ಮೈಸೂರು ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೈ ಕೈ ಮಿಲಾಯಿಸಿ, ದಾಯಾದಿಗಳಂತೆ ಬಡಿದಾಡಿಕೊಂಡ ಅಣ್ಣ ತಮ್ಮಂದಿರು -ಕಾರಣ ಏನು?

ಮೈಸೂರು ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಅವರಿಗೆ ಮೂವರು ಸಹೋದರರು. ಅವರ ತಾತನಿಗೆ ಸೇರಿದ ಆಸ್ತಿ ವಿಚಾರವಾಗಿ ವಿಜಯಕುಮಾರ್ ಹಾಗೂ ಮೂವರು ಸಹೋದರರ ನಡುವೆ ಸಾಕಷ್ಟು ದಿನಗಳಿಂದ ಜಗಳ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ.

ಮೈಸೂರು ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೈ ಕೈ ಮಿಲಾಯಿಸಿ, ದಾಯಾದಿಗಳಂತೆ ಬಡಿದಾಡಿಕೊಂಡ ಅಣ್ಣ ತಮ್ಮಂದಿರು -ಕಾರಣ ಏನು?
ಮೈಸೂರು ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಅಣ್ಣ ತಮ್ಮಂದಿರು
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on: Oct 28, 2023 | 11:08 AM

ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು (family quarrel) ಅನ್ನೋ ಮಾತು ಸರ್ವಕಾಲಕ್ಕೂ ಪ್ರಸ್ತುತ. ಇದಕ್ಕೆ ಸಾಕ್ಷಿ ಮೈಸೂರಿನಲ್ಲಿ ನಡೆದಿರುವ ಘನಘೋರ ಗಲಾಟೆ‌. ಆಸ್ತಿಗಾಗಿ ಸಹೋದರ ನಡುವೆ ನಡೆದ ಗಲಾಟೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಹೊಡೆದಾಟ ಬಡಿದಾಟ ಅರುಚಾಟ ಕಿರುಚಾಟ. ಎಸ್ ಇದನ್ನು ನೋಡಿದ್ರೆ ಇವರೆಲ್ಲಾ ಮನುಷ್ಯರಾ ? ಅಥವಾ…. ಅನ್ನೋ ಅಭಿಪ್ರಾಯ ಮೂಡುತ್ತದೆ. ಅಂದ್ಹಾಗೆ ಇದು ಮೈಸೂರಿನ ಸಿದ್ದಲಿಂಗಪುರದಲ್ಲಿ (Mysore) ನಡೆದಿರುವ ಗಲಾಟೆ. ಇದು ಯಾರೋ ಅಪರಿಚಿತರ ನಡುವೆ ನಡೆದ ಗಲಾಟೆಯಲ್ಲ. ಸ್ವಂತ ಅಣ್ಣ ತಮ್ಮಂದಿರು ಹಾಗೂ ಅವರ ಸಂಬಂಧಿಕರ ನಡುವೆ ನಡೆದ ಗಲಾಟೆ.

ಇಲ್ಲಿ ಈ ರೀತಿ ಹಲ್ಲೆ ನಡೆಸಿರುವವರು ಕಾಂಗ್ರೆಸ್ ಮುಖಂಡ (Congress) ವಿಜಯಕುಮಾರ್ ಹಾಗೂ ಅವರ ಪುತ್ರ ಅಭಿಲಾಷ್. ವಿಜಯಕುಮಾರ್ ಅವರಿಗೆ ಮೂವರು ಸಹೋದರರು. ಅವರ ತಾತನಿಗೆ ಸೇರಿದ ಆಸ್ತಿ ವಿಚಾರವಾಗಿ ವಿಜಯಕುಮಾರ್ ಹಾಗೂ ಮೂವರು ಸಹೋದರರ ನಡುವೆ ಸಾಕಷ್ಟು ದಿನಗಳಿಂದ ಜಗಳ ನಡೆಯುತ್ತಲೆ ಇದೆಯಂತೆ. ಮೊನ್ನೆ ಇದು ತಾರಕಕ್ಕೇರಿದೆ. ಮಾತುಕತೆ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ.

ಘಟನೆಯಲ್ಲಿ ಅಂಬರೀಶ್, ಎಲ್ಲಮ್ಮ, ನವೀನ್ ಕುಮಾರ್, ಸುಷ್ಮಾ, ಜಗನ್ನಾಥ್, ಜಯಲಕ್ಷ್ಮಿಗೆ ಎಂಬುವವರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೊನ್ನೆ ವಿಜಯಕುಮಾರ್ ಅವರ ಸಹೋದರರ‌ ಜೊತೆ ಆಸ್ತಿ ವಿವಾದದ ಸಂಬಂಧ ಮಾತನಾಡುತ್ತಿದ್ದರಂತೆ ಸುಮಾರು ಅರ್ಧ ಗಂಟೆ ಮಾತುಕತೆ ನಡೆದಿತ್ತಂತೆ. ಈ ವೇಳೆ ವಿಜಯಕುಮಾರ್ ಮಗ ಅಭಿಲಾಷ್ ಬಂದು ಏಕಾಏಕಿ ತನ್ನ ಬಳಿ ಇದ್ದ ಕಬ್ಬಿಣದ ರಾಡಿನಿಂದ ಹಲ್ಲೆ‌ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮನ ಬಂದಂತೆ ಎಲ್ಲರಿಗೂ ಥಳಿಸಿದ್ದಾನೆ.

ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಇನ್ನು ಪೊಲೀಸರಿಗೆ ಸಿಕ್ಕಿಲ್ಲ ಆದರೆ ಆರೋಪಿಗಳನ್ನು ಉದ್ದೇಶಪೂರ್ವಕವಾಗಿಯೇ ಬಂಧಿಸುತ್ತಿಲ್ಲ ಅನ್ನೋದು ಹಲ್ಲೆಗೊಳಗಾದವರ ಆರೋಪ. ಇದೆಲ್ಲಾ ಏನೇ ಇರಲಿ ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರೇ ಈ ರೀತಿ ಹೊಡೆದಾಡಿಕೊಂಡಿರೋದು ನಿಜಕ್ಕೂ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್