ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್, ಆರೋಪಗಳ ಬಗ್ಗೆ ರೋಹಿಣಿ ಆಚಾರ್ಯ ಬೇಸರ
ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ ಸೋಲು ಕಾಣುತ್ತಿದ್ದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಪಕ್ಷ ಹಾಗೂ ಕುಟುಂಬದಿಂದ ಹೊರಬಂದಿದ್ದಾರೆ. ತನ್ನ ಸಹೋದರ ತೇಜಸ್ವಿ ಯಾದವ್ ತನ್ನನ್ನು ಮನೆಯಿಂದ ಹೊರ ಹಾಕಿದ್ದಾನೆ ಎಂದು ಆಕೆ ದೂರಿದ್ದಾರೆ. ಅಷ್ಟೇ ಅಲ್ಲದೆ ಸಂಬಂಧಿಕರು ತಾನು ತನ್ನ ತಂದೆಗೆ ನೀಡಿರುವ ಕಿಡ್ನಿ ಬಗ್ಗೆಯೂ ಮಾತನಾಡಿದ್ದು, ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು.

ಪಾಟ್ನಾ, ನವೆಂಬರ್ 16: ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ(RJD) ಸೋಲು ಕಾಣುತ್ತಿದ್ದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಪಕ್ಷ ಹಾಗೂ ಕುಟುಂಬದಿಂದ ಹೊರಬಂದಿದ್ದಾರೆ. ತನ್ನ ಸಹೋದರ ತೇಜಸ್ವಿ ಯಾದವ್ ತನ್ನನ್ನು ಮನೆಯಿಂದ ಹೊರ ಹಾಕಿದ್ದಾನೆ ಎಂದು ಆಕೆ ದೂರಿದ್ದಾರೆ.
ಅಷ್ಟೇ ಅಲ್ಲದೆ ಸಂಬಂಧಿಕರು ತಾನು ತನ್ನ ತಂದೆಗೆ ನೀಡಿರುವ ಕಿಡ್ನಿ ಬಗ್ಗೆಯೂ ಮಾತನಾಡಿದ್ದು, ಕೊಳಕು ಮೂತ್ರಪಿಂಡಕ್ಕೆ ಬದಲಾಗಿ ಚುನಾವಣಾ ಟಿಕೆಟ್ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು. ಇದು ತುಂಬಾ ಬೇಸರ ತಂದಿತ್ತು ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಲಾಲು ಪ್ರಸಾದ್ ಯಾದವ್ ಕುಟುಂಬದೊಳಗಿನ ದ್ವೇಷ ಬೀದಿಗೆ ಬಂದಿದೆ.
ಆರ್‌ಜೆಡಿ ನಾಯಕಿ ತಮ್ಮ ಕುಟುಂಬದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದು,ಹಿರಿಯ ಮಗ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರಹಾಕಿದ ನಂತರ ಯಾದವ್ ಕುಟುಂಬಕ್ಕೆ ಎದುರಾಗಿರುವ ಎರಡನೇ ಬಿಕ್ಕಟ್ಟು ಇದಾಗಿದೆ. ರಾಜಕೀಯದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ. ತೇಜ್ ಪ್ರತಾಪ್ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿ ಬಿಹಾರ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಯನ್ನು ನಡೆಸಿದರು. ಇಂದು ರೋಹಿಣಿ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಭಾವನಾತ್ಮಕ ಪೋಸ್ಟ್ಗಳನ್ನು ಮಾಡಿದ್ದಾರೆ.
ಮತ್ತಷ್ಟು ಓದಿ: ನನಗೆ ಕುಟುಂಬವೇ ಇಲ್ಲ, ತೇಜಸ್ವಿ ನನ್ನನ್ನು ಹೊರ ಹಾಕಿದ್ರು, ಆರ್‌ಜೆಡಿ ತೊರೆದ ಬಳಿಕ ರೋಹಿಣಿ ಆಚಾರ್ಯ ಮೊದಲ ಪ್ರತಿಕ್ರಿಯೆ
ಸಂಬಂಧಿಕರು ನನ್ನನ್ನು ಶಪಿಸಿದ್ದರು, ಕೊಳಕು ಎಂದು ಜರಿದಿದ್ದಾರೆ, ನನ್ನ ತಮದೆಗೆ ಚುನಾವಣಾ ಟಿಕೆಟ್ ಬದಲಾಗಿ ಕೊಳಕು ಮೂತ್ರಪಿಂಡ ನೀಡಿದ್ದೇನೆ ಎಂದು ಹೀಯಾಳಿಸಿದ್ದಾರೆ.ಆರ್‌ಜೆಡಿ 2024 ರ ಲೋಕಸಭಾ ಚುನಾವಣೆಯಲ್ಲಿ ಸರನ್‌ನಿಂದ ಆಚಾರ್ಯ ಅವರನ್ನು ಕಣಕ್ಕಿಳಿಸಿತ್ತು. ಅವರು ಸೋತಿದ್ದರು.
ಆಚಾರ್ಯ ತಮ್ಮ ಪತಿ ಮತ್ತು ಮಕ್ಕಳ ಮೇಲೆ ಕೇಂದ್ರೀಕರಿಸುವ ಬದಲು ತಮ್ಮ ತಂದೆಯನ್ನು ಉಳಿಸಲು ಆಯ್ಕೆ ಮಾಡಿಕೊಂಡದ್ದು ಪಾಪ ಎಂದು ಕರೆದರು.ನನ್ನ ತಂದೆಯನ್ನು ಉಳಿಸಿಕೊಳ್ಳಲು ನಾನು ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಆದರೆ ಅದನ್ನೇ ಕೊಳಕು ಎಂದು ಕರೆದಿದ್ದಾರೆ. ನಿಮ್ಮಲ್ಲಿ ಯಾರೂ ನನ್ನಂತಹ ತಪ್ಪು ಮಾಡದಿರಲಿ, ಯಾವುದೇ ಕುಟುಂಬಕ್ಕೆ ರೋಹಿಣಿಯಂತಹ ಮಗಳು ಎಂದಿಗೂ ಸಿಗದಿರಲಿ ಎಂದು ಬರೆದಿದ್ದಾರೆ.
ನನ್ನ ಎದುರು ಚಪ್ಪಲಿ ಎತ್ತಿದ್ದಾರೆ, ನಾನು ನನ್ನ ಸ್ವಾಭಿಮಾನದ ಮೇಲೆ ರಾಜಿ ಮಾಡಿಕೊಳ್ಳಲಿಲ್ಲ, ನಾನು ಸತ್ಯವನ್ನು ಬಿಟ್ಟುಕೊಡಲಿಲ್ಲ, ಮತ್ತು ಇದರಿಂದಾಗಿಯೇ ನಾನು ಈ ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




