Video: ದಣಿವರಿಯದ ಮೇಷ್ಟ್ರು… 85ರ ಇಳಿ ವಯಸ್ಸಲ್ಲೂ ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಪಾಠ ಹೇಳುತ್ತಿದ್ದಾರೆ!

|

Updated on: Jul 25, 2023 | 6:10 PM

1960ರಲ್ಲಿ ಸರಕಾರಿ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿ ಖಮ್ಮಂ ಜಿಲ್ಲೆಯ ಹಲವೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು ಹಾಗೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 85ರ ಹರೆಯದಲ್ಲೂ ಯಾವುದೇ ಹಿಂಜರಿಕೆಯಿಲ್ಲದೆ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಿದ್ದಾರೆ.

Video: ದಣಿವರಿಯದ ಮೇಷ್ಟ್ರು... 85ರ ಇಳಿ ವಯಸ್ಸಲ್ಲೂ ಶಾಲಾ ವಿದ್ಯಾರ್ಥಿಗಳಿಗೆ ಇನ್ನೂ ಪಾಠ ಹೇಳುತ್ತಿದ್ದಾರೆ!
ನಿವೃತ್ತ ಶಾಲಾ ಮೇಷ್ಟ್ರು!
Follow us on

ಖಮ್ಮಂ, ಜುಲೈ 25: ಸರಕಾರಿ ಶಾಲೆಯಲ್ಲಿ ದಣಿವರಿಯದ ಶಿಕ್ಷಕರಾಗಿದ್ದ ಇವರು ತಮ್ಮ ಸೇವಾ ಕಾಲಮಿತಿ ಮೀರಿದ್ದರೂ ವೃತ್ತಿಯಲ್ಲಿ ಅದೇ ಆಸಕ್ತಿ ಉಳಿಸಿಕೊಂಡಿದ್ದಾರೆ. ತಮ್ಮ ಹುಟ್ಟೂರಾದ ಸಿದ್ದನೇನಿ ಗುಡೆಂ ಸರಕಾರಿ ಶಾಲೆಯಲ್ಲಿ (School) ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೂಲಕ ಹಲವು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ದಣಿವರಿಯದ ಈ ಶಿಕ್ಷಕ ನಿವೃತ್ತರಾಗಿದ್ದರೂ, ತಾವು ಹೇಳಿಕೊಡುವ ಪಾಠ ಎಷ್ಟೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರ ಬದುಕಿಗೆ ಬುನಾದಿ ಹಾಕುತ್ತದೆ ಎಂಬ ಸಂಕಲ್ಪದಿಂದ… 85ರ ಹರೆಯದಲ್ಲೂ ನಿವೃತ್ತ (Retirement) ಸರ್ಕಾರಿ ನೌಕರ ರಾಮರಾವ್ ಅವರು ತಮ್ಮ ಶೈಕ್ಷಣಿಕ ಬೋಧನೆಯಿಂದ ಎಷ್ಟೋ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಿದ್ದಾರೆ. ಅದೇ ಆಶಯದೊಂದಿಗೆ ದಣಿವರಿಯದ ಶಿಕ್ಷಕರಾಗಿ ಜೀವನ ಮುಂದುವರಿಸಿದ್ದಾರೆ. ಖಮ್ಮಂ ಜಿಲ್ಲೆಯ ಮಧಿರಾ ಮಂಡಲದ ಸಿದ್ಧನೇನಿ ಗುಡೆಂ ಗ್ರಾಮದ ಏಡುಕೊಂಡಲ ರಾಮರಾವ್ ಅವರು (Khammam telugu Teacher) ಎರ್ರು ಪಾಲೆಂ ಮಂಡಲದ ರಾಮಣ್ಣಪಾಲೆಂ ಸರಕಾರಿ ಪ್ರೌಢಶಾಲೆಯಲ್ಲಿ ತೆಲುಗು ಶಿಕ್ಷಕರಾಗಿ 1997ರಲ್ಲಿ ನಿವೃತ್ತರಾದರು. ಅಂದಿನಿಂದಲೂ ತಮ್ಮ ಊರಾದ ಮಧಿರ ಮಂಡಲ ಸಿದ್ಧಿನೇನಿಗುಡೆಂ ಸರಕಾರಿ ಪ್ರೌಢಶಾಲೆಯಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ವಿದ್ಯಾರ್ಥಿಗಳಿಗೆ ತೆಲುಗು ಪಾಠ ಹೇಳಿಕೊಡುತ್ತಿದ್ದಾರೆ.

1960ರಲ್ಲಿ ಸರಕಾರಿ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರಿ ಖಮ್ಮಂ ಜಿಲ್ಲೆಯ ಹಲವೆಡೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು ಹಾಗೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 85ರ ಹರೆಯದಲ್ಲೂ ಅವರು ಯಾವುದೇ ಹಿಂಜರಿಕೆಯಿಲ್ಲದೆ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ತೆಲುಗು ಹಾಡುಗಳನ್ನು ಹೇಳಿಕೊಡುತ್ತಿದ್ದಾರೆ. ಬೋಧನೆಗೆ ಸೀಮಿತವಾಗದೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮದ ದಾನಿಗಳನ್ನು ಒಗ್ಗೂಡಿಸಿ ಶಾಲೆಗೆ ಸೌಲಭ್ಯ ಕಲ್ಪಿಸುವ ಮೂಲಕ ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ ಏಳುಕೊಂಡಲ ರಾಮರಾವ್.

ಶಾಲೆಯಲ್ಲಿ ಪ್ರತಿಭೆ ತೋರಿದ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಹೇಳಿಕೊಡುವ ಮೂಲಕ ಹಲವು ಸರಕಾರಿ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. 85ರ ಹರೆಯದಲ್ಲೂ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಇವರ ಸೇವೆಗೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸೇರಿದಂತೆ ಹಲವಾರು ಮಂದಿಯ ಮೆಚ್ಚುಗೆ ವ್ಯಕ್ತವಾಗಿದೆ. ಬದುಕಿರುವವರೆಗೂ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಲೇ ಇರುತ್ತೇನೆ ಎಂದು ನಿವೃತ್ತ ಮೇಷ್ಟ್ರು ರಾಮರಾವ್ ಹೇಳಿದರು.

 

Published On - 6:09 pm, Tue, 25 July 23