ಜನವರಿ 22 ರಂದು ಮನೆಯಲ್ಲಿ ದೀಪ ಬೆಳಗಿಸಿ, 23ರ ನಂತರ ರಾಮಮಂದಿರಕ್ಕೆ ಭೇಟಿ ನೀಡಿ: ಮೋದಿ

|

Updated on: Dec 30, 2023 | 4:04 PM

"ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆದಾಗ ನೀವೆಲ್ಲರೂ ಮನೆಯಲ್ಲಿ ದೀಪಾವಳಿಯನ್ನು ಆಚರಿಸಬೇಕು, ಪ್ರತಿಯೊಬ್ಬರೂ ಮನೆಯಲ್ಲಿ 'ದಿಯಾ ಜಲಾಯೇ' (ದೀಪ ಬೆಳಗಿಸಿ) ಎಂದು ನಾನು ವಿನಂತಿಸುತ್ತೇನೆ. ಜನವರಿ 23ರ ನಂತರ ರಾಮಮಂದಿರಕ್ಕೆ ಭೇಟಿ ನೀಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜನವರಿ 22 ರಂದು ಮನೆಯಲ್ಲಿ ದೀಪ ಬೆಳಗಿಸಿ, 23ರ ನಂತರ ರಾಮಮಂದಿರಕ್ಕೆ ಭೇಟಿ ನೀಡಿ: ಮೋದಿ
ನರೇಂದ್ರ ಮೋದಿ
Follow us on

ಅಯೋಧ್ಯೆ ಡಿಸೆಂಬರ್ 30: ಹೊಸ ರೈಲುಗಳು ಮತ್ತು ನವೀಕರಿಸಿದ ರೈಲು ನಿಲ್ದಾಣ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ  ಚಾಲನೆ ನೀಡಿದ ನಂತರ ಅಯೋಧ್ಯೆಯಲ್ಲಿರುವ (Ayodhya)  ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು , ಭಗವಾನ್ ರಾಮನ ಭಕ್ತರು ತೊಂದರೆಯಾಗುವಂತ ಏನೇ ಕಾರ್ಯಗಳನ್ನು ಮಾಡಬಾರದು ಎಂದು ಹೇಳಿದರು. ಇದು ನನ್ನ ವಿನಮ್ರ  ಮನವಿ, ಜನವರಿ 22 ರಂದು ರಾಮ ಮಂದಿರಕ್ಕೆ (Ram mandir) ಬರಲು ನಿರ್ಧರಿಸಬೇಡಿ. ಮೊದಲು, ಕಾರ್ಯಕ್ರಮಕ್ಕೆ ಅವಕಾಶ ನೀಡಿ. ಜನವರಿ 23 ರ ನಂತರ ನೀವು ಯಾವಾಗ ಬೇಕಾದರೂ ಬರಬಹುದು. ಪ್ರತಿಯೊಬ್ಬರೂ ಕಾರ್ಯಕ್ರಮಕ್ಕೆ ಹಾಜರಾಗಲು ಬಯಸುತ್ತಾರೆ, ಆದರೆ ಅದು ಲಾಜಿಸ್ಟಿಕ್ಸ್ ಮತ್ತು ಭದ್ರತಾ ಕಾರಣಗಳಿಂದಾಗಿ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ನೀವು 550 ವರ್ಷಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದೀರಿ. ಇನ್ನೂ ಸ್ವಲ್ಪ ಸಮಯ ಕಾಯಿರಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


“ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಆದಾಗ ನೀವೆಲ್ಲರೂ ಮನೆಯಲ್ಲಿ ದೀಪಾವಳಿಯನ್ನು ಆಚರಿಸಬೇಕು, ಪ್ರತಿಯೊಬ್ಬರೂ ಮನೆಯಲ್ಲಿ ‘ದಿಯಾ ಜಲಾಯೇ’ (ದೀಪ ಬೆಳಗಿಸಿ) ಎಂದು ನಾನು ವಿನಂತಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ವರ್ಷಗಳಿಂದ ನಡೆಯುತ್ತಿದ್ದು, ಯಾವುದೇ ಅಡ್ಡಿ ಉಂಟಾಗಬಾರದು ಎಂದು ಪ್ರಧಾನಿ ಮೋದಿ ಹೇಳಿದರು. ಇಲ್ಲಿ ಒಮ್ಮೆಲೇ  ಬಂದು  ಸೇರಬೇಡಿ. ದೇವಸ್ಥಾನ ಎಲ್ಲಿಯೂ ಹೋಗುವುದಿಲ್ಲ. ಇದು ಶತಮಾನಗಳವರೆಗೆ ಇರುತ್ತದೆ. ನೀವು ಜನವರಿ, ಫೆಬ್ರವರಿ, ಅಥವಾ ಮಾರ್ಚ್ ಅಥವಾ ಮುಂದಿನ ವರ್ಷ ಯಾವಾಗ ಬೇಕಾದರೂ ಬರಬಹುದು. ಆದರೆ ಜನವರಿ 22 ರಂದು ಬರಬೇಡಿ. ದೇವಾಲಯದ ಆಡಳಿತ ಮಂಡಳಿಗೆ ಭಕ್ತರಿಂದ ತೊಂದರೆ ಆಗಬಾರದು’ ಎಂದು ಪ್ರಧಾನಿ ಮೋದಿ ಹೇಳಿದರು.

ಸಮಾರಂಭಕ್ಕೆ ಕೆಲವೇ ಜನರನ್ನು ಆಹ್ವಾನಿಸಲಾಗಿದೆ. 23 ರ ನಂತರ ಭೇಟಿ ನೀಡಲು ಸುಲಭವಾಗುತ್ತದೆ ಎಂದಿದ್ದಾರೆ ಪ್ರಧಾನಿ.

ಅಯೋಧ್ಯಾ ನಗರವನ್ನು ದೇಶದಲ್ಲೇ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಅಯೋಧ್ಯೆ ಜನರನ್ನು ಒತ್ತಾಯಿಸಿದ ಪ್ರಧಾನಿ ಮೋದಿ, “ಅಯೋಧ್ಯೆ ಈಗ ಲಕ್ಷಗಟ್ಟಲೆ ಸಂದರ್ಶಕರಿಗೆ ಆತಿಥ್ಯ ವಹಿಸಲು ಸಿದ್ಧರಾಗಿರಬೇಕು ಮತ್ತು ಅದು ಶಾಶ್ವತವಾಗಿ ಮುಂದುವರಿಯುತ್ತದೆ. ಅಯೋಧ್ಯೆಯನ್ನು ದೇಶದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಲು ಅಯೋಧ್ಯೆಯ ಜನರು ಪ್ರತಿಜ್ಞೆ ಮಾಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Viral Video: ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮನೆಯಲ್ಲಿ ಟೀ ಕುಡಿದ ಪ್ರಧಾನಿ ಮೋದಿ 

ಜನವರಿ 14 ರಿಂದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನ

ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ, ಭಾರತದ ಎಲ್ಲಾ ದೇವಾಲಯಗಳು ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಬೇಕು ಎಂದ ಮೋದಿ ಜನವರಿ 14 ರಿಂದ 8 ದಿನಗಳ ಸ್ವಚ್ಛತಾ ಅಭಿಯಾನ ನಡೆಸಬೇಕೆಂದು ಹೇಳಿದ್ದಾರೆ. ರಾಮನು ಇಡೀ ದೇಶಕ್ಕೆ ಸೇರಿದವನು.  ಈಗ ಅವ ಮತ್ತೆ ಬರುತ್ತಿದ್ದಾನೆ. ಯಾವುದೇ ದೇವಾಲಯವು ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಕೊಳಕು ಉಳಿಯಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Sat, 30 December 23