ತಮಿಳುನಾಡಿನಿಂದ ಬಂದಿದ್ದ ಪ್ರವಾಸಿ ವಾಹನವೊಂದು ಆದಿಮಲಿ ಬಳಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 11 ಮಂದಿ ಗಾಯಗೊಂಡಿದ್ದು, ಒಂದು ವರ್ಷದ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ವಾಹನದಲ್ಲಿ 14 ಜನರಿದ್ದರು ಮತ್ತು ಅವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎಂದು ಆದಿಮಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತವು ಮಂಗಳವಾರ ಸಂಜೆ 6 ರ ಸುಮಾರಿಗೆ ಸಂಭವಿಸಿದೆ ಮತ್ತು ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ನಾವು ಇನ್ನೂ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.
ಪ್ರವಾಸಿಗರು ತಮಿಳುನಾಡಿನ ಥೇಣಿಯಿಂದ ಬಂದಿದ್ದು, ಇಲ್ಲಿನ ಮಂಕುಲಂಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಲಾರಿ ಚಾಲಕ ಸಾವು
ಕೇರಳದ ಮತ್ತೊಂದು ರಸ್ತೆ ಅಪಘಾತದಲ್ಲಿ, ತಮಿಳುನಾಡಿನ 27 ವರ್ಷದ ಲಾರಿ ಚಾಲಕ ಮಂಗಳವಾರ ಪಟ್ಟಿಕ್ಕಾಡ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವನ್ನಪ್ಪಿದ್ದಾರೆ.
ಮುಂಜಾನೆ 2.30 ರ ಸುಮಾರಿಗೆ ವ್ಯಕ್ತಿ ತನ್ನ ವಾಹನವನ್ನು ಸರಿಪಡಿಸುತ್ತಿದ್ದಾಗ ಮತ್ತೊಂದು ಲಾರಿ ಲಾರಿ ಬಂದು ಗುದ್ದಿದ ಪರಿಣಾಮ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಬೆಳಗಾವಿಯಲ್ಲಿ ಹೆಚ್ಚಾದ ಅಪಘಾತ ಪ್ರಕರಣಗಳು; ಕೇವಲ ಮೂರು ದಿನದಲ್ಲಿ 25 ಸಾವು
ಭೀಕರ ರಸ್ತೆ ಅಪಘಾತ; ಖ್ಯಾತ ನಟಿ ಅರುಂಧತಿಗೆ ತೀವ್ರ ಪೆಟ್ಟು
ತಮಿಳು ಹಾಗೂ ಮಲಯಾಳಂ ನಟಿ ಅರುಂಧತಿ ನಾಯರ್ ಅವರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಕೇರಳದಲ್ಲಿ ಈ ಅಪಘಾತ ಸಂಭವಿಸಿದೆ. ಅವರ ಸಹೋದರಿ ಆರತಿ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರತಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಅರುಂಧತಿ ಅವರ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ.
ಕೇರಳದ ಕೊವಲಂ ಬೈಪಾಸ್ ಬಳಿ ಈ ಅಪಘಾತ ಸಂಭವಿಸಿದೆ. ಅರುಂಧತಿ ತಲೆಗೆ ಗಾಯ ಉಂಟಾಗಿದೆ. ಅವರು ಸಹೋದರನ ಜೊತೆ ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅರುಂಧತಿ ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ತಲೆಗೆ ಏಟಾಗಿದೆ ಎನ್ನುವ ವಿಚಾರದಿಂದ ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ