ಲೋಕಸಭಾ ಚುನಾವಣೆ: ಉತ್ತರ ಪ್ರದೇಶದ 40, ಬಿಹಾರದ 12 ಸೀಟುಗಳ ಮೇಲೆ ಕಾಂಗ್ರೆಸ್​ ಕಣ್ಣು

|

Updated on: Jan 04, 2024 | 8:50 AM

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಕಾಂಗ್ರೆಸ್​ ಚರ್ಚೆ ನಡೆಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಉತ್ತರಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳ ಪೈಕಿ 40 ಸ್ಥಾನಗಳಿಗೆ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಬಲಿಷ್ಠ ಚುನಾವಣಾ ತಂತ್ರಗಾರಿಕೆಗೆ ಸಜ್ಜಾಗಿದೆ . ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 10 ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ಲೋಕಸಭಾ ಚುನಾವಣೆ: ಉತ್ತರ ಪ್ರದೇಶದ 40, ಬಿಹಾರದ 12 ಸೀಟುಗಳ ಮೇಲೆ ಕಾಂಗ್ರೆಸ್​ ಕಣ್ಣು
ರಾಹುಲ್ ಗಾಂಧಿ
Image Credit source: Udayavani
Follow us on

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣಾ ದಿನಾಂಕ(Lok Sabha Election) ಘೋಷಣೆಯಾಗಲಿದೆ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಕುರಿತು ಕಾಂಗ್ರೆಸ್​ ಚರ್ಚೆ ನಡೆಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಉತ್ತರಪ್ರದೇಶದಲ್ಲಿ 80 ಲೋಕಸಭಾ ಸ್ಥಾನಗಳ ಪೈಕಿ 40 ಸ್ಥಾನಗಳಿಗೆ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಬಲಿಷ್ಠ ಚುನಾವಣಾ ತಂತ್ರಗಾರಿಕೆಗೆ ಸಜ್ಜಾಗಿದೆ . ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 10 ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ಕಾಂಗ್ರೆಸ್ ತಾನು ಪ್ರಬಲ ಮತ್ತು ಸ್ಪರ್ಧಾತ್ಮಕ ಸ್ಥಾನವನ್ನು ಹೊಂದಿದೆ ಎಂದು ನಂಬಿರುವ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 40 ಸ್ಥಾನಗಳ ಪಟ್ಟಿಯನ್ನು ಗುರುವಾರ ನಡೆಯಲಿರುವ ಕಾಂಗ್ರೆಸ್​ ಸಭೆಯಲ್ಲಿ ಪ್ರಸ್ತುತಪಡಿಸುವ ನಿರೀಕ್ಷೆ ಇದೆ.
ಯುಪಿಯಲ್ಲಿ ಕಾಂಗ್ರೆಸ್ ಪರಿಗಣಿಸುತ್ತಿರುವ ಸ್ಥಾನಗಳು:

ಅಮ್ರೋಹಾ
ಸಹರಾನ್ಪುರ್
ಲಖಿಂಪುರ ಖಿರಿ
ಬಿಜ್ನೋರ್
ಮೊರಾದಾಬಾದ್
ಲಕ್ನೋ
ರಾಯ್ಬರೇಲಿ
ಅಮೇಥಿ
ಬಾರಾಬಂಕಿ
ಸಮಾಜವಾದಿ ಪಕ್ಷಕ್ಕೆ ಅನುಕೂಲಕರ ಕ್ಷೇತ್ರವಾಗಿರುವ ಗಮನಾರ್ಹ ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ಅಂತೆಯೇ, ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯದಲ್ಲಿ 10 ರಿಂದ 12 ಸ್ಥಾನಗಳಲ್ಲಿ ಸ್ಪರ್ಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

ಬಿಹಾರ

ಕತಿಹಾರ್
ಕಿಶನ್‌ಗಂಜ್
ಪೂರ್ಣಿಯಾ/ಕಟಿಹಾರ್ (ಒಂದಾದರೂ)
ಔರಂಗಾಬಾದ್
ಭಾಗಲ್ಪುರ
ಬಕ್ಸರ್
ಸಸಾರಂ
ಮೋತಿಹಾರಿ/ವಾಲ್ಮೀಕಿನಗರ (ಯಾವುದೋ ಒಂದು)
ನಾವಡ
ಪಾಟ್ನಾ

ಕಾಂಗ್ರೆಸ್ ಪಕ್ಷದ ಆಯಾ ರಾಜ್ಯಗಳ ಅಧ್ಯಕ್ಷರು, ಉಸ್ತುವಾರಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಉನ್ನತ ನಾಯಕತ್ವದ ನಿರ್ಣಾಯಕ ಸಭೆ ನಡೆಸುತ್ತಿದೆ.

ಮತ್ತಷ್ಟು ಓದಿ: ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ 11 ಸಚಿವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ, ಏನಿದರ ಮರ್ಮ?

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಭಾಗವಹಿಸಲಿದ್ದಾರೆ. ಡಿಸೆಂಬರ್‌ನಲ್ಲಿ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಮೊದಲ ಸಭೆ ಇದಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ