Liquor Policy Case: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ? ಸಿಎಂ ಕೇಜ್ರಿವಾಲ್ ಮಾಡಿರುವ ಟ್ವೀಟ್​ನಲ್ಲಿ ಏನಿದೆ?

ದೇವರು ನಿಮ್ಮೊಂದಿಗಿದ್ದಾನೆ ಮನೀಶ್, ಲಕ್ಷಾಂತರ ಮಕ್ಕಳ ಮತ್ತು ಅವರ ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ. ದೇಶ ಮತ್ತು ಸಮಾಜಕ್ಕಾಗಿ ಜೈಲಿಗೆ ಹೋದಾಗ ಜೈಲಿಗೆ ಹೋಗುವುದು ಶಾಪವಲ್ಲ, ಕೀರ್ತಿ, ನೀನು ಬೇಗ ಜೈಲಿನಿಂದ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Liquor Policy Case: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಬಂಧನ? ಸಿಎಂ ಕೇಜ್ರಿವಾಲ್ ಮಾಡಿರುವ ಟ್ವೀಟ್​ನಲ್ಲಿ ಏನಿದೆ?
ಮನೀಶ್ ಸಿಸೋಡಿಯಾ

Updated on: Feb 26, 2023 | 9:38 AM

ಅಬಕಾರಿ ನೀತಿಯಲ್ಲಿ ಅಕ್ರಮವೆಸಗಿರುವ ಆರೋಪ ಎದುರಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಬಂಧನ ಭೀತಿ ಎದುರಾಗಿದೆ. ದೇವರು ನಿಮ್ಮೊಂದಿಗಿದ್ದಾನೆ ಮನೀಶ್, ಲಕ್ಷಾಂತರ ಮಕ್ಕಳ ಮತ್ತು ಅವರ ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ. ದೇಶ ಮತ್ತು ಸಮಾಜಕ್ಕಾಗಿ ಜೈಲಿಗೆ ಹೋದಾಗ ಜೈಲಿಗೆ ಹೋಗುವುದು ಶಾಪವಲ್ಲ, ಕೀರ್ತಿ, ನೀನು ಬೇಗ ಜೈಲಿನಿಂದ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಕ್ಕಳು, ಪೋಷಕರು ಮತ್ತು ದೆಹಲಿಯ ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಮನೀಶ್ ಸಿಸೋಡಿಯಾ ಬಂಧನವಾಗಿದೆಯೇ? ಎನ್ನು ಅನುಮಾನ ಉಂಟಾಗಿದೆ.

ದೆಹಲಿಯಲ್ಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರೂ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆಮ್​ ಆದ್ಮಿ ಪಕ್ಷದ ನಾಯಕಿ ಅತಿಶಿ ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣ, ಡಿಸಿಎಂ ಮನೀಶ್ ಸಿಸೋಡಿಯಾ ಯಾವುದೇ ತಪ್ಪು ಮಾಡಿಲ್ಲ, ಮನೀಶ್ ಸಿಸೋಡಿಯಾರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ, ಸಿಬಿಐ ತನಿಖೆಗೆ ಮನೀಶ್ ಸಿಸೋಡಿಯಾ ಸಹಕಾರ ನೀಡುತ್ತಿದ್ದಾರೆ, ಆದರೂ ಉದ್ದೇಶಪೂರ್ವವಾಗಿಯೇ ಗೃಹ ಬಂಧನದಲ್ಲಿ ಇರಿಸಲಾಗಿದೆ, ಸಿಬಿಐಯನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದ್ದಾರೆ.

ದೆಹಲಿಯ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗಾಗಿ ಸಿಬಿಐ ಮುಂದೆ ಹಾಜರಾಗಲು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಮಯ ಕೋರಿದ್ದರು. ಫೆಬ್ರವರಿ 27ರ ನಂತರ ಹಾಜರಾಗುವುದಾಗಿ ಕೇಳಿದ್ದರು, ಇಂದು ಸಿಬಿಐನಿಂದ ವಿಚಾರಣೆಗಾಗಿ ನನಗೆ ನೋಟಿಸ್ ಬಂದಿದೆ, ದೆಹಲಿಯ ಬಜೆಟ್​ ಸಿದ್ಧಪಡಿಸುವ ಕಾರಣ ಫೆಬ್ರವರಿ ನಂತರ ಯಾವುದೇ ದಿನ ಸಮಯ ನೀಡುವಂತೆ ಅವರಿಗೆ ಮನವಿ ಮಾಡಿದ್ದೇನೆ ಬಜೆಟ್ ತಯಾರಿ ಅಂತಿಮ ಹಂತದಲ್ಲಿದ್ದು, ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಿದ ಸುಮಾರು ಮೂರು ತಿಂಗಳ ನಂತರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಕರೆಯಲಾಗಿದೆ. ಸಿಸೋಡಿಯಾ ಮತ್ತು ಇತರೆ ಶಂಕಿತರ ವಿರುದ್ಧ ತನಿಖೆ ಇನ್ನೂ ನಡೆಯುತ್ತಿರುವುದರಿಂದ ಚಾರ್ಜ್​ಶೀಟ್​ನಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:31 am, Sun, 26 February 23