Kolkata University: ಇಂಗ್ಲಿಷ್​ ಮೀಡಿಯಂನಲ್ಲಿ ಓದಿದ್ದರೆ ಮಾತ್ರ ಪ್ರವೇಶ ಎಂದಿದ್ದ ಕಾಲೇಜಿನಿಂದ ಕ್ಷಮೆಯಾಚನೆ

|

Updated on: Jul 05, 2023 | 3:00 PM

ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡದ ಕಾರಣಕ್ಕೆ ಪ್ರವೇಶ ನೀಡದಿರುವ ಕೋಲ್ಕತ್ತಾ ವಿಶ್ವವಿದ್ಯಾಲಯದ ಲೊರೆಟೊ ಕಾಲೇಜಿನ ನಿರ್ಧಾರ ಕೋಲಾಹಲ ಸೃಷ್ಟಿಸಿದ್ದು, ಬಳಿಕ ಕಾಲೇಜು ಕ್ಷಮೆಯಾಚಿಸಿದೆ.

Kolkata University: ಇಂಗ್ಲಿಷ್​ ಮೀಡಿಯಂನಲ್ಲಿ ಓದಿದ್ದರೆ ಮಾತ್ರ ಪ್ರವೇಶ ಎಂದಿದ್ದ ಕಾಲೇಜಿನಿಂದ ಕ್ಷಮೆಯಾಚನೆ
ಲೊರೆಟೊ ಕಾಲೇಜು
Image Credit source: ಕಾಲೇಜು ವೆಬ್​ಸೈಟ್​
Follow us on

ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡದ ಕಾರಣಕ್ಕೆ ಪ್ರವೇಶ ನೀಡದಿರುವ ಕೋಲ್ಕತ್ತಾ ವಿಶ್ವವಿದ್ಯಾಲಯದ ಲೊರೆಟೊ ಕಾಲೇಜಿನ ನಿರ್ಧಾರ ಕೋಲಾಹಲ ಸೃಷ್ಟಿಸಿದ್ದು, ಬಳಿಕ ಕಾಲೇಜು ಕ್ಷಮೆಯಾಚಿಸಿದೆ. ಕಾಲೇಜಿನ ಈ ನಿರ್ಧಾರದ ನಂತರ, ಪೋಷಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರತಿಭಟನೆಗಳು ಪ್ರಾರಂಭವಾದವು, ಇದರಿಂದಾಗಿ ಕಾಲೇಜು ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡು ಕ್ಷಮೆಯಾಚಿಸಿದೆ. ಪಶ್ಚಿಮ ಬಂಗಾಳದಲ್ಲಿ ಪದವಿಪೂರ್ವ ಪ್ರವೇಶವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯು ಶನಿವಾರ (ಜುಲೈ 1) ಪ್ರಾರಂಭವಾಯಿತು, ಬೆಂಗಾಲಿ ಮತ್ತು ಹಿಂದಿ ಮಾಧ್ಯಮ ಶಾಲೆಗಳ ಅರ್ಜಿದಾರರಿಗೆ ಸ್ವಾಗತವಿಲ್ಲ ಎಂದು ಕ್ಯಾಥೋಲಿಕ್ ಸಂಸ್ಥೆ ಆನ್‌ಲೈನ್‌ನಲ್ಲಿ ಪ್ರಕಟಿಸಿದೆ.

ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಉತ್ತಮ ಜ್ಞಾನವನ್ನು ಹೊಂದಿರಬೇಕು, ಅವರ ಲಿಖಿತ, ಮೌಖಿಕ ಪರೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಪರೀಕ್ಷೆಗಳಿಗೆ ಇಂಗ್ಲಿಷ್‌ನಲ್ಲಿ ಮಾತ್ರ ಉತ್ತರಿಸಬೇಕಾಗುತ್ತದೆ. ನಮ್ಮ ಓಪನ್ ಶೆಲ್ಫ್ ಲೈಬ್ರರಿಯು ಇಂಗ್ಲಿಷ್  ಪುಸ್ತಕಗಳನ್ನು ಮಾತ್ರ ಹೊಂದಿದೆ.

ಕಾಲೇಜು ಗ್ರಂಥಾಲಯದಲ್ಲಿ ಬಂಗಾಳಿ ಅಥವಾ ಹಿಂದಿಯಂತಹ ಪ್ರಾದೇಶಿಕ ಭಾಷೆಯ ಪುಸ್ತಕಗಳು ಲಭ್ಯವಿಲ್ಲ. ಲೊರೆಟೊ ಕಾಲೇಜಿನಲ್ಲಿ ಇಂಗ್ಲಿಷ್ ಮಾತ್ರ ಬೋಧನಾ ಮಾಧ್ಯಮವಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

ಮತ್ತಷ್ಟು ಓದಿ: ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೈ ಕೈ ಹಿಡಿದು ಓಡಾಡುವಂತಿಲ್ಲ, ಒಟ್ಟಿಗೆ ಕುಳಿತುಕೊಳ್ಳುವಂತೆಯೂ ಇಲ್ಲ

ಸ್ಥಳೀಯ ಭಾಷೆಗಳಲ್ಲಿ ಕಲಿಸುವ ಶಾಲೆಗಳ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಕಾಲೇಜಿನ ಈ ನಿರ್ಧಾರದ ನಂತರ ಪ್ರತಿಭಟನೆಗಳು ಆರಂಭವಾದವು. ಕಾಲೇಜು ನೀಡಿದ ನೋಟೀಸ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಲು ಪ್ರಾರಂಭಿಸಿತು ಮತ್ತು ಕೋಲಾಹಲವನ್ನು ಸೃಷ್ಟಿಸಿತು.

ಅಲ್ಲದೆ, ಕೋಲ್ಕತ್ತಾ ವಿಶ್ವವಿದ್ಯಾನಿಲಯವು ಲೊರೆಟೊ ಕಾಲೇಜಿನಿಂದ ಇಂತಹ ಮಾರ್ಗಸೂಚಿಯನ್ನು ಏಕೆ ಹೊರಡಿಸಲಾಗಿದೆ ಎಂಬ ಮಾಹಿತಿಯನ್ನು ಕೇಳಿದೆ. ರಾಜ್ಯದ ಬಂಗಾಳಿ ಹಾಗೂ ಹಿಂದಿ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಅರ್ಜಿಗಳನ್ನು ನಿರ್ಲಕ್ಷಿಸಿರುವ ಕಾಲೇಜಿನ ಕ್ರಮವನ್ನು ಶಿಕ್ಷಣ ತಜ್ಞರು ಕೂಡ ಖಂಡಿಸಿದ್ದಾರೆ.

ಮೊದಲ ಮೆರಿಟ್ ಪಟ್ಟಿ ಬಿಡುಗಡೆಯಾದ ಬಳಿಕ ಸ್ಥಳೀಯ ಭಾಷಾ ಶಾಲಾ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗಿಲ್ಲ ಎನ್ನುವ ವಿಚಾರ ತಿಳಿದುಬಂದಿತ್ತು ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ