ಪತ್ನಿ, ಮಗಳಿಗೆ ಮಹಿಳಾ ದಿನದ ಶುಭಕೋರಿದ ವಿರಾಟ್ ಕೊಹ್ಲಿ; #AnushkaSharma ಟ್ರೆಂಡಿಂಗ್

|

Updated on: Mar 08, 2021 | 8:17 PM

ತಮ್ಮ ಮಗು ಹುಟ್ಟುವುದನ್ನು ನೋಡುವ ಸಂದರ್ಭ ಮೈ ನಡುಕ ಹುಟ್ಟಿಸುವ, ನಂಬಲಸದಳ ಮತ್ತು ಅಭೂತಪೂರ್ವ ಅನುಭವ ಎಂದು ಬಣ್ಣಿಸಿರುಬ ಕೊಹ್ಲಿ ತಮ್ಮ ಪತ್ನಿಯನ್ನು ಅತ್ಯಂತ ವಾತ್ಸಲ್ಯಭರಿತ ಮತ್ತು ಬಲಶಾಲಿ ಮಹಿಳೆಯೆಂದು ಹೇಳಿದ್ಧಾರೆ.

ಪತ್ನಿ, ಮಗಳಿಗೆ ಮಹಿಳಾ ದಿನದ ಶುಭಕೋರಿದ ವಿರಾಟ್ ಕೊಹ್ಲಿ; #AnushkaSharma ಟ್ರೆಂಡಿಂಗ್
ಪತ್ನಿ ಅನುಷ್ಕಾ ಮತ್ತು ಮಗಳೊಂದಿಗೆ ವಿರಾಟ್​ ಕೊಹ್ಲಿ
Follow us on

ಕಳೆದ ಶನಿವಾರವಷ್ಟೇ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಅಂತರದಿಂದ ಬಗ್ಗು ಬಡಿದು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಆಡುವ ಅರ್ಹತೆಯನ್ನು ಗಿಟ್ಟಿಸಿ ಆಕಾಶದಲ್ಲಿ ಹಾರಾಡುತ್ತಿರುವ ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವಾಗಿರುವ ಇಂದು (ಸೋಮವಾರ) ಅತ್ಯಂತ ಸತ್ವಯುತವಾದ ಸಂದೇಶವನ್ನು ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ತಾರಾ ಪತ್ನಿ ಅನುಷ್ಕಾ ಶರ್ಮ ಮತ್ತು ಮೊನ್ನೆಯಷ್ಟೇ ಜನಿಸಿರುವ ತಮ್ಮ ಮಗಳ ಫೋಟೋಗಳನ್ನು ಶೇರ್ ಮಾಡಿ ಒಂದು ಉದ್ದನೆಯ ಭಾವಪೂರ್ಣ ಸಂದೇಶವನ್ನು ಬರೆದಿದ್ದಾರೆ. ತಮ್ಮ ಮಗುವನ್ನು ಅಭೂತಪೂರ್ವ ಅನುಭವ ಎಂದು ಕೊಹ್ಲಿ ಬಣ್ಣಿಸಿದ್ದಾರೆ. ತಮ್ಮ ಪತ್ನಿಯನ್ನು ಅತ್ಯಂತ ವಾತ್ಸಲ್ಯಭರಿತ ಮತ್ತು ಬಲಶಾಲಿ ಮಹಿಳೆಯೆಂದು ಹೇಳಿರುವ ಅವರು ಆಕೆಗೆ ಮಹಿಳಾ ದಿನಾಚರನಣೆಯ ಶುಭ ಕೋರುತ್ತಾ, ತಮ್ಮ ಮಗಳು ವಮಿಕಾ ಬೆಳೆದು ತಾಯಿಯಂತಾಗಲಿದ್ದಾಳೆ ಅಂತ ಸಂದೇಶದಲ್ಲಿ ಬರೆದಿದ್ದಾರೆ.

ವಿರಾಟ್​ ಪೋಸ್ಟ್ ಮಾಡಿರುವ ಪಿಕ್​ನಲ್ಲಿ ಅನುಷ್ಕಾ ವಮಿಕಾಳನ್ನು ತಮ್ಮ ಬಾಹುಗಳಲ್ಲಿ ಎತ್ತಿಕೊಂಡಿದ್ದಾರೆ ಮತ್ತು ಆ ಪುಟ್ಟ ಮಗು ತನ್ನ ನವಿರಾದ ಕೈಯನ್ನು ತನ್ನಮ್ಮನ ಕೆನ್ನೆ ಮೇಲಿಟ್ಟಿದೆ. ವಿರಾಟ್ ಅಭಿಮಾನಿಗಳು ಮತ್ತು ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತಿರುವ ಹಾಗೆ ಈ ದಂಪತಿಗಳು ವಮಿಕಾಳ ಹೆಮ್ಮೆಯ ತಂದೆತಾಯಿಗಳಾಗಿದ್ದು ಜನೆವರಿ 11ರಂದು.

ಕೊಹ್ಲಿ ಬರೆದಿರುವ ಸಂದೇಶ ಕೆಳಗಿನಂತಿದೆ:

‘ಯಾವುದೇ ಒಬ್ಬ ವ್ಯಕ್ತಿಗೆ ಮಗು ಹುಟ್ಟುವುದನ್ನು ನೋಡುವುದು ಮೈ ನಡುಕ ಹುಟ್ಟಿಸುವ, ನಂಬಲಸದಳ ಮತ್ತು ಅಭೂತಪೂರ್ವ ಅನುಭವವಾಗಿದೆ. ಅದನ್ನು ನೋಡಿದ ನಂತರ ಮಹಿಳೆಯರ ನಿಜವಾದ ಶಕ್ತಿ ಮತ್ತು ದೈವಿಕತೆ ಅರ್ಥವಾಗುತ್ತದೆ. ಮಾತ್ರವಲ್ಲ, ಯಾಕೆ ದೇವರು ಮಹಿಳೆಯರ ದೇಹದೊಳಗೆ ಮತ್ತೊಂದು ಜೀವವನ್ನು ಸೃಷ್ಟಿಸುತ್ತಾನೆ ಅನ್ನೋದು ಗ್ರಹಿಕೆಗೆ ಬರುತ್ತದೆ. ಯಾಕೆ ಗೊತ್ತಾ? ಮಹಿಳೆಯರು ಪುರುಷರಿಗಿಂತ ಬಹಳ ಬಲಶಾಲಿಗಳಾಗಿರುತ್ತಾರೆ. ನನ್ನ ಬದುಕಿನ ಅತ್ಯಂತ ವಾತ್ಸಲ್ಯಭರಿತ ಮತ್ತು ಭಾರಿ ಗಟ್ಟಿಗಾತಿ ಮಹಿಳೆ ಮತ್ತು ಮುಂದೆ ಬೆಳೆದು ತನ್ನ ತಾಯಿಯಂತಾಗಲಿರುವ ಕಂದನಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ಪ್ರಪಂಚದ ಎಲ್ಲಾ ಮಹಿಳೆಯರೂ ಅಪ್ರತಿಮರೇ, ಅವರಿಗೆಲ್ಲ ಹ್ಯಾಪಿ ವುಮೆನ್ಸ್ ಡೇ’ ಎಂದು ಕೊಹ್ಲಿ ಬರೆದಿದ್ದಾರೆ.

ಮೈದಾನದಲ್ಲಿ ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಲು ವಿಫಲರಾಗುವ ಕೊಹ್ಲಿ ತಮ್ಮ ನಿಜಜೀವನದಲ್ಲಿ ಇಂಥ ಭಾವುಕ ಜೀವಿ ಅನ್ನೋದು ಅವರ ಬಹಳಷ್ಟು ಅಭಿಮಾನಿಗಳಿಗೆ ಗೊತ್ತಿರಲಿಲ್ಲವೇನೋ?

ಇದನ್ನೂ ಓದಿ: ವಿರುಷ್ಕಾ ದಂಪತಿ ಮಗಳ ಹೆಸರು ‘ವಮಿಕಾ’.. ಏನಿದರ ಅರ್ಥ?