AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವನ ಮನೆಯಲ್ಲಿ ಚಿನ್ನ ಕದ್ದು ಥಾರ್ ಕಾರು ಖರೀದಿಸಿದ ಅಳಿಯ: ಮಾವನ ಕೈಯಲ್ಲೇ ಪೂಜೆ ಮಾಡಿಸಿ ಸಿಕ್ಕಿಬಿದ್ದ

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಆಘಾತಕಾರಿ ಕಳವು: 19 ವರ್ಷದ ಯುವಕ ತನ್ನ ಮಾವನ ಮನೆಯಲ್ಲಿ 150 ಗ್ರಾಂ ಚಿನ್ನಾಭರಣ ಕದ್ದು 10 ಲಕ್ಷಕ್ಕೆ ಮಾರಿ ಮಹೀಂದ್ರಾ ಥಾರ್ ಕಾರು ಖರೀದಿಸಿದ್ದಾನೆ. ವಿಪರ್ಯಾಸವೆಂದರೆ, ಕದ್ದ ಹಣದಲ್ಲಿ ತಂದ ಕಾರಿನ ಪೂಜೆಗೆ ಇದೇ ಮಾವನನ್ನು ಆಹ್ವಾನಿಸಿದ್ದ. ಕಳವು ಬಯಲಾದ ನಂತರ ಪೊಲೀಸರ ತನಿಖೆಯಿಂದ ಆರೋಪಿ ಬಂಧಿತನಾಗಿದ್ದಾನೆ.

ಮಾವನ ಮನೆಯಲ್ಲಿ ಚಿನ್ನ ಕದ್ದು ಥಾರ್ ಕಾರು ಖರೀದಿಸಿದ ಅಳಿಯ: ಮಾವನ ಕೈಯಲ್ಲೇ ಪೂಜೆ ಮಾಡಿಸಿ ಸಿಕ್ಕಿಬಿದ್ದ
ಥಾರ್ ಕಾರು ಖರೀದಿ, ಅಳಿಯನ ಬಂಧನ
ಅಕ್ಷಯ್​ ಪಲ್ಲಮಜಲು​​
|

Updated on: Oct 26, 2026 | 3:47 PM

Share

ಕೊಲ್ಹಾಪುರ, ಅ.26: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದೆ. 19 ವರ್ಷದ ಯುವಕನೊಬ್ಬ ತನ್ನ ಸ್ವಂತ ಮಾವನ ಮನೆಯಲ್ಲೇ ಚಿನ್ನಾಭರಣ ಕದ್ದು, ಅದನ್ನು ಮಾರಿ ಮಹೀಂದ್ರಾ ಥಾರ್ ಎಸ್‌ಯುವಿ ಕಾರು ಖರೀದಿ ಮಾಡಿದ್ದಾನೆ. ವಿಪರ್ಯಾಸವೆಂದರೆ, ಕದ್ದ ಹಣದಲ್ಲಿ ತಂದ ಕಾರಿನ ಪೂಜೆ ಮಾಡಲು ಅದೇ ಮಾವನನ್ನು ಅತ್ಯಂತ ವಿಜೃಂಭಣೆಯಿಂದ ಆಹ್ವಾನಿಸಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಸಮರ್ ಚವಾಣ್ (19) ಎಂಬ ಯುವಕ, ತನ್ನ ಮಾವ ಉಮೇಶ್ ಮಾರುತಿ ಚವಾಣ್ ಅವರ ಮನೆಯಲ್ಲಿದ್ದ ಸುಮಾರು 150 ಗ್ರಾಂ ಚಿನ್ನಾಭರಣಗಳನ್ನು ಕದ್ದಿದ್ದ. ನಂತರ ಆ ಆಭರಣಗಳನ್ನು ಸ್ಥಳೀಯ ಅಕ್ಕಸಾಲಿಗನಿಗೆ ಮಾರಿ 10 ಲಕ್ಷ ರೂ. ನಗದು ಪಡೆದಿದ್ದ. ಸಿಕ್ಕ ಹಣದಿಂದ ತಕ್ಷಣವೇ ಶೋಕಿಗಾಗಿ ಮಹೀಂದ್ರಾ ಥಾರ್ ಎಸ್‌ಯುವಿ ಕಾರನ್ನು ಖರೀದಿಸಿದ್ದ ಸಮರ್, ಕಾರಿನ ಪೂಜೆಗಾಗಿ ಮನೆಯವರ ಜೊತೆಗೆ ಮಾವ ಉಮೇಶ್ ಚವಾಣ್ ಅವರನ್ನೂ ಕರೆದಿದ್ದ.

ಅಳಿಯ ಹೊಸ ಕಾರು ತಂದ ಖುಷಿಯಲ್ಲಿ ಪೂಜೆಗೆ ಹೊರಡಲು ಸಿದ್ಧರಾಗುತ್ತಿದ್ದ ಮಾವ ಉಮೇಶ್, ಹೆಂಡತಿಯ ಆಭರಣ ಧರಿಸಲು ಸೇಫ್ ಲಾಕರ್ ಪರಿಶೀಲಿಸಿದಾಗ ಕಳವು ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ಬಲವಂತದ ಬಾಗಿಲು ಮುರಿದ ಕುರುಹುಗಳಿಲ್ಲದ ಕಾರಣ, ಒಳಗಿನವರೇ ಕದ್ದಿರಬಹುದು ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ಒಂದೇ ಹೆಸರು.. ಸಾವಿರಾರು ಬಂಧಗಳು: ಶ್ರೀನಿವಾಸುಲ ಸೇವಾ ಸಂಸ್ಥೆ 3ನೇ ವರ್ಷಾಚರಣೆಯಲ್ಲಿ ಶ್ರೀನಿವಾಸ್‌ ಹೆಸರಿನ 5 ಸಾವಿರ ವ್ಯಕ್ತಿಗಳು ಭಾಗಿ

ಡಿಎಸ್ಪಿ ಶ್ರೀಕಾಂತ್ ಠಿಕಾಣೆ ನೇತೃತ್ವದ ಪೊಲೀಸ್ ತಂಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಾಗ, 19 ವರ್ಷದ ಸಮರ್ ಯಾವುದೇ ಉದ್ಯೋಗವಿಲ್ಲದೆ ಏಕಾಏಕಿ ಕೋಟ್ಯಂತರ ಮೌಲ್ಯದ ಐಷಾರಾಮಿ ಥಾರ್ ಕಾರನ್ನು ಹೇಗೆ ಖರೀದಿಸಿದ ಎಂಬ ಅನುಮಾನ ಮೂಡಿದೆ. ಸಮರ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನೇ ಮಾವನ ಮನೆಯಲ್ಲಿ ಚಿನ್ನ ಕದ್ದು ಕಾರು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಸಮರ್ ಚವಾಣ್‌ನನ್ನು ಬಂಧಿಸಿದ್ದು, ಕದ್ದ ಚಿನ್ನವನ್ನು ಖರೀದಿಸಿದ ಅಕ್ಕಸಾಲಿಗನನ್ನೂ ಬಂಧಿಸಿದ್ದಾರೆ. ಕದ್ದ ಹಣದಲ್ಲೇ ಕಾರು ತಂದು, ಪೂಜೆಗೆ ತಮ್ಮನ್ನೇ ಕರೆದ ಅಳಿಯನ ವಿಕೃತ ಬುದ್ಧಿಗೆ ಕುಟುಂಬಸ್ಥರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ಹೇಗಿದೆ ಗೊತ್ತಾ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್​​ ರೈಲು?
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ವೃದ್ಧೆ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ ದುರುಳರು
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಸ್ಟಿಂಗ್ ವಿಡಿಯೋದಲ್ಲಿದ್ದ ಮಹಿಳೆ ಹೇಳಿಕೆಗೆ ಯತೀಂದ್ರ ಏನಂದ್ರು ನೋಡಿ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಕುಮಾರಿ ವೇಸ್ಟ್​ ಪೀಸ್ ಎಂದ ಸೌಂದರ್ಯಾ ಶೆಟ್ಟಿ; ನಡೆಯಿತು ದೊಡ್ಡ ಜಗಳ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಸೀಗೆ ಹುಣ್ಣಿಮೆ: ಕೊಪ್ಪಳ ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಮಹಾಪೂರ, ಜನಸಾಗರ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ಇಂದು ಸೀಗೆ ಹುಣ್ಣಿಮೆ; ಈ ರಾಶಿಯವರಿಗೆ ಶುಭ ದಿನ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ
ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ಮುಂದೆ ರಾಣಿ ಚನ್ನಮ್ಮ ಸಾರಿಗೆ ಸಂಸ್ಥೆ