ದೆಹಲಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿದ ರೀತಿಯಲ್ಲೇ ಕೇರಳದಲ್ಲೂ ಶಾಲೆಗಳನ್ನು ಉನ್ನತೀಕರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೆಹಲಿ ಮಾದರಿ ಶಾಲೆಗಳ ಬಗ್ಗೆ ತಿಳಿಯಲು, ಯಾವೆಲ್ಲ ಯೋಜನೆಗಳನ್ನು ದೆಹಲಿ ಸರ್ಕಾರ ಅನುಷ್ಠಾನ ಮಾಡಿದೆ ಎಂಬುದನ್ನು ಅರಿಯಲು, ಕೇರಳ ಶಿಕ್ಷಣ ಇಲಾಖೆ ಕೆಲವರನ್ನು ಇಲ್ಲಿಗೆ ಕಳಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಹೇಳಿದ್ದರು. ಅತಿಶಿಯವರ ಈ ಹೇಳಿಕೆಗೆ ಕೇರಳದ ಶಿಕ್ಷಣ ಮತ್ತು ಕಾರ್ಮಿಕ ಇಲಾಖೆ ಸಚಿವ ವಾಸುದೇವನ್ ಶಿವನಕುಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡಿದ ವಾಸುದೇವನ್, ದೆಹಲಿ ಮಾದರಿ ಶಾಲೆಗಳ ಬಗ್ಗೆ ತಿಳಿದುಕೊಂಡು ಬನ್ನಿ ಎಂದು ಕೇರಳ ಶಿಕ್ಷಣ ಇಲಾಖೆ ಯಾರನ್ನೂ ಕಳಿಸಿಲ್ಲ. ಹಾಗೇ, ಕೇರಳ ಮಾದರಿ ಕಲಿಕೆಯ ಬಗ್ಗೆ ತಿಳಿಯಲು ಕಳೆದ ತಿಂಗಳು ದೆಹಲಿಯಿಂದ ಇಲ್ಲಿಗೆ ಬಂದಿದ್ದ ಅಧಿಕಾರಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡಲಾಯಿತು. ಆದರೆ ದೆಹಲಿಯಲ್ಲಿ ಆಪ್ ಶಾಸಕಾರದ ಅತಿಶಿ ಕೇರಳದ ಯಾವ ಅಧಿಕಾರಿಗಳಿಗೆ ಸ್ವಾಗತ ಕೋರಿ, ದೆಹಲಿ ಮಾದರಿ ಶಾಲೆಗಳ ಬಗ್ಗೆ ತಿಳಿಸಿದರು ಎಂಬುದು ಅರ್ಥವಾಗುತ್ತಿಲ್ಲ ಎಂದು ವಾಸುದೇವನ್ ಹೇಳಿಕೊಂಡಿದ್ದಾರೆ.
It was wonderful to host officials from Kerala at one of our schools in Kalkaji. They were keen to understand and implement our education model in their state.
This is @ArvindKejriwal Govt’s idea of nation building. Development through collaboration pic.twitter.com/FosI9KTKDW— Atishi (@AtishiAAP) April 23, 2022
ಫೋಟೋ ಹಂಚಿಕೊಂಡಿದ್ದ ಅತಿಶಿ
ಶನಿವಾರ ಆಪ್ ಶಾಸಕಿ ಅತಿಶಿ ತಮ್ಮ ಟ್ವಿಟರ್ನಲ್ಲಿ ಒಂದಷ್ಟು ಜನರ ಫೋಟೋವನ್ನು ಹಂಚಿಕೊಂಡಿದ್ದರು. ಕೇರಳದ ಶಿಕ್ಷಣ ಕ್ಷೇತ್ರದ ಒಂದಷ್ಟು ಅಧಿಕಾರಿಗಳು ದೆಹಲಿಗೆ ಭೇಟಿಕೊಟ್ಟಿದ್ದರು. ಅವರು ಇಲ್ಲಿನ ಶಿಕ್ಷಣ ಮಾದರಿಯನ್ನು ಅರ್ಥ ಮಾಡಿಕೊಂಡು, ವಾಪಸ್ ಹೋಗಿ ಕೇರಳದಲ್ಲಿ ಅದನ್ನು ಜಾರಿಗೆ ತರಲು ಉತ್ಸುಕರಾಗಿದ್ದಾರೆ. ಹೀಗೆ ಬಂದವರಿಗೆ ಕಲ್ಕಾಜಿ ಶಾಲೆಯಲ್ಲಿ ಆತಿಥ್ಯ ವಹಿಸಲಾಯಿತು. ಅರವಿಂದ್ ಕೇಜ್ರಿವಾಲ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೆ ತಂದು, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದ ಕ್ರಮಗಳ ಬಗ್ಗೆ ಅವರಿಗೆ ವಿವರಿಸಲಾಯಿತು ಎಂದು ಹೇಳಿದ್ದರು. ಆದರೆ ಕೇರಳದ ಶಿಕ್ಷಣ ಸಚಿವರು ಈಗ ತಾವ್ಯಾರನ್ನೂ ಕಳಿಸೇ ಇಲ್ಲ ಎನ್ನುತ್ತಿದ್ದಾರೆ.
ಹೀಗೆ ಕೇರಳದಿಂದ ಬಂದವರಲ್ಲಿ ಅಲ್ಲಿನ ಸಿಬಿಎಸ್ಇ ಸ್ಕೂಲ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನ ಪ್ರಾದೇಶಿಕ ಕಾರ್ಯದರ್ಶಿ ವಿಕ್ಟರ್ ಟಿ.ಐ. ಕೂಡ ಇದ್ದರು. ಅವರು ಅತಿಶಿಯವರಿಗೆ ಮೊದಲೇ ಪತ್ರ ಬರೆದು, ತಮ್ಮ ಶಾಲೆಗಳಲ್ಲೂ ದೆಹಲಿ ಮಾದರಿ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಇಚ್ಛಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ದೆಹಲಿ ಸರ್ಕಾರದ ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ಹಾಗೇ, ದೆಹಲಿಗೆ ಭೇಟಿ ಕೊಟ್ಟವರಿಗೆ ಅತಿಶಿಯವರೇ ಖುದ್ದಾಗಿ ನಿಂತು, ದೆಹಲಿ ಸರ್ಕಾರಿ ಶಾಲೆಗಳ ಕಲಿಕೆ ವ್ಯವಸ್ಥೆ, ಶಾಲಾ ಶಿಕ್ಷಕರ ಕೌಶಲ ವೃದ್ಧಿಗೆ ತೆಗೆದುಕೊಂಡಿರುವ ತರಬೇತಿ ಕ್ರಮಗಳ ಬಗ್ಗೆ ವಿವರಿಸಿದ್ದರು ಎಂದೂ ಹೇಳಲಾಗಿದೆ.
It was wonderful to host officials from Kerala at one of our schools in Kalkaji. They were keen to understand and implement our education model in their state.
This is @ArvindKejriwal Govt’s idea of nation building. Development through collaboration pic.twitter.com/FosI9KTKDW— Atishi (@AtishiAAP) April 23, 2022
ಇದನ್ನೂ ಓದಿ: ‘ಆಚಾರ್ಯ’ ತಂಡದಿಂದ ನಟಿ ಕಾಜಲ್ಗೆ ಅವಮಾನ; ಫ್ಯಾನ್ಸ್ ಮನದಲ್ಲಿ ಮೂಡಿದೆ ದೊಡ್ಡ ಅನುಮಾನ
Published On - 11:44 am, Mon, 25 April 22