AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!

ಕೇರಳದ 60 ವರ್ಷದ ಅಬ್ದುಲ್ ಮಜೀದ್‌ಗೆ 20 ವರ್ಷಗಳ ನಂತರ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ಬಂದಿದೆ. 2005ರಲ್ಲಿ ಅರ್ಜಿ ಸಲ್ಲಿಸಿದ್ದ ಇವರಿಗೆ ಈಗ ನಿವೃತ್ತಿ ವಯಸ್ಸಾದ 60 ದಾಟಿದ ನಂತರ ಪತ್ರ ತಲುಪಿದೆ. 20 ವರ್ಷಗಳ ಹಿಂದೆ ಬರೆದ ಪರೀಕ್ಷೆಗೆ ಈಗ ಕೆಲಸದ ಆಫರ್ ಬಂದಿರುವುದನ್ನು ನೋಡಿ ಮಜೀದ್ ದಂಗಾಗಿದ್ದಾರೆ. ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

Kerala: ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸ; ಪರೀಕ್ಷೆ ಬರೆದ 20 ವರ್ಷಗಳ ನಂತರ ಬಂದ ನೇಮಕಾತಿ ಪತ್ರ!
ನಿವೃತ್ತಿಯಾಗುವ ವಯಸ್ಸಲ್ಲಿ ಸಿಕ್ತು ಸರ್ಕಾರಿ ಕೆಲಸImage Credit source: @viral.humours/Instagram
ಅಕ್ಷತಾ ವರ್ಕಾಡಿ
|

Updated on:Jun 03, 2026 | 11:54 AM

Share

ಕೇರಳದ 60 ವರ್ಷದ ವೃದ್ಧರೊಬ್ಬರ ಜೀವನದಲ್ಲಿ ನಡೆದಿರುವ ಘಟನೆ ಇಡೀ ದೇಶದ ಗಮನ ಸೆಳೆದಿದೆ. ತಾನು ನಿವೃತ್ತಿಯಾಗಬೇಕಾದ ವಯಸ್ಸಿನಲ್ಲಿ ಈ ವ್ಯಕ್ತಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ (Appointment Letter) ಕೈ ಸೇರಿದೆ. ಹೌದು, ಭರ್ತಿ 20 ವರ್ಷಗಳ ಹಿಂದೆ ಅವರು ಹಾಕಿದ್ದ ಅರ್ಜಿಗೆ ಈಗ ಸರ್ಕಾರ ಸ್ಪಂದಿಸಿದೆ. ಮಲಪ್ಪುರಂನ 60 ವರ್ಷದ ಅಬ್ದುಲ್ ಮಜೀದ್ ಎಂಬುವವರು ಭರ್ತಿ ಎರಡು ದಶಕಗಳ (20 ವರ್ಷ) ನಂತರ ಸರ್ಕಾರಿ ಕೆಲಸದ ನೇಮಕಾತಿ ಪತ್ರ ಪಡೆದಿದ್ದಾರೆ. ಆದರೆ, ದುರದೃಷ್ಟವಶಾತ್ ಈ ಪತ್ರ ಬರುವಷ್ಟರಲ್ಲಿ ಅವರು ಸರ್ಕಾರಿ ಸೇವೆಗೆ ಸೇರಬೇಕಾದ ವಯಸ್ಸಿನ ಮಿತಿಯನ್ನೇ ದಾಟಿಹೋಗಿದ್ದಾರೆ.

2005 ರ ಪರೀಕ್ಷೆ, 2026 ರ ನೇಮಕಾತಿ:

ಅಬ್ದುಲ್ ಮಜೀದ್ ಅವರು 2005 ರಲ್ಲಿ ಕೇರಳ ಸಾರ್ವಜನಿಕ ಸೇವಾ ಆಯೋಗ (KPSC) ನಡೆಸಿದ್ದ ‘ಅರೆಕಾಲಿಕ ಜೂನಿಯರ್ ಅರೇಬಿಕ್ ಶಿಕ್ಷಕ’ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅವರು ಶ್ರೇಣಿ ಪಟ್ಟಿ (Rank List) ಯಲ್ಲೂ ಸ್ಥಾನ ಪಡೆದಿದ್ದರು. ಸಾಮಾನ್ಯವಾಗಿ ಈ ರ್ಯಾಂಕ್ ಪಟ್ಟಿಗಳು 3 ವರ್ಷಗಳ ಕಾಲ ಮಾತ್ರ ಮಾನ್ಯವಾಗಿರುತ್ತವೆ. ಅದರಂತೆ ಇವರ ಪಟ್ಟಿಯ ಅವಧಿಯು 2008 ರಲ್ಲೇ ಮುಕ್ತಾಯಗೊಂಡಿತ್ತು.

ಆದರೆ ವ್ಯವಸ್ಥೆಯ ಆಮೆಗತಿಯ ಕೆಲಸ ಎಂತಹುದು ಎಂದರೆ, ರ್ಯಾಂಕ್ ಪಟ್ಟಿ ರದ್ದಾಗಿ 18 ವರ್ಷಗಳು ಕಳೆದ ನಂತರ, ಅಂದರೆ ಇತ್ತೀಚೆಗೆ (ಏಪ್ರಿಲ್ 24, 2026 ರಂದು) ಪಿಎಸ್‌ಸಿ ಮಜೀದ್ ಅವರಿಗೆ ನೇಮಕಾತಿಯ ಸಲಹಾ ಪತ್ರವನ್ನು (Advice Memo) ಕಳುಹಿಸಿದೆ. 20 ವರ್ಷಗಳ ಹಿಂದೆ ಬರೆದ ಪರೀಕ್ಷೆಗೆ ಈಗ ಕೆಲಸದ ಆಫರ್ ಬಂದಿರುವುದನ್ನು ನೋಡಿ ಮಜೀದ್ ದಂಗಾಗಿದ್ದಾರೆ.

ಕೈಗೆ ಬಂದರೂ ಬಾಯಿಗೆ ಬಾರದ ಉದ್ಯೋಗ:

ನೇಮಕಾತಿ ಪತ್ರ ಕೈ ಸೇರಿದಾಗ ಮಜೀದ್ ಅವರಿಗೆ ಅತೀವ ಸಂತೋಷವಾಗಿದ್ದರೂ, ಮರುಕ್ಷಣವೇ ಅದು ತೀವ್ರ ನಿರಾಶೆಗೆ ತಿರುಗಿತು. ಏಕೆಂದರೆ, ಅಧಿಕೃತ ದಾಖಲೆಗಳ ಪ್ರಕಾರ ಮೇ 27, 2026 ಕ್ಕೆ ಮಜೀದ್ ಅವರಿಗೆ ಭರ್ತಿ 60 ವರ್ಷ ತುಂಬಿದೆ. ನಿಯಮಗಳ ಪ್ರಕಾರ 60 ವರ್ಷ ದಾಟಿದ ವ್ಯಕ್ತಿ ಹೊಸದಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಲು ಅರ್ಹನಾಗಿರುವುದಿಲ್ಲ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಜನ್ಮ ದಿನಾಂಕದ ವ್ಯತ್ಯಾಸ:

ಪ್ರಸ್ತುತ ಉದ್ಯೋಗ ವಂಚಿತರಾಗಿರುವ ಮಜೀದ್ ಅವರಿಗೆ ಈಗ ಒಂದು ತಾಂತ್ರಿಕ ಅಂಶದಲ್ಲಿ ಸಣ್ಣ ಭರವಸೆ ಮೂಡಿದೆ. ಅವರ ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿಯ ಪ್ರಕಾರ ಅವರ ಜನ್ಮ ದಿನಾಂಕ ಮೇ 27, 1966 ಎಂದು ದಾಖಲಾಗಿದೆ (ಅದರಂತೆ ಅವರಿಗೆ 60 ವರ್ಷ ತುಂಬಿದೆ). ಆದರೆ, ತಮ್ಮ ನಿಜವಾದ ಜನ್ಮ ದಿನಾಂಕ ಮೇ 27, 1967 ಎಂದು ಮಜೀದ್ ವಾದಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಇಲಾಖೆ ಇವರ ಈ ದಾಖಲೆಯನ್ನು ಪರಿಶೀಲಿಸಿ ಜನ್ಮ ದಿನಾಂಕವನ್ನು ಸರಿಪಡಿಸಿದರೆ, ಇವರಿಗೆ ಸದ್ಯ 59 ವರ್ಷ ತುಂಬಿದಂತಾಗುತ್ತದೆ. ಆಗ ಇನ್ನು ಕನಿಷ್ಠ ಒಂದು ವರ್ಷವಾದರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಇವರಿಗೆ ಕಾನೂನಾತ್ಮಕವಾಗಿ ಅರ್ಹತೆ ಸಿಗುತ್ತದೆ.

ಸಚಿವರ ಗಮನಕ್ಕೆ ಹೋದ ಅರ್ಜಿ:

ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕನಿಷ್ಠ ಒಂದು ವರ್ಷವಾದರೂ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ಅಬ್ದುಲ್ ಮಜೀದ್ ಅವರು ಕೇರಳದ ಶಿಕ್ಷಣ ಸಚಿವರು ಹಾಗೂ ಸ್ಥಳೀಯ ಶಾಸಕ ಮತ್ತು ವಕೀಲರಾದ ಎನ್. ಶಂಸುದ್ದೀನ್ ಅವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದ್ದಾರೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:53 am, Wed, 3 June 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್