ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ರೋಬಾಟ್ ನರ್ಸ್: ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ಕೋವಿಡ್ ನಂತಹ ಮಾರಣಾಂತಿಕ ಖಾಯಿಲೆ ಬಂದ ಸಂಧರ್ಭದಲ್ಲಿ ರೋಗಿಗಳ ಬಳಿಗೆ ವೈದ್ಯರು, ನರ್ಸ್​​ಗಳು ಹೋಗಲು ಕಷ್ಟವಾಗುತಿತ್ತು. ಈ ಕಾರಣದಿಂದ, ಆ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ಎನ್​ಐ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಮೋದ್ ಈ ರೋಬೋಟ್ ಆವಿಷ್ಕಾರ ಮಾಡಿದ್ದಾರೆ.

ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ರೋಬಾಟ್ ನರ್ಸ್: ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ
ಮೈಸೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ರೋಬಾಟ್ ನರ್ಸ್
Follow us
ದಿಲೀಪ್​, ಚೌಡಹಳ್ಳಿ
| Updated By: Ganapathi Sharma

Updated on:Oct 27, 2023 | 8:46 PM

ಮೈಸೂರು, ಅಕ್ಟೋಬರ್ 27: ಕೋವಿಡ್ ಸಾಂಕ್ರಾಮಿಕದ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಅದೇ ರೀತಿ ಇಂತಹ ಮಾರಣಾಂತಿಕ ಖಾಯಿಲೆಗಳು ಬಂದರೆ ಅದನ್ನು ಎದುರಿಸಲು ಹಲವು ಆವಿಷ್ಕಾರಗಳು ನಡೆಯುತ್ತಿವೆ. ಇದೀಗ ಮೈಸೂರಿನ (Mysuru) ಎಂಜಿನಿಯರಿಂಗ್ ವಿದ್ಯಾರ್ಥಿಗಳು (Engineering Students) ರೋಬಾಟ್ ನರ್ಸ್ (Robot Nurse) ಆವಿಷ್ಕಾರ ಮಾಡಿದ್ದಾರೆ. ಇದೇನಿದು ರೋಬೋಟ್ ನರ್ಸ್, ಇದು ಹೇಗೆ ಕೆಲಸ ಮಾಡುತ್ತದೆ ಎಂಬ ವಿವರ ಇಲ್ಲಿದೆ.

ಥೇಟ್ ನರ್ಸ್ ಮಾದರಿಯಲ್ಲಿ ಇರುವ ರೋಬೋ ನರ್ಸ್ ಆವಿಷ್ಕಾರ ಮಾಡಿರೋದು ಮೈಸೂರಿನ ಎನ್​ಐ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ. ಹೌದು, ರೋಬೋಟ್ ಯಂತ್ರಗಳನ್ನು ಇದೀಗಾ ಹಲವು ಕ್ಷೇತ್ರದಲ್ಲಿ ಬಳಸಲಾಗುತ್ತಿದೆ.‌ ಹಲವು ದೇಶಗಳಲ್ಲಿ ರೋಬೋವನ್ನ ವೈದ್ಯಕೀಯ ಕ್ಷೇತ್ರದಲ್ಲಿ ಬಳಸುತ್ತಿದ್ದಾರೆ. ಆದ್ರೆ ಭಾರತದಲ್ಲಿ‌ ಇಂತಹ ರೋಬೋಗಳ ಬಳಕೆ ಕಡಿಮೆ. ಅದರಲ್ಲೂ ಸರ್ಕಾರಿ ಸಂಸ್ಥೆಗಳಲ್ಲಿ‌‌ ಇವುಗಳ ಬಳಕೆ ಇಲ್ಲವೆ ಇಲ್ಲ. ಇದೀಗ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಈ ರೋಬೋ ನರ್ಸ್ ಬಳಸಲು ರೋಬೋಟ್ ನರ್ಸ್ ಆವಿಷ್ಕಾರ ಮಾಡಲಾಗಿದೆ. ಅದು ಕೂಡ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿದೆ.

ಕೋವಿಡ್ ನಂತಹ ಮಾರಣಾಂತಿಕ ಖಾಯಿಲೆ ಬಂದ ಸಂಧರ್ಭದಲ್ಲಿ ರೋಗಿಗಳ ಬಳಿಗೆ ವೈದ್ಯರು, ನರ್ಸ್​​ಗಳು ಹೋಗಲು ಕಷ್ಟವಾಗುತಿತ್ತು. ಈ ಕಾರಣದಿಂದ, ಆ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಸೂರಿನ ಎನ್​ಐ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಮೋದ್ ಈ ರೋಬೋಟ್ ಆವಿಷ್ಕಾರ ಮಾಡಿದ್ದಾರೆ.

ಇದನ್ನೂ ಓದಿ: ಹೆಚ್​ಡಿ ಕೋಟೆ: ಭೂ ಕಬಳಿಕೆ ಆರೋಪ, ನಾಲ್ವರು ಅಧಿಕಾರಿಗಳು ಅಮಾನತು

ಸದ್ಯ ಈ ರೋಬೋಟ್ ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಲಾಗುತ್ತಿದೆ.‌ ಈಗಿರುವ ರೋಬೋ ಸುಮಾರು 15-20 ಕೆ.ಜಿ ಯಷ್ಟು ತೂಕವನ್ನು ಹೊತ್ತೊಯ್ಯಹುದಾಗಿದೆ. ಜೊತೆ ರೋಬೋಗೆ ಕ್ಯಾಮರಾ ಹಾಗೂ ಡಿಸ್​ಪ್ಲೇ ಅಳವಡಿಸಲಾಗುತ್ತೆ. ಈ ಮೂಲಕ ವೈದ್ಯರು ರೋಬೋ ಮೂಲಕ ರೋಗಿಗಳಿಗೆ ಸೂಚನೆ ಕೊಡಬಹುದುದಾಗಿದೆ.‌ ಜೊತೆಗೆ ಪಲ್ಸ್ ರೇಟ್ ಹಾಗೂ ಮತ್ತಿತರ ಪರೀಕ್ಷೆಗಳನ್ನ ಮಾಡಬಹುದು.‌ ಇದರಿಂದ ರೋಗಿಗಳ ಚಿಕಿತ್ಸೆ ಕೊಡಲು ಸುಲಭವಾಗಲಿದೆ. ಈಗಲೂ ಸಾಕಷ್ಟು ವೈರಸ್ ಸೋಂಕು ಹರಡುವಿಕೆ ಇರುವುದರಿಂದ ಇಂತಹ ರೋಬೊದಿಂದ ಅನುಕೂಲವಾಗಲಿದೆ ಎಂದು ಮೆಡಿಕಲ್ ಕಾಲೇಜಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ಮೈಸೂರಿನ ವಿದ್ಯಾರ್ಥಿ ಮಾಡಿರುವ ಈ ರೋಬೋ ನರ್ಸ್ ಆವಿಷ್ಕಾರದಿಂದ ವೈದ್ಯಕೀಯ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲವಾಗಲಿದೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:37 pm, Fri, 27 October 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!