Big News: ಅತ್ಯಾಚಾರದಿಂದ 7 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ

| Updated By: ಸುಷ್ಮಾ ಚಕ್ರೆ

Updated on: Aug 19, 2022 | 1:06 PM

ಆಪರೇಷನ್ ನಂತರ ಆಕೆಯ ಗರ್ಭದಲ್ಲಿದ್ದ ಭ್ರೂಣವು ಜೀವಂತವಾಗಿದ್ದರೆ, ಆ ಮಗುವಿಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಆಸ್ಪತ್ರೆಯು ಹೇಳಿದೆ.

Big News: ಅತ್ಯಾಚಾರದಿಂದ 7 ತಿಂಗಳ ಗರ್ಭಿಣಿಯಾದ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್ ಅನುಮತಿ
ಕೇರಳ ಹೈಕೋರ್ಟ್
Follow us on

ಕೊಚ್ಚಿ: ಒಂದುವೇಳೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದರೆ ಆ ಬಾಲಕಿಗೆ 28 ವಾರಗಳಾಗುವವರೆಗೆ ಗರ್ಭಪಾತ ಮಾಡಲು ಕೇರಳ ಹೈಕೋರ್ಟ್​ ಅನುಮತಿ ನೀಡಿದೆ. ಅಪ್ರಾಪ್ತೆ 28 ವಾರಗಳ (7 ತಿಂಗಳ) ಗರ್ಭಿಣಿಯಾಗಿದ್ದರೆ ಆಕೆಗೆ ವೈದ್ಯಕೀಯವಾಗಿ ಗರ್ಭಪಾತ (Abortion) ಮಾಡಲು ಅನುಮತಿ ನೀಡುವ ಮೂಲಕ ಕೇರಳ ಹೈಕೋರ್ಟ್​ (Kerala High Court) ಮಹತ್ವದ ಆದೇಶ ಹೊರಡಿಸಿದೆ. ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂಬ ಅತ್ಯಾಚಾರ ಸಂತ್ರಸ್ತ 14 ವರ್ಷದ ಬಾಲಕಿಯನ್ನು ಪರೀಕ್ಷಿಸಿದ ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ಅತ್ಯಾಚಾರದಿಂದ ಅಪ್ರಾಪ್ತೆ ಗರ್ಭ ಧರಿಸಿದರೆ ಆ ಗರ್ಭಧಾರಣೆಯಿಂದ ಆಕೆ ಬಹಳ ದುಃಖ ಪಡಬೇಕಾಗುತ್ತದೆ. ಈ ನೋವು ಆಕೆಯ ಮನಸಿನ ಮೇಲೆ ಗಂಭೀರವಾದ ಗಾಯವನ್ನು ಉಂಟುಮಾಡಬಹುದು ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

ಆಗಸ್ಟ್ 12ರಂದು ನ್ಯಾಯಾಲಯದ ಆದೇಶದ ಮೇರೆಗೆ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ವೈದ್ಯಕೀಯ ಮಂಡಳಿಯ ಶಿಫಾರಸಿನ ದೃಷ್ಟಿಯಿಂದ ವೈದ್ಯಕೀಯವಾಗಿ ಗರ್ಭಪಾತ ಮಾಡಲು ಅನುಮತಿ ನೀಡುವ ಸಂದರ್ಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ (ಸಂತ್ರಸ್ತ ಬಾಲಕಿಯ ತಾಯಿಗೆ) ಸೂಕ್ತವಾದ ಅಂಡರ್​ಟೇಕಿಂಗ್ ಸಲ್ಲಿಸುವಂತೆ ನಿರ್ದೇಶಿಸಿತು. ಬಳಿಕ ಆ ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯಕೀಯ ತಂಡಕ್ಕೆ ಅಧಿಕಾರ ನೀಡಲಾಯಿತು.

ಇದನ್ನೂ ಓದಿ: ವಿವಾಹಿತ ಮಹಿಳೆಯಂತೆ ಅವಿವಾಹಿತೆಗೂ ಗರ್ಭಪಾತದ ಹಕ್ಕಿದೆ: ಸುಪ್ರೀಂಕೋರ್ಟ್​

ಆಪರೇಷನ್ ನಂತರ ಆಕೆಯ ಗರ್ಭದಲ್ಲಿದ್ದ ಭ್ರೂಣವು ಜೀವಂತವಾಗಿದ್ದರೆ, ಆ ಮಗುವಿಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಆಸ್ಪತ್ರೆಯು ಹೇಳಿದೆ. ಇದರಿಂದಾಗಿ ಅದು ಆರೋಗ್ಯಕರ ಮಗುವಾಗಿ ಬೆಳೆಯುತ್ತದೆ. ಈಗಾಗಲೇ 28 ವಾರಗಳಾಗಿರುವುದರಿಂದ ಮಗು ಬದುಕುಳಿದರೂ ಉಳಿಯಬಹುದು ಅಥವಾ ಆಪರೇಷನ್ ವೇಳೆ ಸಾವನ್ನಪ್ಪುವ ಸಾಧ್ಯತೆಯೂ ಇದೆ.

ಅರ್ಜಿದಾರರು ಹುಟ್ಟಿದ ಮಗುವಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲದಿದ್ದರೆ, ರಾಜ್ಯ ಮತ್ತು ಅದರ ಏಜೆನ್ಸಿಗಳು ಸಂಪೂರ್ಣವಾಗಿ ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತವೆ. ಆ ಮಗುವಿಗೆ ವೈದ್ಯಕೀಯ ಬೆಂಬಲ ಮತ್ತು ಸೌಲಭ್ಯಗಳನ್ನು ನೀಡುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ