IPL-2021 ಭಾರತದಲ್ಲಿ ನಡೆಯೋದೇನೋ ಪಕ್ಕಾ: ಆದರೂ, ಪ್ರೇಕ್ಷಕರಿಗೊಂದು ಬ್ಯಾಡ್ನ್ಯೂಸ್!
ಮುಂದಿನ ದಿನಗಳಲ್ಲಿ ಕೊರೊನಾ ಸಂಖ್ಯೆ ಮತ್ತೂ ಕಡಿಮೆ ಆಗುವ ನಿರೀಕ್ಷೆ ಇದೆ. ಈ ವೇಳೆ ಭಾರತದಲ್ಲೇ ಐಪಿಎಲ್ ನಡೆಸೋದು ಸೇಫ್ ಅನ್ನೋದು ಬಿಸಿಸಿಐ ಅಭಿಪ್ರಾಯ.

ಕೊರೊನಾ ಸೋಂಕಿನ ಕಾರಣದಿಂದ 2020ರ ಐಪಿಎಲ್ ಯುಎಇನಲ್ಲಿ ನಡೆದಿತ್ತು. ಆದರೆ, ಈ ಬಾರಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆಯಂತೆ! ಆದಾಗ್ಯೂ ಪ್ರೇಕ್ಷಕರಿಗೆ ಒಂದು ಕಹಿ ಸುದ್ದಿ ಇದೆ. ಅದೇನು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಐಪಿಎಲ್ ಭಾರತದಲ್ಲೇ ನಡೆಯುವ ಬಗ್ಗೆ ಬಿಸಿಸಿಐ ಖಜಾಂಚಿ ಅರುಣ್ ಸಿಂಗ್ ಮಾತನಾಡಿದ್ದಾರೆ. ಈ ಬಾರಿಯ ಐಪಿಎಲ್ನ್ನು ನಾವು ಭಾರತದಲ್ಲೇ ನಡೆಸುತ್ತಿದ್ದೇವೆ. ನಾವು ಬೇರೆ ಯಾವುದೇ ಆಯ್ಕೆಯನ್ನು ಇಟ್ಟುಕೊಂಡಿಲ್ಲ. ಕೊರೊನಾ ವಿಚಾರಕ್ಕೆ ಬಂದರೆ ದುಬೈಗಿಂತ ಭಾರತವೇ ಹೆಚ್ಚು ಸುರಕ್ಷಿತವಾಗಿದೆ. ಪರಿಸ್ಥಿತಿ ಹಿಗೆಯೇ ಮುಂದುವರಿಯುತ್ತದೆ ಎನ್ನುವ ನಂಬಿಕೆ ಇದೆ ಎಂದಿದ್ದಾರೆ ಅವರು.
ಕೊರೊನಾ ವೈರಸ್ ಪ್ರಕರಣದಲ್ಲಿ ದೇಶದಲ್ಲಿ ಭಾರೀ ಇಳಿಕೆ ಕಂಡಿದೆ. ಈ ಮೊದಲು 80 ಸಾವಿರ ಪ್ರಕರಣಗಳು ನಿತ್ಯ ದೃಢವಾಗುತ್ತಿದ್ದವು. ಆದರೆ, ಈಗ ಈ ಸಂಖ್ಯೆ 14 ಸಾವಿರಕ್ಕೆ ಇಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸಂಖ್ಯೆ ಮತ್ತೂ ಕಡಿಮೆ ಆಗುವ ನಿರೀಕ್ಷೆ ಇದೆ. ಈ ವೇಳೆ ಭಾರತದಲ್ಲೇ ಐಪಿಎಲ್ ನಡೆಸೋದು ಸೇಫ್ ಅನ್ನೋದು ಬಿಸಿಸಿಐ ಅಭಿಪ್ರಾಯ.
ಐಪಿಎಲ್ ಭಾರತದಲ್ಲೇ ನಡೆದರೂ ಮೈದಾನದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಮುಂಬರುವ ಇಂಗ್ಲೆಂಡ್ ಟಿ-20 ಪಂದ್ಯಕ್ಕೆ ಶೇ.50 ಪ್ರೇಕ್ಷಕರಿಗೆ ಅವಕಾಶ ನೀಡೋಕೆ ಬಿಸಿಸಿಐ ಚಿಂತನೆ ನಡೆಸಿದೆ. ಆದರೆ, ಈ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಬಿಸಿಸಿಐ ಹೇಳಿದೆ. ಐಪಿಎಲ್ನಲ್ಲೂ ಪ್ರೇಕ್ಷಕರಿಗೆ ಬರೋಕೆ ಅವಕಾಶ ನೀಡಿದರೂ, ಈ ನಿಟ್ಟಿನಲ್ಲಿ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಒಂದೊಮ್ಮೆ ಪ್ರೇಕ್ಷಕರಿಗೆ ಅವಕಾಶ ನೀಡೋಕೆ ಸರ್ಕಾರ ನಿರಾಕರಿಸಿದರೆ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ನಿರಾಸೆ ಉಂಟಾಗಲಿದೆ.
IPL 2021: ಐಪಿಎಲ್ಗಾಗಿ RCB ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಲಿಸ್ಟ್ ಇಲ್ಲಿದೆ..




