AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿಯಂತೆ ಮಚ್ಚಿನಿಂದ ಯುವಕರ ಮೇಲೆ ಹಲ್ಲೆ ನಡೆಸಿದ ASI, FRI ದಾಖಲಾಗುತ್ತಿದ್ದಂತೆ ಎಸ್ಕೇಪ್

ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯ‌ ಎಎಸ್​ಐ ಶ್ರೀನಿವಾಸ್ ಎಂಬುವವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳ ರೀತಿ ಲಾಂಗ್​ನಿಂದ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ASI ಶ್ರೀನಿವಾಸ್ ವಿರುದ್ಧ FIR ದಾಖಲಾಗಿದೆ.

ರೌಡಿಯಂತೆ ಮಚ್ಚಿನಿಂದ ಯುವಕರ ಮೇಲೆ ಹಲ್ಲೆ ನಡೆಸಿದ ASI, FRI ದಾಖಲಾಗುತ್ತಿದ್ದಂತೆ ಎಸ್ಕೇಪ್
ಮಾಗಡಿ ರಸ್ತೆ ಪೊಲೀಸ್ ಠಾಣೆಯ‌ ASI ಶ್ರೀನಿವಾಸ್ ಮತ್ತು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ರಾಚಪ್ಪಾಜಿ ನಾಯ್ಕ್
| Edited By: |

Updated on:Oct 28, 2023 | 12:19 PM

Share

ಬೆಂಗಳೂರು, ಅ.28: ಜನ ಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಿದ್ದ ಪೊಲೀಸರೇ (Police) ರೌಡಿಗಳ ರೀತಿ ಲಾಂಗ್ ಬೀಸಿ ಅಟ್ಟಹಾಸ ಮೆರೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಯ‌ ಎಎಸ್​ಐ ಶ್ರೀನಿವಾಸ್ ಎಂಬುವವರು ದಯಾನಂದ್, ಶಶಿಧರ್ ಎಂಬ ಯುವಕರ ಮೇಲೆ ರೌಡಿಗಳ ರೀತಿ ಲಾಂಗ್​ನಿಂದ ಹಲ್ಲೆ (Assault) ನಡೆಸಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ASI ಶ್ರೀನಿವಾಸ್ ವಿರುದ್ಧ FIR ದಾಖಲಾಗಿದೆ. ಲಾಂಗ್​ನಿಂದ ಎಎಸ್​ಐ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅ.26ರ ರಾತ್ರಿ ವಿಜಯನಗರದ RPC ಲೇಔಟ್​​ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರೌಡಿಯಂತೆ ಲಾಂಗ್ ಬೀಸಿ ದರ್ಪ ಮೆರೆದಿದ್ದಾರೆ. ASI ಶ್ರೀನಿವಾಸ್ ಅವರ ಅಣ್ಣನ ಮಗ ಆನಂದ್, ತೇಜಸ್ವಿನಿ ಬಾರ್​ನಲ್ಲಿ ಮದ್ಯಪಾನ ಮಾಡಲು ಹೋಗಿದ್ದ. ಅದೇ ಬಾರಲ್ಲಿ ದಯಾನಂದ್ ಮತ್ತು ಶಶಿಧರ್ ಎಂಬ ಯುವಕರು ಬಿಯರ್ ಕುಡಿಯಲು ಹೋಗಿದ್ದರು. ಆಗ ಬಾರ್​ನಲ್ಲಿ ಆನಂದ್ ಮತ್ತು ದಯಾನಂದ್, ಶಶಿಧರ್ ನಡುವೆ ಚಿಕ್ಕ ಗಲಾಟೆಯಾಗಿದೆ. ಈ ವೇಳೆ ನೀವಿಬ್ಬರು ಯಾವ ಏರಿಯಾ ಎಂದು ಆನಂದ್ ಕೇಳಿದ್ದಾನೆ. ನಮ್ದು ಇದೇ ಏರಿಯಾ, ನಿಂದು ಯಾವ ಏರಿಯಾ ಎಂದು ದಯಾನಂದ್ ಕೇಳಿದ್ದಾನೆ. ಆಗ ನಂದು ಇದೇ ಏರಿಯಾ ಬೇಕಾದ್ರೆ ಬಾ ಮನೆ ತೋರಿಸ್ತೀನಿ ಎಂದು ಆನಂದ್ ಹೇಳಿದ್ದು ತನ್ನದೇ ಆಟೋದಲ್ಲಿ ಇಬ್ಬರನ್ನು ಕರೆದುಕೊಂಡು ನೇರವಾಗಿ‌ RPC ಲೇಔಟ್ 8th ಕ್ರಾಸ್ ನಲ್ಲಿರುವ ತನ್ನ ಚಿಕ್ಕಪ್ಪ ಶ್ರೀನಿವಾಸ್ ಮನೆ ಬಳಿ ಬಂದಿದ್ದಾನೆ. ಆಟೋದಿಂದ ಇಳಿದವನೇ ಆನಂದ್ ಜೋರಾಗಿ ಕೂಗಾಡಲು ಶುರು ಮಾಡಿದ್ದ. ಇವರಿಬ್ಬರೂ ಕಳ್ಳರು‌ ಚಿಕ್ಕಪ್ಪ ಬೇಗ ಬನ್ನಿ ಎಂದು ಕೂಗಿದ್ದಾನೆ. ತಕ್ಷಣ ಕೈಯಲ್ಲಿ ಮಚ್ಚು, ಲಾಠಿ  ಹಿಡಿದು ಓಡಿ ಬಂದ ASI ಶ್ರೀನಿವಾಸ್, ಓಡಿ ಹೋಗಿ ದಯಾನಂದ್ ಮತ್ತು ಶಶಿಧರ್ ಇಬ್ಬರನ್ನು ಹಿಡಿದು ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಮೈಸೂರು ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೈ ಕೈ ಮಿಲಾಯಿಸಿ, ದಾಯಾದಿಗಳಂತೆ ಬಡಿದಾಡಿಕೊಂಡ ಅಣ್ಣ ತಮ್ಮಂದಿರು -ಕಾರಣ ಏನು?

ಮಾತನಾಡಲೂ ಬಿಡದೆ ಏಕಾಏಕಿ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಮಚ್ಚಲ್ಲಿ ಕೈ, ಕಾಲು, ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಯುವಕರು ಕೆಳಗೆ ಬೀಳ್ತಿದ್ದಂತೆ ಲಾಠಿಯಿಂದ ಥಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ವಿಜಯನಗರ ಹೊಯ್ಸಳ ಸಿಬ್ಬಂದಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಇಬ್ಬರು ಯುವಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ASI ಶ್ರೀನಿವಾಸ್ ವಿರುದ್ದ FIR ದಾಖಲಾಗಿದ್ದು ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:16 pm, Sat, 28 October 23

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ