RD Rates: ಎಸ್​ಬಿಐ, ಎಚ್​ಡಿಎಫ್​ಸಿಯಲ್ಲಿ ಆರ್​ಡಿಗೆ ಬಡ್ಡಿ ಎಷ್ಟು ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

Highest Interest Rates For RD: ಹೆಚ್​ಡಿಎಫ್​ಸಿ ಬ್ಯಾಂಕಿನಲ್ಲಿ ಹಿರಿಯ ನಾಗರಿಕರು ಇರಿಸುವ ರೆಕರಿಂಗ್ ಡೆಪಾಸಿಟ್​ಗಳಿಗೆ ಅತಿ ಹೆಚ್ಚು ಬಡ್ಡಿ ದರ ಸಿಗುತ್ತದೆ. ಎಸ್​ಬಿಐ, ಪಿಎನ್​ಬಿ ಬ್ಯಾಂಕುಗಳಲ್ಲೂ ಉತ್ತಮ ಬಡ್ಡಿ ದರ ಇದೆ.

RD Rates: ಎಸ್​ಬಿಐ, ಎಚ್​ಡಿಎಫ್​ಸಿಯಲ್ಲಿ ಆರ್​ಡಿಗೆ ಬಡ್ಡಿ ಎಷ್ಟು ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್
ಹೆಚ್​ಡಿಎಫ್​ಸಿ ಬ್ಯಾಂಕ್
Follow us
|

Updated on:Feb 26, 2023 | 12:27 PM

ಬೆಂಗಳೂರು: ಆರ್​ಡಿ ಅಥವಾ ರೆಕರಿಂಗ್ ಡೆಪಾಸಿಟ್ (RD- Recurring Deposit) ಸಾಮಾನ್ಯ ಜನರಿಗೆ ಬಹಳ ಉಪಯುಕ್ತವಾಗಿರುವ ಮತ್ತು ಸುಲಭವಾಗಿ ಹೂಡಿಕೆ ಮಾಡಲು ಸಾಧ್ಯವಾಗಿಸುವ ಮಾರ್ಗವಾಗಿದೆ. ಅದರಲ್ಲೂ ಸಂಬಳದಾರರ ಪಾಲಿಗೆ ಇದು ಅತಿಹೆಚ್ಚು ಆದ್ಯತೆಯ ಹೂಡಿಕೆ ಮಾರ್ಗವಾಗಿದೆ. ಬ್ಯಾಂಕ್ ಖಾತೆಯಲ್ಲಿ ಪ್ರತೀ ತಿಂಗಳು ನಮ್ಮಿಷ್ಟದ ನಿರ್ದಿಷ್ಟ ಹಣವನ್ನು ಪ್ರತೀ ತಿಂಗಳೂ ಹೂಡಿಕೆ ಮಾಡಬಹುದು. ಹೆಚ್ಚುಕಡಿಮೆ ಫಿಕ್ಸೆಡ್ ಡೆಪಾಸಿಟ್ ಆಥವಾ ನಿಶ್ಚಿತ ಠೇವಣಿಗೆ ಸಿಗುವಷ್ಟೇ ಬಡ್ಡಿ ಆರ್​ಡಿಗೂ ಸಿಗುತ್ತದೆ. ಹಿರಿಯ ನಾಗರಿಕರಿಗೆ ಅತಿಹೆಚ್ಚು ಬಡ್ಡಿ ಸಿಗುತ್ತದೆ.

ಬಹುತೇಕ ಎಲ್ಲಾ ಬ್ಯಾಂಕುಗಳೂ ಉತ್ತಮ ಬಡ್ಡಿ ದರಗಳನ್ನು ನೀಡುತ್ತವೆ. ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ, ಪೋಸ್ಟ್ ಆಫೀಸ್, ಪಂಬಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರ ಆರ್​ಡಿಗೆ ಅತಿಹೆಚ್ಚು ಬಡ್ಡಿ ಕೊಡಲಾಗುತ್ತದೆ.

ಎಸ್​ಬಿಐಯಲ್ಲಿ ಠೇವಣಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿಗೆ ನೀಡುವಷ್ಟೇ ಬಡ್ಡಿಯನ್ನು ಆರ್​ಡಿಗೂ ನೀಡಲಾಗುತ್ತದೆ. ಹಿರಿಯ ನಾಗರಿಕರು 1-2 ವರ್ಷ ಕಾಲ ಇರಿಸುವ ಆರ್​ಡಿಗೆ ಶೇ. 7.3ರಷ್ಟು ಬಡ್ಡಿ ಸಿಗುತ್ತದೆ. 5-10 ವರ್ಷ ಕಾಲದ ಠೇವಣಿಗೆ ಶೇ. 7.5ರಷ್ಟು ಬಡ್ಡಿ ಕೊಡಲಾಗುತ್ತದೆ.

ಇದನ್ನೂ ಓದಿIndia-China: ಚೀನಾದ ಕಳಪೆ ವಸ್ತುಗಳಿಂದ ಭಾರತಕ್ಕೆ ಅನ್ಯಾಯ; ಅರ್​ಸಿಇಪಿಗೆ ಸಹಿ ಹಾಕದಿದ್ದುದು ಸರಿ: ಕೇಂದ್ರ ಸಚಿವ

ಎಚ್​ಡಿಎಫ್​ಸಿ ಆರ್​ಡಿ:

ಹೆಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರ ಆರ್​ಡಿಗೆ ಶೇ. 7.75ರವರೆಗೂ ಬಡ್ಡಿ ಸಿಗುತ್ತದೆ. 6ರಿಂದ 10 ವರ್ಷ ಅವಧಿಯವರೆಗಿನ ಆರ್​​ಡಿ ಠೇವಣಿಗಳಿಗೆ ಗರಿಷ್ಠ ಬಡ್ಡಿ ಇದೆ. 24ರಿಂದ 60 ತಿಂಗಳ ಅವಧಿಯ ಆರ್​ಡಿಗಳಿಗೆ ಶೇ. 7.5ರಷ್ಟು ಬಡ್ಡಿ ಕೊಡಲಾಗುತ್ತದೆ.

ಪಿಎನ್​ಬಿಯಲ್ಲಿ ಶೇ. 7.55 ಬಡ್ಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ಹಿರಿಯ ನಾಗರಿಕರು ಇರಿಸುವ ರೆಕರಿಂಗ್ ಡೆಪಾಸಿಟ್​ಗಳಿಗೆ ಶೇ. 7.55ರಷ್ಟು ಬಡ್ಡಿ ಕೊಡಲಾಗುತ್ತದೆ. ಇದು 2-3 ವರ್ಷಗಳ ಅವಧಿಯ ಠೇವಣಿಗೆ ಸಿಗುವ ಬಡ್ಡಿ. 5ರಿಂದ 10 ವರ್ಷಗಳ ಆರ್​ಡಿಗೆ ಶೇ. 7.35ರಷ್ಟು ಬಡ್ಡಿ ಕೊಡಲಾಗುತ್ತದೆ.

ಅಂಚೆ ಕಚೇರಿಯ ಆರ್​ಡಿ

ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ಸ್ ಆರ್​ಡಿ ಖಾತೆ ತೆರೆದರೆ ಶೇ. 5.8ರಷ್ಟು ಬಡ್ಡಿ ಸಿಗುತ್ತದೆ. ಆದರೆ, ಇಲ್ಲಿನ ಆರ್​ಡಿ ಮೆಚ್ಯೂರ್ ಆಗುವುದು 5 ವರ್ಷಕ್ಕೆ.

ಬ್ಯಾಂಕುಗಳಲ್ಲಿನ ಆರ್​ಡಿಗಳನ್ನು ನಿಶ್ಚಿತ ಅವಧಿಯವರೆಗೆ ಮುಂದುವರಿಸಿದರೆ ನಿಶ್ಚಿತ ಬಡ್ಡಿ ದರಗಳು ಅನ್ವಯ ಆಗುತ್ತವೆ. ತುರ್ತಾಗಿ ಹಣ ಬೇಕಿದ್ದು ಆರ್​ಡಿಯನ್ನು ಅವಧಿಗೂ ಮುನ್ನವೇ ಖಾತೆ ಮುಚ್ಚಿದರೆ ಬಡ್ಡಿ ಕಡಿಮೆ ಸಿಗುತ್ತದೆ. ಕಟ್ಟಿರುವ ಅಸಲು ಹಣಕ್ಕೆ ತುಸು ಬಡ್ಡಿ ಜಮೆಯಾಗಿ ಹಣ ಕೈಸೇರುತ್ತದೆ.

ಹೆಚ್ಚಿನ ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Sun, 26 February 23

ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ