ನಾನು ಇಸ್ಲಾಂ ವಿರೋಧಿಯಲ್ಲ, ಮತದಾನಕ್ಕೂ ಮುನ್ನ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಎಂದ ಮೋದಿ

|

Updated on: May 07, 2024 | 11:37 AM

ನಾನು ಇಸ್ಲಾಂ ವಿರೋಧಿಯಲ್ಲ ನೀವು ಮತದಾನ ಮಾಡುವ ಮುನ್ನ ಒಮ್ಮೆ ನಿಮ್ಮ ಮಕ್ಕಳ ಭವಿಷ್ಯದ ಕುರಿತು ಯೋಚನೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ. ಟೈಮ್ಸ್​ ನೌ ನವಭಾರತ್​ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದರು.

ನಾನು ಇಸ್ಲಾಂ ವಿರೋಧಿಯಲ್ಲ, ಮತದಾನಕ್ಕೂ ಮುನ್ನ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ಎಂದ ಮೋದಿ
ನರೇಂದ್ರ ಮೋದಿ
Image Credit source: Mint
Follow us on

ನಾನು ಇಸ್ಲಾಂ ವಿರೋಧಿಸುವುದಿಲ್ಲ, ನೀವು ಮತದಾನ ಮಾಡುವ ಮುನ್ನ ನಿಮ್ಮ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಒಮ್ಮೆ ಯೋಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಟೈಮ್ಸ್​ ನೌ ನವಭಾರತ್​ಗೆ ನೀಡಿದ ಸಂದರ್ಶನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಗ್ರೆಸ್ ಅವಧಿಯಲ್ಲಿ ಸರ್ಕಾರದ ಯೋಜನೆಗಳ ಲಾಭವನ್ನು ನೀವು ಏಕೆ ಪಡೆಯಲಿಲ್ಲ ಎಂಬುದನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು. ಗುಜರಾತ್‌ನಲ್ಲಿ 10 ವರ್ಷಗಳಲ್ಲಿ 7 ಗಲಭೆಗಳು ನಡೆದಿವೆ ಆದರೆ 2002 ರ ನಂತರ ಗುಜರಾತ್‌ನಲ್ಲಿ ಒಂದೇ ಒಂದು ಗಲಭೆ ನಡೆದಿಲ್ಲ ಎಂದರು.

ದೇಶವು ತುಂಬಾ ಪ್ರಗತಿಯಲ್ಲಿದೆ, ನಿಮ್ಮ ಸಮಾಜದಲ್ಲಿ ಕೊರತೆಯನ್ನು ಅನುಭವಿಸಿದರೆ ಅದಕ್ಕೆ ಕಾರಣವೇನು? ಕಾಂಗ್ರೆಸ್ ಕಾಲದಲ್ಲಿ ಸರ್ಕಾರದ ವ್ಯವಸ್ಥೆಗಳ ಲಾಭ ಏಕೆ ಸಿಗಲಿಲ್ಲ? ಕಾಂಗ್ರೆಸ್ ಅವಧಿಯಲ್ಲಿ ನೀವು ಈ ದುಸ್ಥಿತಿಗೆ ಬಲಿಯಾಗಿದ್ದೀರಾ? ಒಮ್ಮೆ ಆತ್ಮಾವಲೋಕನ ಮಾಡಿ ನಿರ್ಧರಿಸಿ ಎಂದರು.

ಜಗತ್ತಿನಲ್ಲಿ ಮುಸ್ಲಿಂ ಸಮಾಜ ಬದಲಾಗುತ್ತಿದೆ, ಇಂದು ನಾನು ಗಲ್ಫ್ ದೇಶಗಳಿಗೆ ಹೋಗುತ್ತೇನೆ, ನನಗೆ ವೈಯಕ್ತಿಕವಾಗಿ ತುಂಬಾ ಗೌರವ ಸಿಗುತ್ತದೆ ಮತ್ತು ಭಾರತವೂ ಅದನ್ನು ಪಡೆಯುತ್ತಿದೆ. ಇಲ್ಲಿ ವಿರೋಧವಿದೆ ಎಂದು ಅವರೆಲ್ಲ ಭಾವಿಸುತ್ತಾರೆ, ಯೋಗವು ಸೌದಿ ಅರೇಬಿಯಾದಲ್ಲಿ ಅಧಿಕೃತ ಪಠ್ಯಕ್ರಮದ ವಿಷಯವಾಗಿದೆ. ನಾನು ಇಲ್ಲಿ ಯೋಗದ ಬಗ್ಗೆ ಮಾತನಾಡಿದರೆ ಅದು ಮುಸ್ಲಿಂ ವಿರೋಧಿ ಎಂದು ಹೇಳುತ್ತೀರಿ.

ಮುಸ್ಲಿಂ ಸಮುದಾಯವು ಕನಿಷ್ಠ ತಮ್ಮ ಮಕ್ಕಳ ಜೀವನದ ಬಗ್ಗೆ ಯೋಚಿಸಿ, ಅವರ ಭವಿಷ್ಯದ ಬಗ್ಗೆ ಯೋಚಿಸಿ ಎಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು. ಯಾವ ಸಮಾಜವೂ ಜೀತದಾಳುಗಳಂತೆ ಬದುಕುವುದು ನನಗೆ ಇಷ್ಟವಿಲ್ಲ. ನಾನು ಮುಸ್ಲಿಮರ ವಿರೋಧಿಯಲ್ಲ, ತ್ರಿವಳಿ ತಲಾಖ್​ ರದ್ದುಗೊಳಿಸಿದಾಗ ಎಲ್ಲರೂ ನನ್ನನ್ನು ಹರಸಿದ್ದಾರೆ.

ಆಯುಷ್ಮಾನ್ ಕಾರ್ಡ್​ ಎಲ್ಲರಿಗೂ ನೀಡಿದ್ದೇನೆ, ಕೋವಿಡ್​ ಲಸಿಕೆ ಎಲ್ಲರಿಗೂ ಸಿಗುವಂತೆ ಮಾಡಿದ್ದೇನೆ ಎಲ್ಲೂ ತಾರತಮ್ಯ ಮಾಡಿಲ್ಲ ಎಂದು ಹೇಳಿದರು. ಇಂದು ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಆರಂಭವಾಗಿದ್ದು, ಪ್ರಧಾನಿ ಮೋದಿ ಅಹಮದಾಬಾದ್​ನಲ್ಲಿ ಮತ ಚಲಾಯಿಸಿದರು. ಏಪ್ರಿಲ್ 19 ರಂದು ಪ್ರಾರಂಭವಾಗಿ ಜೂನ್ 1 ಕ್ಕೆ ಕೊನೆಗೊಳ್ಳಲಿದ್ದು ಜೂನ್​ 4ಕ್ಕೆ ಫಲಿತಾಂಶ ಹೊರಬರಲಿದೆ.

ಮತ್ತಷ್ಟು ಓದಿ: ಲೋಕಸಭಾ ಚುನಾವಣೆ 2024: ಮತದಾನದ ಬಗ್ಗೆ ಅರಿವು ಮೂಡಿಸಿದ ಬಾಲಿವುಡ್​ ಕಲಾವಿದರ ವಿಡಿಯೋ ಹಂಚಿಕೊಂಡ ಮೋದಿ

ಮುಸ್ಲಿಮರಿಗೆ ಮೀಸಲಾತಿ ಸಿಗುವುದಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ನಾನು ಹೇಳುತ್ತಿರುವುದು ಮೀಸಲಾತಿಯನ್ನು ನೀಡುವಲ್ಲಿ ಧರ್ಮವು ಆಧಾರವಾಗುವುದಿಲ್ಲ. ದೇಶದಲ್ಲಿ ಬಡವರಲ್ಲಿ ಎಲ್ಲಾ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಪಾರ್ಸಿಗಳು ಸೇರಿದ್ದಾರೆ; ಎಲ್ಲರೂ ಮೀಸಲಾತಿಯ ಪ್ರಯೋಜನಗಳನ್ನು ಪಡೆಯಬೇಕು.

ದಲಿತರು ಮತ್ತು ಆದಿವಾಸಿಗಳು ಸಾವಿರಾರು ವರ್ಷಗಳಿಂದ ಅನ್ಯಾಯವನ್ನು ಎದುರಿಸುತ್ತಿದ್ದಾರೆ ಮತ್ತು ನಮ್ಮ ಸಂವಿಧಾನದ ತಯಾರಕರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮತ್ತು ಅದಕ್ಕೆ ನಾವು ಕೃತಜ್ಞರಾಗಿರುತ್ತೇವೆ ಮತ್ತು ಯಾವುದೇ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸುವುದಿಲ್ಲ ಎಂದು ಮೋದಿ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ