ಲಿವ್ ಇನ್ ಸಂಗಾತಿಯ ಕೊಂದು ದೇಹವನ್ನು ಟ್ರಂಕ್​ನಲ್ಲಿ ಹಾಕಿ ಸುಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?

ಝಾನ್ಸಿಯಲ್ಲಿ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಕೊಂದು ದೇಹವನ್ನು ಟ್ರಂಕ್‌ನಲ್ಲಿಟ್ಟು ಸುಟ್ಟ ಘಟನೆ ಬೆಳಕಿಗೆ ಬಂದಿದೆ. ಆರೋಪಿ ರಾಮ್ ಸಿಂಗ್‌ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದು, ಹಣದ ವಿಷಯವಾಗಿ ಜಗಳದಿಂದ ಈ ಕೊಲೆ ನಡೆದಿದೆ. ಸುಟ್ಟ ಶವದ ಭಾಗಗಳನ್ನು ನದಿಗೆ ಎಸೆಯುವಾಗ ಲಾರಿ ಚಾಲಕನಿಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲಿವ್ ಇನ್ ಸಂಗಾತಿಯ ಕೊಂದು ದೇಹವನ್ನು ಟ್ರಂಕ್​ನಲ್ಲಿ ಹಾಕಿ ಸುಟ್ಟ ವ್ಯಕ್ತಿ, ಸಿಕ್ಕಿಬಿದ್ದಿದ್ಹೇಗೆ?
ರಾಮ್ ಸಿಂಗ್
Image Credit source: India Today

Updated on: Jan 19, 2026 | 7:45 AM

ಝಾನ್ಸಿ, ಜನವರಿ 19: ಕಳ್ಳರು, ಕೊಲೆಗಡುಕರು ಎಷ್ಟೇ ಚಾಲಾಕಿಗಳಾಗಿರಲಿ ಏನಾದರೂ ಒಂದು ಸುಳಿವು ಬಿಟ್ಟುಕೊಡುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಯಾರಿಗೂ ಗೊತ್ತಾಗದಂತೆ ದೇಹವನ್ನು ಸುಟ್ಟು, ಭಸ್ಮವನ್ನು ನದಿಗೆಸೆದರೂ ಕೊನೆಗೂ ಆರೋಪಿಯ ಕೃತ್ಯ ಬಹಿರಂಗವಾಗಿದೆ. ಇಬ್ಬರು ಪತ್ನಿಯರಿದ್ದರೂ ಮೂರನೇ ಮಹಿಳೆ ಜತೆ ವ್ಯಕ್ತಿ ಅಕ್ರಮ ಸಂಬಂಧ ಹೊಂದಿರುವುದಷ್ಟೇ ಅಲ್ಲದೆ ಆಕೆಯನ್ನು ಬರ್ಬರವಾಗಿ ಹತ್ಯೆ(Murder) ಮಾಡಿ ಸುಟ್ಟು ಹಾಕಿರುವ ಘಟನೆ ಝಾನ್ಸಿಯಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ನೀಲಿ ಲೋಹದ ಟ್ರಂಕ್ ಒಳಗೆ ಹಾಕಿ ಸುಟ್ಟು, ಚಿತಾಭಸ್ಮವನ್ನು ನದಿಯಲ್ಲಿ ವಿಲೇವಾರಿ ಮಾಡಿದ್ದಾನೆ. ಅದನ್ನು ಕಂಡು  ಲೋಡರ್ ಚಾಲಕ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಪರಾದ ಬೆಳಕಿಗೆ ಬಂದಿದೆ.ಆರೋಪಿ ರಾಮ್ ಸಿಂಗ್ ನಿವೃತ್ತ ರೈಲ್ವೆ ಸಿಬ್ಬಂದಿಯಾಗಿದ್ದು, ಅವರಿಗೆ ಈಗಾಗಲೇ ಇಬ್ಬರು ಪತ್ನಿಯರಿದ್ದಾರೆ.

ಇದರ ಹೊರತಾಗಿಯೂ ಆತ ಮೂರನೇ ಮಹಿಳೆ ಜತೆ ಲಿವ್ ಇನ್ ಸಂಬಂಧದಲ್ಲಿದ್ದ. ಮಹಿಳೆಯನ್ನು ಜನವರಿ 8 ರಂದು ಕೊಲೆ ಮಾಡಿದ್ದ, ಬಳಿಕ ಆರೋಪಿ ಶವವನ್ನು ಟಾರ್ಪಲ್​ನಲ್ಲಿ ಸುತ್ತಿ ಸ್ವಲ್ಪ ಸಮಯದವರೆಗೆ ಮರೆ ಮಾಡಿದ್ದ. ನಂತರ ಟ್ರಂಕ್ ಖರೀದಿಸಿ, ಶವವನ್ನು ಪೆಟ್ಟಿಗೆಯ ಒಳಗಿರಿಸಿ ಬೆಂಕಿ ಹಚ್ಚಿದ್ದಾನೆ. ಶವ ಸಂಪೂರ್ಣವಾಗಿ ಸುಟ್ಟುಹೋದ ಬಳಿಕ, ಸಾಕ್ಷ್ಯವನ್ನು ನಾಶ ಮಾಡಲು ಚಿತಾಭಸ್ಮವನ್ನು ನದಿಗೆ ಎಸೆದಿದ್ದಾನೆ.

ಮತ್ತಷ್ಟು ಓದಿ: ಅಸ್ಸಾಂ ಮೂಲದ ಕಾರ್ಮಿಕನ ಸಾವಿಗೆ ಸಿನಿಮೀಯ ಟ್ವಿಸ್ಟ್​​: ಮಗನಿಂದಲೇ ತಂದೆಯ ಹತ್ಯೆ!

ರಾಮ್ ಸಿಂಗ್ ತನ್ನ ಮಗನ ಸಹಾಯದಿಂದ, ಬಾಡಿಗೆ ಲೋಡರ್ ವಾಹನವನ್ನು ಬಳಸಿ ಟ್ರಂಕ್ ಅನ್ನು ತನ್ನ ಎರಡನೇ ಹೆಂಡತಿಯ ಮನೆಗೆ ಕಳುಹಿಸಿದ್ದ. ಸಾಗಣೆಯ ಸಮಯದಲ್ಲಿ ಪೆಟ್ಟಿಗೆಯಿಂದ ನೀರು ಸೋರಿಕೆಯಾಗಲು ಪ್ರಾರಂಭಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ, ಇದು ಲೋಡರ್ ಚಾಲಕನ ಅನುಮಾನವನ್ನು ಹೆಚ್ಚಿಸಿತು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಸ್ಥಳಕ್ಕೆ ತಲುಪಿ ಮಹಿಳೆಯ ಮನೆಯಲ್ಲಿ ಬೀಗ ಹಾಕಿದ ಪೆಟ್ಟಿಗೆಯನ್ನು ಒಡೆದಾಗ, ಒಳಗೆ ಸುಟ್ಟ ಮಾನವ ಮೂಳೆಗಳು ಮತ್ತು ಕಲ್ಲಿದ್ದಲಿನಂತಹ ವಸ್ತುಗಳು ಕಂಡುಬಂದವು. ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಮುಖ ಆರೋಪಿಗೆ ಈಗಾಗಲೇ ಇಬ್ಬರು ಹೆಂಡತಿಯರು ಮತ್ತು ಮಕ್ಕಳಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.ಮಹಿಳೆ ಆಗಾಗ ಹಣದ ಬೇಡಿಕೆ ಇಡುತ್ತಿದ್ದಳು ಇದು ಜಗಳಕ್ಕೆ ಕಾರಣವಾಯಿತು ಎಂದು ರಾಮ್ ಸಿಂಗ್ ಹೇಳಿದ್ದಾನೆ. ಆರೋಪಿಯ ಮಗ ಸೇರಿದಂತೆ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ