ಹೈದರಾಬಾದ್: ಕೊರೊನಾ ಲಾಕ್ಡೌನ್ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು ಪ್ರಯತ್ನಿಸುವ ವೇಳೆಗೆ ಚಿರತೆ ಅಟ್ಯಾಕ್ ಮಾಡಿ ಕಾಲನ್ನು ಹಿಡಿದುಕೊಳ್ಳುತ್ತೆ. ಆತ ಕಾಲನ್ನು ಅಲುಗಾಡಿಸಿದಾಗ ಚಿರತೆ ಆತನನ್ನು ಬಿಟ್ಟುಬಿಡುತ್ತೆ.
ಇದೇ ವೇಳೆ 6 ನಾಯಿಗಳು ಚಿರತೆಯನ್ನು ಸುತ್ತುವರೆಯುತ್ತೆ. ನಂತರ ಇನ್ನೂ ಒಂದು ನಾಯಿಯೂ ಸೇರಿಕೊಳ್ಳುತ್ತೆ. ಏಳೂ ನಾಯಿಗಳು ಚಿರತೆಯನ್ನ ನೋಡಿ ಬೊಗಳುತ್ತವೆ. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಚಿರತೆ ಅಂಗಡಿಯ ಷಟರ್ ಮೇಲೆ ಹಾರಲು ಯತ್ನಿಸುತ್ತೆ. ಆದ್ರೆ ಸಾಧ್ಯವಾಗುವುದಿಲ್ಲ. ಈ ವೇಳೆ ಕೋರೆಹಲ್ಲುಗಳನ್ನ ತೋರಿಸಿಕೊಂಡು ನಾಯಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತೆ. ನಂತರ ನಾಯಿಗಳು ಅಲ್ಲಿಂದ ತೆರಳಿದ ಬಳಿಕ ಚಿರತೆ ಲಾರಿ ಕೆಳಗೆ ಬಚ್ಚಿಟ್ಟುಕೊಂಡು, ಪರಾರಿಯಾಗುತ್ತೆ.
CCTV footage of Hyderabad Leopard after running away from Main Road on 14th May at 8:41am just before it jumped into Agricultural Farm. @RandeepHooda @ParveenKaswan @saroshlodhi @ANI @umasudhir @Nilesh_TNIE pic.twitter.com/qIIsKzg9OC
— Forests And Wildlife Protection Society-FAWPS (@FFawps) May 16, 2020
Published On - 12:23 pm, Tue, 19 May 20