ಹೈದರಾಬಾದ್: ಸಾಮಾನ್ಯವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಒತ್ತಡದಿಂದ ಜನಸಾಮಾನ್ಯರು ಲಂಚ ನೀಡಬೇಕಾದ ಪ್ರಸಂಗ ಎದುರಾಗುವುದು ಖಚಿತ ಎಂಬಷ್ಟು ಸಾಮಾನ್ಯವಾಗಿದೆ. ಆದರೆ, ಜನರ ಹತ್ತಿರ ಪಡೆದ ಲಂಚವನ್ನ ಸರ್ಕಾರಿ ಅಧಿಕಾರಿಯೊಬ್ಬ ವಾಪಸ್ ಮಾಡೋಕೆ ಲಿಖಿತ ಆಶ್ವಾಸನೆ ನೀಡಿರುವ ಸ್ವಾರಸ್ಯಕರ ಘಟನೆ ತೆಲಂಗಾಣದ ಕೊಮರಮ್ ಭೀಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಚಿಂತಲಾ ಮಣೆಪಲ್ಲೆ ಮಂಡಲ್ ವಿಭಾಗದಲ್ಲಿ ತೆಲಂಗಾಣ ಸರ್ಕಾರವು ರೈತರಿಗೆ ಕೃಷಿಗೆಂದು ಜಮೀನು ಮಂಜೂರು ಮಾಡಿತ್ತು. ಆದರೆ, ನಾಲ್ಕು ವರ್ಷವಾದರೂ ಆ ಜಮೀನು ರೈತರ ಪಾಲಿಗೆ ಬರಲೇ ಇಲ್ಲ. ಅದಕ್ಕೆ ಕಾರಣ ಸ್ಥಳೀಯ ಅಧಿಕಾರಿಗಳ ಲಂಚಬಾಕತನ.
ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅಧಿಕಾರಿ, 2 ಕೋಟಿ ರೂ. ಲಂಚ!
ಅಂದ ಹಾಗೆ, ಅಧಿಕಾರಿ ಪಡೆದ ಒಟ್ಟು ಲಂಚ ಎಷ್ಟು ಗೊತ್ತಾ? ಬರೋಬ್ಬರಿ 2 ಕೋಟಿ ರೂಪಾಯಿ!
Published On - 4:03 pm, Sat, 1 August 20