ಅಮೃತಸರದ ಸ್ವರ್ಣ ಮಂದಿರ(Golden Temple)ದ ಬಳಿ ಮೂರನೇ ಬಾರಿಗೆ ಸ್ಫೋಟ ಸಂಭವಿಸಿದೆ. ಪೊಲೀಸ್ ಸಿಬ್ಬಂದಿ ಮತ್ತು ಫೋರೆನ್ಸಿಕ್ ತಂಡದ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಸಂಭವಿಸಿದ ಮೂರನೇ ಸ್ಫೋಟ ಇದಾಗಿದೆ.
ಕಳೆದ ತಿಂಗಳು, ಏಪ್ರಿಲ್ 12 ರಂದು, ಬಟಿಂಡಾ ಮಿಲಿಟರಿ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸೇನಾ ಯೋಧರು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದರು. ನಾಲ್ವರು ಯೋಧರನ್ನು ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಎಂದು ಗುರುತಿಸಲಾಗಿದೆ.
Amritsar low intensity explosion cases solved
5 persons arrested
Press Conference will be held in #Amritsar @PunjabPoliceInd committed to maintaining peace and harmony in Punjab as per directions of CM @BhagwantMann
— DGP Punjab Police (@DGPPunjabPolice) May 11, 2023
ಕರ್ತವ್ಯದ ಅಂತ್ಯದ ನಂತರ ಅವರು ತಮ್ಮ ಕೊಠಡಿಗಳಲ್ಲಿ ಮಲಗಿದ್ದರು, ಇಬ್ಬರು ಮುಸುಕುಧಾರಿ ವ್ಯಕ್ತಿಗಳು, ಬಿಳಿ ಕುರ್ತಾ ಪೈಜಾಮಾದಲ್ಲಿ, ರೈಫಲ್‌ಗಳು ಮತ್ತು ಹರಿತವಾದ ಆಯುಧಗಳಿಂದ ಅವರ ಮೇಲೆ ದಾಳಿ ಮಾಡಿದರು. ನಾಲ್ವರು ಯೋಧರು ಅವರ ಕೊಠಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಮತ್ತಷ್ಟು ಓದಿ: Golden Temple: ಅಮೃತಸರದ ಸ್ವರ್ಣ ಮಂದಿರದ ಬಳಿ ಮತ್ತೊಂದು ಸ್ಫೋಟ
ಸಿಖ್ಖರ ಪವಿತ್ರ ಸ್ವರ್ಣಮಂದಿರದ ಸಮೀಪ ಸೋಮವಾರ ಕಚ್ಚಾಬಾಂಬ್ ಸ್ಫೋಟ ಸಂಭವಿಸಿತ್ತು ಅದು ಎರಡನೇ ಸ್ಫೋಟವಾಗಿತ್ತು ಒಬ್ಬರಿಗೆ ಗಾಯವಾಗಿತ್ತು. ಮೊನ್ನೆ ಕೂಡ ಇದೇ ರೀತಿಯ ಕಚ್ಚಾ ಬಾಂಬ್ ಸ್ಫೋಟಗೊಂಡು ಜನರನ್ನು ಆತಂಕಕ್ಕೀಡು ಮಾಡಿದ ಬೆನ್ನಲ್ಲೇ ಅದೇ ರೀತಿಯ ಘಟನೆ ನಡೆದಿದೆ.
ಖಲಿಸ್ತಾನಿ ಉಗ್ರರ ಉಪಟಳ ಹೆಚ್ಚಿರುವ ನಡುವೆಯೇ ಸಂಭವಿಸಿದ ಈ ಸ್ಫೋಟಗಳು ಅಮೃತಸರ ಜನರನ್ನು ಆತಂಕಕ್ಕೀಡು ಮಾಡಿವೆ. ಸ್ವರ್ಣ ಮಂದಿರಕ್ಕೆ ಹೋಗುವ, ಅಂಗಡಿ ಮುಂಗಟ್ಟುಗಳಿಂದ ತುಂಬಿರುವ ಮುಖ್ಯ ದಾರಿಯಲ್ಲಿ ಬೆಳಗ್ಗೆ 6.15ರ ಸುಮಾರಿಗೆ ಸ್ಫೋಟ ಸಂಭವಿಸಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:17 am, Thu, 11 May 23