Indian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ

Lord Karan Bilimoria at Hyderabad: ಭಾರತದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿದ್ದು 2060ರಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ ಹೈದರಾಬಾದ್​ನಲ್ಲಿ ಹೇಳಿದ್ದಾರೆ.

Indian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2023 | 4:09 PM

ಹೈದರಾಬಾದ್, ಜುಲೈ 25: ಭಾರತ 2075ರೊಳಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ (Biggest Economy) ಎಂದು ಐಎಂಎಫ್, ಗೋಲ್ಡ್​ಮ್ಯಾನ್ ಸ್ಯಾಕ್ಸ್ ಮೊದಲಾದ ಜಾಗತಿಕ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಇದೀಗ ಬ್ರಿಟನ್ ಸಂಸದರೊಬ್ಬರು ಭಾರತ 2060ರೊಳಗೆಯೇ ವಿಶ್ವದ ನಂಬರ್ ಒನ್ ಆರ್ಥಿಕ ದೇಶವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ‘ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಬಹಳ ಶೀಘ್ರದಲ್ಲಿ ಭಾರತ ವಿಶ್ವದ ಮೂರು ಸೂಪರ್​ಪವರ್​ಗಳಲ್ಲಿ ಒಂದೆನಿಸಲಿದೆ’ ಎಂದು ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ ಹೇಳಿದ್ದಾರೆ.

ಇಲ್ಲಿಯ ಬೇಗಂಪೇಟ್​ನಲ್ಲಿರುವ ಹೈದರಾಬಾದ್ ಪಬ್ಲಿಕ್ ಸ್ಕೂಲ್​ನ (ಎಚ್​ಪಿಎಸ್) ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಲಾರ್ಡ್ ಕರಣ್ ಅವರು, ಬ್ರಿಟನ್ ದೇಶವನ್ನು ಹಿಂದಿಕ್ಕಿ ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿದೆ ಎಂದು ಹೇಳಿದರು. ಹಾಗೆಯೇ, ಚೀನಾವನ್ನೂ ಭಾರತ ಹಿಂದಿಕ್ಕಬಹುದು ಎನ್ನುತ್ತಾರೆ ಇವರು.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

‘ಮುಂದಿನ 25 ವರ್ಷದಲ್ಲಿ ಭಾರತದ ಜಿಡಿಪಿ 32 ಟ್ರಿಲಿಯನ್ ಡಾಲರ್​ಗೆ ಏರುತ್ತದೆ. ಆಗ ಭಾರತ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶವಾಗುತ್ತದೆ. ನಾನು ಇನ್ನೂ ಒಂದು ಹೆಜ್ಜೆ ಮುಂದಿನದ್ದು ಹೇಳುತ್ತೇನೆ. 2060ರಷ್ಟರಲ್ಲಿ ಭಾರತ ವಿಶ್ವದ ಅತಿದಡೊ್ಡ ಆರ್ಥಿಕತೆಯ ದೇಶವಾಗಲಿದೆ ಎಂಬುದು ನನ್ನ ಭಾವನೆ’ ಎಂದು ಬ್ರಿಟನ್​ನ ಸಂಸದರಾದ ಬಿಲಿಮೋರಿಯಾ ಅಭಿಪ್ರಾಯಪಟ್ಟಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂದರೆ ಇವರ ಪ್ರಕಾರ ಚೀನಾವನ್ನೂ ಭಾರತ ಹಿಂದಿಕ್ಕಿ ಜಗತ್ತಿನ ಟಾಪ್ ಸೂಪರ್ ಪವರ್ ದೇಶವಾಗುತ್ತದೆ.

ಕೋಬ್ರಾ ಬೀರ್ ಸಂಸ್ಥೆಯ ಸ್ಥಾಪಕರಾದ ಕರಣ್ ಬಿಲಿಮೋರಿಯಾ ಅವರಿಗೆ ಬ್ರಿಟನ್ ದೇಶ ಲಾರ್ಡ್ ಬಿರುದು ಕೊಟ್ಟು ಸನ್ಮಾನಿಸಿದೆ. ಭಾರತದಲ್ಲೂ ಕೋಬ್ರಾ ಬೀರ್ ಅನ್ನು ತರುವ ಉದ್ದೇಶದಲ್ಲಿರುವ ಲಾರ್ಡ್ ಕರಣ್ ಬಿಲಿಮೋರಿಯಾ ಅವರು ಹೈದರಾಬಾದ್ ಪಬ್ಲಿಕ್ ಸ್ಕೂಲ್​ನ ಮಾಜಿ ವಿದ್ಯಾರ್ಥಿಯೂ ಹೌದು.

ಇದನ್ನೂ ಓದಿ: Tax Collection: ತೆರಿಗೆ ದರ ಹೆಚ್ಚಿಸಿಲ್ಲ, ಆದರೂ ತೆರಿಗೆ ಸಂಗ್ರಹ ಹೆಚ್ಚಿಸಿದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಐಎಂಫ್ ಮತ್ತು ಗೋಲ್ಡ್​ಮ್ಯಾನ್ ಸ್ಯಾಕ್ಸ್ ನುಡಿದ ಭವಿಷ್ಯವೇನು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಜಾಗತಿಕ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ದೈತ್ಯ ಗೋಲ್ಡ್​ಮ್ಯಾನ್ ಸ್ಯಾಕ್ಸ್ ಎರಡೂ ಕೂಡ ಭಾರತ 2075ರಲ್ಲಿ ಅಗ್ರಮಾನ್ಯ ಆರ್ಥಿಕ ದೇಶವಾಗಲಿದೆ ಎಂದು ಭವಿಷ್ಯ ನುಡಿದಿವೆ. ಅವುಗಳ ಪ್ರಕಾರ 2075ರಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ ಭಾರತ ಮತ್ತು ಅಮೆರಿಕ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿರಲಿವೆ. 2075ರಲ್ಲಿ ಚೀನಾದ ಜಿಡಿಪಿ 57 ಟ್ರಿಲಿಯನ್ ಡಾಲರ್, ಭಾರತದ ಜಿಡಿಪಿ 52.5 ಟ್ರಿಲಿಯನ್ ಡಾಲರ್ ಮತ್ತು ಅಮೆರಿಕದ ಜಿಡಿಪಿ 51.5 ಟ್ರಿಲಿಯನ್ ಡಾಲರ್ ಆಗಬಹುದು ಎಂದು ಇವು ಅಂದಾಜು ಮಾಡಿವೆ.

ಹಾಗೆಯೇ, ಜಾಗತಿಕ ಟಾಪ್ ದೇಶಗಳ ಪಟ್ಟಿಯಲ್ಲಿ 2075ರಲ್ಲಿ ಗಮನಾರ್ಹ ಬದಲಾವಣೆಗಳಾಗುವ ನಿರೀಕ್ಷೆ ಇದೆ. ಇಂಡೋನೇಷ್ಯಾ, ನೈಜೀರಿಯಾ, ಬ್ರೆಜಿಲ್ ದೇಶಗಳೂ ಅಗ್ರಪಂಕ್ತಿಗೆ ಹೋಗಿ ನಿಲ್ಲಬಹುದು ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್