ಕೋಟಾ: ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ, 2 ತಿಂಗಳವರೆಗೆ ಪರೀಕ್ಷೆ ಮುಂದೂಡಿಕೆ, ಅರ್ಧ ದಿನ ಓದು, ಅರ್ಧ ದಿನ ಫನ್

|

Updated on: Aug 29, 2023 | 8:58 AM

ರಾಜಸ್ಥಾನದಲ್ಲಿ ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿರುವ  ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ, ಒಂದೇ ದಿನದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರವು ಕೆಲವು ಬದಲಾವಣೆಗಳನ್ನು ತಂದಿದೆ. ಅರ್ಧ ದಿನ ಓದು ಅರ್ಧ ದಿನ ವಿದ್ಯಾರ್ಥಿಗಳಿಗೆ ಇಷ್ಟವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ಹಾಗೆಯೇ ಪರೀಕ್ಷೆಗಳನ್ನು 2 ತಿಂಗಳುಗಳ ಕಾಲ ಮುಂದೂಡಲಾಗಿದೆ, ಸರ್ಕಾರದ ಸಮಿತಿಯು ಸೆಪ್ಟೆಂಬರ್ 2 ರಂದು ಕೋಟಾಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ.

ಕೋಟಾ: ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ, 2 ತಿಂಗಳವರೆಗೆ ಪರೀಕ್ಷೆ ಮುಂದೂಡಿಕೆ, ಅರ್ಧ ದಿನ ಓದು, ಅರ್ಧ ದಿನ ಫನ್
ವಿದ್ಯಾರ್ಥಿಗಳು-ಸಾಂದರ್ಭಿಕ ಚಿತ್ರ
Image Credit source: India Today
Follow us on

ರಾಜಸ್ಥಾನದಲ್ಲಿ ನೀಟ್(NEET)​ ಪರೀಕ್ಷೆಗೆ ತಯಾರಿ ನಡೆಸುತ್ತಿರುವ  ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ, ಒಂದೇ ದಿನದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಸರ್ಕಾರವು ಕೆಲವು ಬದಲಾವಣೆಗಳನ್ನು ತಂದಿದೆ. ಅರ್ಧ ದಿನ ಓದು ಅರ್ಧ ದಿನ ವಿದ್ಯಾರ್ಥಿಗಳಿಗೆ ಇಷ್ಟವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ಹಾಗೆಯೇ ಪರೀಕ್ಷೆಗಳನ್ನು 2 ತಿಂಗಳುಗಳ ಕಾಲ ಮುಂದೂಡಲಾಗಿದೆ, ಸರ್ಕಾರದ ಸಮಿತಿಯು ಸೆಪ್ಟೆಂಬರ್ 2 ರಂದು ಕೋಟಾಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ.

ಸಭೆಯಲ್ಲಿ ತೆಗೆದುಕೊಂಡ ಇತರ ನಿರ್ಧಾರಗಳಲ್ಲಿ, ವಿದ್ಯಾರ್ಥಿಗಳ ಮೇಲಿನ ಕೋರ್ಸ್‌ಗಳ ಹೊರೆ ಕಡಿಮೆ ಮಾಡುವ ಪ್ರಯತ್ನದಲ್ಲಿ ವಿಷಯ ತಜ್ಞರ ಸಮಿತಿಯನ್ನು ರಚಿಸಲು ಕೋಚಿಂಗ್ ಸಂಸ್ಥೆಗಳನ್ನು ಕೇಳಲಾಗಿದೆ. ಎಲ್ಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಜ್ಞರಿಂದ ಆನ್‌ಲೈನ್ ಪ್ರೇರಕ ಸೆಷನ್‌ಗಳನ್ನು ನಡೆಸಲು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ಸಂಸ್ಥೆಗಳನ್ನು ಕೇಳಲಾಗಿದೆ.

ಸಾಮಾನ್ಯ ಪರೀಕ್ಷೆಗಳಿಗೆ ಗೈರುಹಾಜರಾದವರು ಮತ್ತು ಕಳಪೆ ಸಾಧನೆ ಮಾಡಿದವರನ್ನು ಗುರುತಿಸಿ ಅವರಿಗೆ ಮಾನಸಿಕ ಸಮಾಲೋಚನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ನೀಟ್‌(NEET)ಗೆ ತಯಾರಿ ನಡೆಸುತ್ತಿದ್ದ ಇಬ್ಬರು ಅಭ್ಯರ್ಥಿಗಳು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತ್ತಷ್ಟು ಓದಿ: ಕೋಟಾ: ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು, ವರ್ಷದಲ್ಲಿ 23ನೇ ಘಟನೆ

ಪೊಲೀಸರ ಪ್ರಕಾರ, ಆವಿಷ್ಕಾರ್ ಸಂಭಾಜಿ ಕಾಸ್ಲೆ (17) ಮಧ್ಯಾಹ್ನ 3.15 ರ ಸುಮಾರಿಗೆ ಜವಾಹರ್ ನಗರದಲ್ಲಿರುವ  ಕೋಚಿಂಗ್ ಇನ್‌ಸ್ಟಿಟ್ಯೂಟ್ ಕಟ್ಟಡದ ಆರನೇ ಮಹಡಿಯಿಂದ ಜಿಗಿದಿದ್ದಾನೆ. ಕಾಸ್ಲೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಮೂರನೇ ಮಹಡಿಯಲ್ಲಿ ಕೆಲವು ನಿಮಿಷಗಳ ಹಿಂದೆ ಪರೀಕ್ಷೆಯನ್ನು ಬರೆದಿದ್ದ ಎನ್ನಲಾಗಿದೆ.

ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಿಬ್ಬಂದಿ ಕಾಸ್ಲೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ವಿಜ್ಞಾನ ನಗರ ವೃತ್ತ ಅಧಿಕಾರಿ (ಸಿಒ) ಧರಂವೀರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಪೊಲೀಸರ ಪ್ರಕಾರ, ಕಾಸ್ಲೆ  ಸಾವಿನ ನಾಲ್ಕು ಗಂಟೆಗಳ ನಂತರ, ನೀಟ್‌ಗೆ ತಯಾರಿ ನಡೆಸುತ್ತಿದ್ದ ಆದರ್ಶ್ ರಾಜ್ (18) ರಾತ್ರಿ 7 ಗಂಟೆ ಸುಮಾರಿಗೆ ಕುನ್ಹಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ