ಕೊಚ್ಚಿ ಬಾಂಬ್ ಸ್ಫೋಟ: ಡೊಮಿನಿಕ್ ಮಾರ್ಟಿನ್​​ಗೆ ನ.29ರವರೆಗೆ ನ್ಯಾಯಾಂಗ ಬಂಧನ, ಕಾನೂನು ನೆರವು ನಿರಾಕರಿಸಿದ ಆರೋಪಿ

|

Updated on: Nov 15, 2023 | 3:28 PM

ಕೊಚ್ಚಿ ಬಾಂಬ್ ಸ್ಫೋಟದ ಆರೋಪಿ ಡೊಮಿನಿಕ್ ಮಾರ್ಟಿನ್ ಅವರನ್ನು ಕೇರಳ ಕೋರ್ಟ್​​ ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಳಮಶ್ಶೇರಿಯಲ್ಲಿ ನಡೆದ ಸ್ಫೋಟದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಟಿನ್ ಅವರನ್ನು ಬಂಧಿಸಲಾಗಿತ್ತು. ಆರೋಪಿಯನ್ನು ಬುಧವಾರ ಬೆಳಗ್ಗೆ 11ಕ್ಕೆ ಕೋರ್ಟ್​ಗೆ ಹಾಜರುಪಡಿಸಿದ್ದಾರೆ.

ಕೊಚ್ಚಿ ಬಾಂಬ್ ಸ್ಫೋಟ: ಡೊಮಿನಿಕ್ ಮಾರ್ಟಿನ್​​ಗೆ ನ.29ರವರೆಗೆ ನ್ಯಾಯಾಂಗ ಬಂಧನ, ಕಾನೂನು ನೆರವು ನಿರಾಕರಿಸಿದ ಆರೋಪಿ
ಕೊಚ್ಚಿ ಬಾಂಬ್ ಸ್ಫೋಟ, ಡೊಮಿನಿಕ್ ಮಾರ್ಟಿನ್
Follow us on

ಕೊಚ್ಚಿ, ನ.15: ಕೊಚ್ಚಿ ಬಾಂಬ್ ಸ್ಫೋಟದ ಆರೋಪಿ ಡೊಮಿನಿಕ್ ಮಾರ್ಟಿನ್ (Dominic Martin) ಅವರನ್ನು ಕೇರಳ ಕೋರ್ಟ್​​ ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಳಮಶ್ಶೇರಿಯಲ್ಲಿ ನಡೆದ ಸ್ಫೋಟದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಟಿನ್ ಅವರನ್ನು ಬಂಧಿಸಲಾಗಿತ್ತು. ಆರೋಪಿಯನ್ನು ಬುಧವಾರ ಬೆಳಗ್ಗೆ 11ಕ್ಕೆ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾದ ಡೊಮಿನಿಕ್ ಮಾರ್ಟಿನ್ ಅವರಿಗೆ ಯಾವುದೇ ಕಾನೂನು ಸಹಾಯ ಬೇಕಾದರು ಪಡೆಯಬಹುದು ಎಂದು ಕೋರ್ಟ್​​ ಹೇಳಿದೆ.

ಆದರೆ ಡೊಮಿನಿಕ್ ಮಾರ್ಟಿನ್ ನನಗೆ ಯಾವುದೇ ಕಾನೂನು ಸಹಾಯದ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಕೋರ್ಟ್​​​ ಆರೋಪಿಗೆ ಕಾನೂನು ಸಹಾಯ ಬೇಕಾದರೆ ನೀಡಬಹುದು ಎಂದು ಹೇಳಿತ್ತು. ಇನ್ನು ಡೊಮಿನಿಕ್ ಮಾರ್ಟಿನ್ ಡಿಸಿಪಿ ಶಶಿಧರನ್, ಎಸಿಪಿ ರಾಜ್‌ಕುಮಾರ್ ಮತ್ತು ಕಳಮಶ್ಶೇರಿ ಸಿಐ ವಿಬಿನ್ ದಾಸ್ ಅವರ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಮೂರು ಜನ ತನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಕೋರ್ಟ್​​​ ಮುಂದೆ ತಿಳಿಸಿದ್ದಾರೆ.

ಪೊಲೀಸರು ಕೂಡ ಕೋರ್ಟ್​​​ ಮುಂದೆ ಡೊಮಿನಿಕ್ ಮಾರ್ಟಿನ್ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಮಾರ್ಟಿನ್ ತುಂಬಾ ಬುದ್ಧಿವಂತ ಹಾಗೂ ಶ್ರಮಜೀವಿ, ಉತ್ತಮ ಸಂಬಳದ ಕೆಲಸವು ಕೂಡ ಅವರಿಗಿತ್ತು. ಈ ಕೃತ್ಯ ಮಾಡಲು ಅವರಿಗೆ ಯಾರು ಬ್ರೈನ್​​ ವಾಶ್ ಮಾಡಿಲ್ಲ ಎಂದು ಹೇಳಿದ್ದಾರೆ. ಬಾಂಬ್​​ ಸ್ಫೋಟದ ಬಗ್ಗೆ ತನಿಖೆ ಮಾಡಲು ಮಾರ್ಟಿನ್ ಮನೆಗೆ ಮತ್ತು ಸ್ಫೋಟದ ಸ್ಥಳಕ್ಕೆ ಕರೆದುಕೊಂಡು ಹೋಗಿ ತನಿಖೆ ಮಾಡಿದ್ದಾರೆ. ತನಿಖಾ ವರದಿಗಳ ಪ್ರಕಾರ ಈ ಸ್ಫೋಟ ರಿಮೋಟ್​​​ ಕಂಟ್ರೋಲ್​​ನಿಂದ ಸುಧಾರಿತ ಸ್ಫೋಟಕ ಸಾಧನದ ಮೂಲಕ ನಡೆಸಿದ್ದಾರೆ.

ಇದನ್ನೂ ಓದಿ:ಕಳಮಶ್ಶೇರಿ ಸ್ಫೋಟ; ಆರೋಪಿ ಡೊಮಿನಿಕ್ ಮನೆಯಲ್ಲೇ ತಯಾರಿಸಿದ್ದ ಬಾಂಬ್

ಬಾಂಬ್​​​ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾರ್ಟಿನ್ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಮತ್ತು ಸ್ಫೋಟಕ ವಸ್ತುಗಳ  ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಆರೋಪಿ ಐಇಡಿ ಸ್ಫೋಟಕ ತಯಾರಿಸಲು ಖರೀದಿಸಿದ ವಸ್ತುಗಳ ಬಿಲ್​​ನ್ನು ವಶಪಡಿಸಲಾಗಿದೆ. ಯಾವೆಲ್ಲ ಸ್ಥಳದಿಂದ ಈ ವಸ್ತುಗಳನ್ನು ಪಡೆದಿದ್ದಾನೆ. ಆ ಎಲ್ಲ ಸ್ಥಳಗಳಲ್ಲಿ ವಿಡಿಯೋ ಮಾಡಲಾಗಿದೆ.

ಕಳಮಶ್ಶೇರಿಯ ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಫೋಟದ ಹೊಣೆಯನ್ನು ಮಾರ್ಟಿನ್ ಅವರೇ ಹೊತ್ತುಕೊಂಡಿದ್ದು. ಈ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಇನ್ನು ಈ ಸಮಾವೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದರು. ಸ್ಫೋಟದ ನಂತರ ಬಾಲಕಿ ಸೇರಿ ಐದು ಜನ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತನಿಖೆಗಾಗಿ 20 ಸದಸ್ಯರ ತನಿಖಾ ತಂಡವನ್ನು ರಚಿಸಿದ್ದಾರೆ. ಇದರ ಜತೆಗೆ ಸಾವನ್ನಪ್ಪಿರುವವರ ಕುಟುಂಬಕ್ಕೆ 5 ಲಕ್ಷ ಪರಿಹಾರ ಹಾಗೂ ಗಾಯಳುಗಳ ಆಸ್ಪತ್ರೆ ಖರ್ಚನ್ನು ಸರ್ಕಾರವೇ ವಹಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Wed, 15 November 23