ಗಣರಾಜ್ಯೋತ್ಸವದಂದು ಪಂಜಾಬ್ ಸಿಎಂ ಭಗವಂತ್ ಮಾನ್​ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಉಗ್ರ ಗುರು ಪತ್ವಂತ್​ಸಿಂಗ್ ಪನ್ನು

ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್​(Bhagwant Mann)ರನ್ನು ಕೊಲ್ಲುವುದಾಗಿ ಉಗ್ರ ಗುರು ಪತ್ವಂತ್​ ಸಿಂಗ್ ಪನ್ನು(Gurpatwant Singh Pannun)  ಬೆದರಿಕೆ ಹಾಕಿದ್ದಾನೆ. ಗ್ಯಾಂಗ್​ಸ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಡಿಜಿಪಿ ಗೌರವ್ ಯಾದವ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಪಂಜಾಬ್ ಪೊಲೀಸರು ದರೋಡೆಕೋರರ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದ್ದಾರೆ.

ಗಣರಾಜ್ಯೋತ್ಸವದಂದು ಪಂಜಾಬ್ ಸಿಎಂ ಭಗವಂತ್ ಮಾನ್​ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಉಗ್ರ ಗುರು ಪತ್ವಂತ್​ಸಿಂಗ್ ಪನ್ನು
ಗುರುಪತ್ವಂತ್ ಸಿಂಗ್

Updated on: Jan 16, 2024 | 12:24 PM

ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್​(Bhagwant Mann)ರನ್ನು ಕೊಲ್ಲುವುದಾಗಿ ಉಗ್ರ ಗುರು ಪತ್ವಂತ್​ ಸಿಂಗ್ ಪನ್ನು(Gurpatwant Singh Pannun)  ಬೆದರಿಕೆ ಹಾಕಿದ್ದಾನೆ. ಗ್ಯಾಂಗ್​ಸ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಡಿಜಿಪಿ ಗೌರವ್ ಯಾದವ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಪಂಜಾಬ್ ಪೊಲೀಸರು ದರೋಡೆಕೋರರ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿದ್ದಾರೆ.

ಕಳೆದ ಜೂನ್‌ನಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಮತ್ತೊಬ್ಬ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಇದೀಗ ಅಮೆರಿಕದಲ್ಲಿ ಪನ್ನು ಹತ್ಯೆಯ ಸಂಚು ವಿಫಲವಾಗಿರುವುದಾಗಿ ವರದಿಯಾಗಿದೆ.
ನಿಜ್ಜರ್ ಹತ್ಯೆಯ ನಂತರ ಅಲ್ಲಿನ ಅಂದರೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು.

ರಾಮ ಮಂದಿರ ಶಂಕು ಸ್ಥಾಪನೆ ಕುರಿತು ಪನ್ನು ಹೇಳಿಕೆ ನೀಡಿದ್ದ ಒಂದು ವಾರದ ಬಳಿಕ ಹೇಳಿಕೆ ಬಂದಿದೆ. ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭವು ಅತ್ಯಂತ ಅಪವಿತ್ರ, ಭಕ್ತಿಹೀನ, ಅನ್ಯಾಯದ ಸಮಾರಂಭವಾಗಿದೆ ಎಂದು ಹೇಳಿದ್ದ.

ಡಿಸೆಂಬರ್ 13 ಅಥವಾ ಅದಕ್ಕಿಂತ ಮೊದಲು ಭಾರತೀಯ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರರು ಹೇಳಿಕೆ ನೀಡಿದ್ದ ವಿಡಿಯೋ ಬಿಡುಗಡೆ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:04 pm, Tue, 16 January 24