ರೈತರಿಗೆ ಸಿಹಿ ಸುದ್ದಿ: ನಾಳೆ ಬೆಳಗಾವಿಯಲ್ಲೇ ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆ ಮಾಡಲಿರುವ ಮೋದಿ
ಈಗಾಗಲೇ ಕೊಂಚ ತಡವಾಗಿರು ಪಿಎಂ ಕಿಸಾನ್ ಯೋಜನೆಯ (PM-KISAN) 13ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರು/ಬೆಳಗಾವಿ: ಸಣ್ಣ ರೈತರ ಆರ್ಥಿಕ ಕೃಷಿಗಾರಿಕೆಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀಡುವತ್ತಿರುವ ಪಿಎಂ ಕಿಸಾನ್ ಯೋಜನೆಯ (PM-KISAN) 13ನೇ ಕಂತಿನ ಹಣ ಬಿಡುಗಡೆಗೆ ಕೊಂಚ ತಡವಾಗಿದೆ. ಕಳೆದ ತಿಂಗಳೇ ಕಂತು ಬಿಡುಗಡೆ ಆಗಬೇಕಿತ್ತು. ಆದ್ರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೇ ಫೆಬ್ರುವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.
ಹೌದು..ನಾಳೆ(ಫೆಬ್ರುವರಿ 27)ರಂದು ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ. ದೇಶದ 8 ಸಾವಿರ ರೈತರಿಗೆ 16 ಸಾವಿರ ಕೋಟಿ ರೂ. ಬಿಡುಗಡೆಯಾಗಲಿದೆ.
2019ರಲ್ಲಿ ಆರಂಭಗೊಂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಈವರೆಗೆ 2 ಸಾವಿರ ರೂಗಳ 12 ಕಂತು ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. 2022ರ ಅಕ್ಟೋಬರ್ 17ರಂದು 12ನೇ ಕಂತಿನ 2 ಸಾವಿರ ರೂ ಹಣವನ್ನು 8 ಕೋಟಿ ರೈತರ ಬ್ಯಾಂಕ್ ಖಾತೆಗೆ ಹಾಕಲಾಗಿತ್ತು. ಅಷ್ಟೂ ಸೇರಿ ಒಟ್ಟು ಮೊತ್ತವಾದ 16 ಸಾವಿರ ಕೋಟಿ ರೂ ಅನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಕೆವೈಸಿ ಭರ್ತಿ ಮಾಡಲು ಕೋರಲಾಗಿದ್ದು, ಅದಕ್ಕೆ ಕೊನೆಯ ದಿನಾಂಕ ಫೆ. 10ರಂದು ಇತ್ತು. ಕೆವೈಸಿ ಯಶಸ್ವಿಯಾಗಿದ್ದವರಿಗೆ ಈ 13ನೇ ಕಂತಿನ ಹಣ ಸಿಗುತ್ತದೆ.
ಚೆಕ್ ಮಾಡುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಹಣ ಬಿಡುಗಡೆ ಆಗಿದೆಯೇ? ಅದು ಖಾತೆಗೆ ವರ್ಗಾವಣೆಯಾಗಿದೆಯೇ ಎಂದು ಆನ್ಲೈನ್ ಮೂಲಕ ಪರಿಶೀಲಿಸುವ ಹಂತ ಹಂತದ ವಿವರ ಇಲ್ಲಿ ನೀಡಲಾಗಿದೆ.
ಚೆಕ್ ಮಾಡುವ ವಿಧಾನ ಇಲ್ಲಿದೆ
- ಪಿಎಂ ಕಿಸಾನ್ (www.kisan.gov.in) ಭೇಟಿ ನೀಡಿ.
- ವೆಬ್ ಪುಟದ ಬಲಭಾಗದ ಅಂಚಿನಲ್ಲಿರುವ ‘ಫಾರ್ಮರ್ಸ್ ಕಾರ್ನರ್’ಗೆ ಸ್ಕ್ರಾಲ್ ಮಾಡಿ.
- ‘ಬೆನಿಫೀಷಿಯರಿ ಸ್ಟೇಟಸ್’ ಎಂಬ ಸೆಕ್ಷನ್ ಅನ್ನು ಕ್ಲಿಕ್ ಮಾಡಿ.
- ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣಿಸುವ ಅರ್ಜಿಯಲ್ಲಿ ಫಲಾನುಭವಿಯ ಹೆಸರು ಭರ್ತಿ ಮಾಡಬೇಕು.
- ಹೊಸ ಪುಟದಲ್ಲಿ ಯಾವುದನ್ನು ಹುಡುಕಲು ಬಯಸುತ್ತೀರಿ ಎಂಬ ಎರಡು ಆಯ್ಕೆಗಳಿರುತ್ತವೆ.
- ದೂರವಾಣಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
- ಮೊಬೈಲ್ ಫೋನ್ ಸಂಖ್ಯೆಯನ್ನೂ ಆಯ್ಕೆ ಮಾಡಬಹುದು.
- ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿದಾಗ ಒಟಿಪಿ ಸಂದೇಶ ಬರುತ್ತದೆ. ಅದನ್ನು ನಮೂದಿಸಬೇಕು.
- ‘ಗೆಟ್ ಡಾಟಾ’ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಪಾವತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಕಾಣಿಸುತ್ತದೆ.
- ನಂತರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬ ಸಂದೇಶ ಕಾಣಿಸುತ್ತದೆ.
- ನೋಂದಣಿ ಸಂಖ್ಯೆಯ ಆಧಾರದಲ್ಲಿ ಸ್ಥಿತಿಗತಿ ಪರಿಶೀಲಿಸಲು ಬಯಸುತ್ತೀರಾದರೆ, ಅದನ್ನು ನಮೂದಿಸಿ. ನಂತರ ‘ಗೆಟ್ ಡಾಟಾ’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಸ್ಥಿತಿಗತಿ ಏನಿದೆ ಎಂಬುದು ಕಾಣಿಸುತ್ತದೆ.
- 13ನೇ ಕಂತಿನ ಹಣ ಬಿಡುಗಡೆ ಆಗಿದೆಯೋ ಇಲ್ಲವೋ ಎಂಬುದು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:15 am, Sun, 26 February 23