ಕೊಲ್ಕತ್ತಾ: ಕರ್ತವ್ಯದಲ್ಲಿದ್ದ ಕೊಲ್ಕತ್ತಾದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಪ್ರತಿಭಟನೆ ಇನ್ನೂ ಮುಂದುವರೆದಿದೆ. ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಈ ಪ್ರಕರಣ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಇದೀಗ ಕಿರಿಯ ವೈದ್ಯರು ನಾಳೆ ಪ್ರತಿಭಟನಾ ಮೆರವಣಿಗೆಯನ್ನು ಯೋಜಿಸಿದ್ದಾರೆ. ಹಾಗೇ, ಶನಿವಾರದಿಂದ ತುರ್ತು ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದ್ದಾರೆ.
ಆದರೆ, ಕೆಲಸಕ್ಕೆ ಮರಳಿದರೂ ಕಿರಿಯ ವೈದ್ಯರು ನ್ಯಾಯಕ್ಕಾಗಿ ತಮ್ಮ ಬೇಡಿಕೆಯಲ್ಲಿ ದೃಢವಾಗಿ ಉಳಿದಿದ್ದಾರೆ. ಶುಕ್ರವಾರ ಮಧ್ಯಾಹ್ನ ಸ್ವಸ್ಥ ಭವನದಿಂದ ಸಿಬಿಐ ಕಚೇರಿಯವರೆಗೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ. ತಮ್ಮ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದು ಅಧಿಕಾರಿಗಳಿಂದ ಪರಿಹಾರ ಪಡೆಯುವುದು ಈ ಪ್ರತಿಭಟನೆ ಮೆರವಣಿಗೆಯ ಉದ್ದೇಶವಾಗಿದೆ.
Kolkata, West Bengal | RG Kar Rape and Murder Case | West Bengal Junior Doctors front to call off their strike tomorrow. To return to work on Saturday. Emergency services will resume but OPD services to remain suspended. pic.twitter.com/GQF41RViky
— ANI (@ANI) September 19, 2024
ಇದನ್ನೂ ಓದಿ: ಕೊಲ್ಕತ್ತಾ ಪ್ರತಿಭಟನೆಯಲ್ಲಿ ಪೊಲೀಸ್ ದೌರ್ಜನ್ಯದ ವಿರುದ್ಧ ಬಾವುಟ ಬೀಸಿದ ಸನ್ಯಾಸಿ
ಕೊಲ್ಕತ್ತಾದ ಕಿರಿಯ ವೈದ್ಯರು ಈ ಶನಿವಾರದಿಂದ ತುರ್ತು ವೈದ್ಯಕೀಯ ಸೇವೆಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರವು ಹಲವಾರು ದಿನಗಳ ಪ್ರತಿಭಟನೆ ಮತ್ತು ಸೇವೆಗಳಲ್ಲಿ ಅಡ್ಡಿಪಡಿಸಿದ ನಂತರ ಸರ್ಕಾರಕ್ಕೆ ಕೊಂಚ ರಿಲೀಫ್ ಉಂಟುಮಾಡಿದೆ. ವೈದ್ಯರ ಮುಷ್ಕರದಿಂದ ಕೊಲ್ಕತ್ತಾದ ಜನರು ವೈದ್ಯರ ಚಿಕಿತ್ಸೆ ಸಿಗದೆ ಸಾಕಷ್ಟು ತುಂದರೆ ಅನುಭವಿಸಿದ್ದರು. ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಕಷ್ಟು ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ