ವಿರುಷ್ಕಾ ದಂಪತಿ ಮಗಳ ಹೆಸರು ‘ವಮಿಕಾ’.. ಏನಿದರ ಅರ್ಥ?

Vamika Meaning ಮಗಳಿಗೆ ಇಟ್ಟಿರುವ ‘ವಮಿಕಾ’ ಎಂಬ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ವಮಿಕಾ ಅರ್ಥವೇನು? ಎಂದು ಹಲವರು ಹುಡುಕಾಡಿದ್ದಾರೆ.

ವಿರುಷ್ಕಾ ದಂಪತಿ ಮಗಳ ಹೆಸರು ‘ವಮಿಕಾ’..  ಏನಿದರ ಅರ್ಥ?
ಅನುಷ್ಕಾ, ವಿರಾಟ್ ಮತ್ತು ಮಗಳು ವಮಿಕಾ
TV9kannada Web Team

| Edited By: ganapathi bhat

Apr 06, 2022 | 8:25 PM

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ದಂಪತಿ ತಮ್ಮ ಪುಟ್ಟ ಮಗಳ ಜೊತೆಗಿರುವ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿರುಷ್ಕಾ ಕುಟುಂಬದ ಫೋಟೊ ಈಗ ಅಭಿಮಾನಗಳ ಗಮನ ಸೆಳೆದಿದೆ. ಮತ್ತೂ ವಿಶೇಷ ಎಂದರೆ, ಅನುಷ್ಕಾ ಶರ್ಮಾ ತಾವು ಬರೆದುಕೊಂಡಿರುವ ಕ್ಯಾಪ್ಶನ್​ನಲ್ಲಿ ಮಗಳ ಹೆಸರನ್ನೂ ಹೇಳಿಕೊಂಡಿದ್ದಾರೆ. ಮಗಳಿಗೆ ‘ವಮಿಕಾ’ ಎಂದು ಹೆಸರಿಟ್ಟಿದ್ದಾರೆ! Vamika -Virushka couple Daughter

ನಾವು ನಮ್ಮ ಬದುಕನ್ನು ಪ್ರೀತಿ, ಕೃತಜ್ಞತೆಯಿಂದ ಜೀವಿಸಿದ್ದೇವೆ. ನಮ್ಮ ಮಗಳು ವಮಿಕಾ ಬದುಕನ್ನು ಮತ್ತೊಂದು ಮಟ್ಟಕ್ಕೆ ಏರಿಸಿದ್ದಾಳೆ ಎಂದು ಅನುಷ್ಕಾ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಶುಭ ಹಾರೈಕೆಯಿಂದ ನಮ್ಮ ಹೃದಯ ತುಂಬಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ನೂತನ ತಂದೆ-ತಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ನನಗೆ ಕೊಹ್ಲಿಯೇ ನಾಯಕ, ನಾನು ಉಪನಾಯಕನಷ್ಟೇ: ಅಜಿಂಕ್ಯ ರಹಾನೆ

ಅನುಷ್ಕಾ ಶರ್ಮ ಹಂಚಿಕೊಂಡಿರುವ ಫ್ಯಾಮಿಲಿ ಫೊಟೊ

ವಮಿಕಾ ಅರ್ಥವೇನು Vamika Meaning? ಮಗಳಿಗೆ ಇಟ್ಟಿರುವ ‘ವಮಿಕಾ’ ಎಂಬ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ವಮಿಕಾ ಅರ್ಥವೇನು? ಎಂದು ಹಲವರು ಹುಡುಕಾಡಿದ್ದಾರೆ. ಈ ಹೆಸರನ್ನು ನಾನು ಇದುವರೆಗೂ ಕೇಳಿರಲಿಲ್ಲ ಎಂದು ಕೂಡ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿರುಷ್ಕಾ ಜೊತೆ ವಮಿಕಾ ಫೊಟೊ ಅಭಿಮಾನಿಗಳಿಗೆ ಖುಷಿ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಮಿಕಾ ಅನ್ನುವುದು ದುರ್ಗಾ ದೇವಿಯ ಹೆಸರು. ಅರ್ಧನಾರೀಶ್ವರನ ಒಂದು ಸ್ತ್ರೀ ಭಾಗವು ವಮಿಕಾ ಎಂದೂ ಕೆಲವರು ತಿಳಿಸಿದ್ದಾರೆ. ಅರ್ಧನಾರೀಶ್ವರ ಅಂದರೆ ಒಂದೇ ದೇಹದ ಬಲಭಾಗದಲ್ಲಿ ಶಿವ ಹಾಗೂ ಎಡಭಾಗದಲ್ಲಿ ಪಾರ್ವತಿಯೂ ಇರುವ ರೂಪವಾಗಿದೆ.

ಇಂದು ಕ್ಯಾಪ್ಟನ್ ವಿರಾಟ್​ ಕೊಹ್ಲಿಗೆ ವರ್ಕ್​ ಫ್ರಂ ಹೋಮ್! ಏನದು ಅಂಥಾ ಜರೂರತ್ತು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada