AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲಾಟೆ ವೇಳೆ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ: ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

Yadgiri News: ಗಲಾಟೆ ವೇಳೆ ಮಹಿಳೆಯ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ ಹಿನ್ನೆಲೆ ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮಹಿಳೆಯ ಶವ ಇಟ್ಟು ಕುಟುಂಬಸ್ಥರಿಂದ ಜಿಲ್ಲೆಯ ಸುರಪುರ ತಾಲೂಕಿನ ಹುಣಸಗಿ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ.

ಗಲಾಟೆ ವೇಳೆ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ: ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಮೃತ ಮಹಿಳೆ
ಅಮೀನ್​ ಸಾಬ್​
| Edited By: |

Updated on: Oct 29, 2023 | 5:06 PM

Share

ಯಾದಗಿರಿ, ಅಕ್ಟೋಬರ್​​​​​ 29: ಗಲಾಟೆ ವೇಳೆ ಮಹಿಳೆಯ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ ಹಿನ್ನೆಲೆ ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ (suicide) ಗೆ ಶರಣಾಗಿದ್ದಾರೆ. ಸದ್ಯ ಮಹಿಳೆಯ ಶವ ಇಟ್ಟು ಕುಟುಂಬಸ್ಥರಿಂದ ಜಿಲ್ಲೆಯ ಸುರಪುರ ತಾಲೂಕಿನ ಹುಣಸಗಿ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ. ವಿಜಯಲಕ್ಷ್ಮೀ(30) ಮೃತ ಮಹಿಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದವರನ್ನ ಬಂಧಿಸುವಂತೆ ಆಗ್ರಹಿಸಿ ಧರಣಿ ಮಾಡಲಾಗುತ್ತಿದೆ.

ಇಂದ್ರಮ್ಮ, ಹನುಮಂತರಾಯ, ಪುಷ್ಪಾ, ಶಶಿಕಲಾರನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ. ಮನೆ ಬಳಿ ನೀರುಬಿಟ್ಟ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಜಗಳ ಉಂಟಾಗಿದ್ದು, ಜಗಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಹಿಡಿದು ಎಳೆದಾಡಿರುವುದಾಗಿ ಆರೋಪಿಸಿದ್ದಾರೆ. ಅ.21ರಂದು ವಿಜಯಲಕ್ಷ್ಮೀ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬಸ್ಥರಿಂದ ಪ್ರತಿಭಟನೆ ಮಾಡಲಾಗುತ್ತಿದೆ.

ಲಾಂಗ್ ಹಿಡಿದು ಉದ್ಯಮಿ ಮೇಲೆ ಹಲ್ಲೆ ಯತ್ನ: ಕೇಸ್ ದಾಖಲಿಸಲು ವಿಳಂಬ ಆರೋಪ

ಬೆಂಗಳೂರು: ಲಾಂಗ್ ಹಿಡಿದು ಉದ್ಯಮಿ ಮೇಲೆ ಹಲ್ಲೆಗೆ ಯತ್ನಿಸಿದ್ದು ಪೊಲೀಸರು ಕೇಸ್ ದಾಖಲಿಸಲು ವಿಳಂಬ ಆರೋಪ ಕೇಳಿಬಂದಿದೆ. ಬಳಿಕ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದಾಖಲಾಗಿದೆ. ಮಚ್ಚಿನೇಟಿಗೆ ತಲೆಗೆ ಗಂಭೀರವಾಗಿ ಗಾಯವಾದರೂ ಕೊಲೆಯತ್ನದಡಿ ಪೊಲೀಸರು ಕೇಸ್ ದಾಖಲಿಸಿಲ್ಲ. ಐಪಿಸಿ 307 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲು ಇನ್ಸ್​ಪೆಕ್ಟರ್ ಮೀನಾಮೇಷ ಮಾಡಿದ್ದಾರೆ.

ಕೆಲ ವರ್ಷಗಳಿಂದ ಮಾರ್ಗೊಂಡನಹಳ್ಳಿ ಬಳಿ ಉದ್ಯಮಿ ಜಮೀನು ಖರೀದಿಸಿದ್ದ. ಆದರೆ ಆ ಸ್ಥಳ ನಮ್ಮದು ಎಂದು ಸ್ಥಳೀಯರಿಂದ ಉದ್ಯಮಿ ಮೇಲೆ ಪದೇ ಪದೇ ಹಲ್ಲೆಗೆ ಯತ್ನಿಸಿದ್ದ. ಖರೀದಿಸಿದ ಜಮೀನು ಕಾವಲಿಗೆ ಸೆಕ್ಯುರಿಟಿ ನೇಮಿಸಿದ್ರು ಅವರಿಗೂ ಬೆದರಿಕೆ ಹಾಕಿ, ಸೆಕ್ಯುರಿಟಿ ವಾಸವಾಗಿದ್ದ ಕಂಟೇನರ್​ಗೂ ಬೆಂಕಿಯಿಟ್ಟು ಅಟ್ಟಹಾಸ ಮೆರೆದಿದ್ದರು.

ಖರೀದಿಸಿರುವ ಜಮೀನಿನಲ್ಲಿ ಕೆಲಸ ಮಾಡಿಸಲು ಹೋದ ಉದ್ಯಮಿ ಮೇಲೆ ಹಲ್ಲೆ ಮಾಡಲಾಗಿದೆ. ಸ್ಥಳೀಯ ವ್ಯಕ್ತಿ ಲಾಂಗ್ ಹಿಡಿದುಕೊಂಡು ಬರುತ್ತಿರುವ ದೃಶ್ಯ ಟಿವಿನೈನ್​ಗೆ ಲಭ್ಯವಾಗಿದ್ದು, ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ವೇಸ್ಟೆಜ್​​​​ ಸುಡಲು ಹಚ್ಚಿದ ಬೆಂಕಿಗೆ ಗ್ಯಾರೇಜ್​​​​ನಲ್ಲಿದ್ದ ಲಾರಿ ಬೆಂಕಿಗಾಹುತಿ

ವಿಜಯಪುರ: ನಗರದ ಶಿಕಾರಖಾನೆ ರಸ್ತೆ ಪಕ್ಕದ ಗ್ಯಾರೇಜ್​​ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ವೇಸ್ಟೆಜ್​ ​​ಸುಡಲು ಹಚ್ಚಿದ ಬೆಂಕಿಯಿಂದ ಗ್ಯಾರೇಜ್​​​​ನಲ್ಲಿದ್ದ ಲಾರಿ ಬೆಂಕಿಗಾಹುತಿ ಆಗಿದೆ. ನೂರ್ ಅಹ್ಮದ್ ಎಂಬುವರಿಗೆ ಸೇರಿದ ಗ್ಯಾರೇಜ್​​ನಲ್ಲಿದ್ದ ಇತರೆ ವಸ್ತುಗಳು ಬೆಂಕಿಗಾಹುತಿ ಆಗಿವೆ. ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು, ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.