಾರ್ಯಕ್ರಮದಿಂದಲೂ ಯಶಸ್ಸು ಕಾಣುವುದು ಅಸಾಧ್ಯ ಎಂದು ಹೇಳಿದರು. ಈ ಬಾರಿ ಕಳೆದ ವರ್ಷಕ್ಕಿಂತ ಮಳೆಯ ಪ್ರಮಾಣ ಕಮ್ಮಿ ಇದೆ. ಮನೆಯಲ್ಲಿ ಹೆಚ್ಚು ದಿನಗಳ ಕಾಲ ನೀರನ್ನು ಸ್ಟಾಕ್ ಮಾಡಿ ಇಡಲಾಗುತ್ತಿದೆ. ಹೀಗಾಗಿ ಡೆಂಗ್ಯೂ ಸೊಳ್ಳೆಗಳ ಉತ್ಪತ್ತಿ ಜಾಸ್ತಿ ಆಗುತ್ತಿದೆ. ಆದ್ರೆ, ಹವಾಮಾನ ವೈಪರಿತ್ಯ ಇದೆ ರೀತಿ ಮುಂದುವರೆದ್ರೆ ಪ್ರಕರಣಗಳ ಸಂಖ್ಯೆ ಜಾಸ್ತಿ ಆಗಬಹುದು. ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ವಿಜಯಪುರದಲ್ಲಿ ಡೆಂಗ್ಯೂ, ಚಿಕೂನ್​ಗುನ್ಯಾ ಉಲ್ಭಣ; ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು

ಒಟ್ಟಾರೆಯಾಗಿ ಈ ವರ್ಷ ಉತ್ತಮ ಮಳೆ ಆಗದೆ ಕೃಷಿ ಹಾಗೂ ವಿದ್ಯುತ್​ನಿಂದ ಸಮಸ್ಯೆ ಅನುಭವಿಸುತ್ತಿರುವ ಜನ ಸಾಮಾನ್ಯರು, ಇನ್ನೊಂದು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಯೂ ಉಂಟಾಗುತ್ತಿದೆ. ಬರಗಾಲದಿಂದ ಬೆಳೆದ ಬೆಳೆ ರೈತನ ಕೈಗೆ ಸಿಗದೆ ಹೋಗಿದೆ. ಇದೀಗ ಸಾಂಕ್ರಾಮಿಕ ರೋಗದ ಕಾಟದಿಂದ ಸಾರ್ವಜನಿಕರು ಕಷ್ಟಪಡುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ