AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TS Inter Results 2023: ತೆಲಂಗಾಣ ಇಂಟರ್​ ಮೀಡಿಯೇಟ್​ ಪರೀಕ್ಷೆ ಫಲಿತಾಂಶದ ಬಳಿಕ 24 ಗಂಟೆಗಳಲ್ಲಿ 6 ವಿದ್ಯಾರ್ಥಿಗಳು ಆತ್ಮಹತ್ಯೆ

ತೆಲಂಗಾಣ ರಾಜ್ಯ ಮಧ್ಯಂತರ ಶಿಕ್ಷಣ ಮಂಡಳಿ (TSBIE) 2023ರ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ(Exam Result)ವನ್ನು ಪ್ರಕಟಿಸಿದೆ.

TS Inter Results 2023: ತೆಲಂಗಾಣ ಇಂಟರ್​ ಮೀಡಿಯೇಟ್​ ಪರೀಕ್ಷೆ ಫಲಿತಾಂಶದ ಬಳಿಕ 24 ಗಂಟೆಗಳಲ್ಲಿ 6 ವಿದ್ಯಾರ್ಥಿಗಳು ಆತ್ಮಹತ್ಯೆ
ತರಗತಿ
ನಯನಾ ರಾಜೀವ್
|

Updated on: May 11, 2023 | 8:23 AM

Share

ತೆಲಂಗಾಣ ರಾಜ್ಯ ಮಧ್ಯಂತರ ಶಿಕ್ಷಣ ಮಂಡಳಿ (TSBIE) 2023ರ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ(Exam Result)ವನ್ನು ಪ್ರಕಟಿಸಿದೆ. ತೆಲಂಗಾಣದಲ್ಲಿ ಮಂಗಳವಾರ 11 ಹಾಗೂ 12ನೇ ತರಗತಿಯ ಫಲಿತಾಂಶಕ್ಕೆ ಸಮಾನವಾದ ಇಂಡರ್​ಮೀಡಿಯೇಟ್​ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿ 24 ಗಂಟೆಗಳಲ್ಲಿ 6 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅದರಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ಆರು ಮಂದಿ ಸಾವಿಗೆ ಶರಣಾಗಿದ್ದಾರೆ. ಹೈದರಾಬಾದ್​ನಲ್ಲಿ ಐವರು ಮೃತಪಟ್ಟಿದ್ದಾರೆ, ನಿಜಾಮಾಬಾದ್​ನಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ವನಸ್ಥಲಿಪುರಂನಲ್ಲಿರುವ ತನ್ನ ಮನೆಯಲ್ಲಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಯದುರ್ಗಂನಲ್ಲಿ 16 ವರ್ಷದ ಬಾಲಕಿ, ಪ್ರಥಮ ವರ್ಷದ ಇಂಟರ್‌ಮೀಡಿಯೇಟ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಪಂಜಗುಟ್ಟದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರದಂದು ನೇರಡ್‌ಮೆಟ್ ಮತ್ತು ಸೈಫಾಬಾದ್‌ನಲ್ಲಿ ಎರಡನೇ ವರ್ಷದ ಮಧ್ಯಂತರ ವಿದ್ಯಾರ್ಥಿಗಳಾದ ಇಬ್ಬರು ಬಾಲಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಜಾಮಾಬಾದ್‌ನ ಅರ್ಮೂರ್‌ನಲ್ಲಿ ಪ್ರಥಮ ವರ್ಷದ ಇಂಟರ್‌ಮೀಡಿಯೇಟ್ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಏಪ್ರಿಲ್‌ನಲ್ಲಿ, ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಬುಡಕಟ್ಟು ವಿದ್ಯಾರ್ಥಿಯೊಬ್ಬ ಎಂಬಿಬಿಎಸ್ ಸೀಟು ಪಡೆಯಲು ಸಾಕಷ್ಟು ಅಂಕಗಳನ್ನು ಪಡೆಯಲಿಲ್ಲ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮತ್ತಷ್ಟು ಓದಿ: ಬೆಂಗಳೂರು: ಡೆತ್​ನೋಟ್​ ಬರೆದಿಟ್ಟು 7ನೇ ಮಹಡಿದಿಂದ ಜಿಗಿದ ವಿದ್ಯಾರ್ಥಿನಿ

ಗುಗೋಲೋತ್ ಕೃಷ್ಣ ಅವರು ತಮ್ಮ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ 1,000 ಅಂಕಗಳಿಗೆ 892 ಅಂಕಗಳನ್ನು ಗಳಿಸಿದ್ದರು. ಎರಡು ವಾರಗಳ ಹಿಂದೆ, ಆಂಧ್ರಪ್ರದೇಶದಲ್ಲಿ 11 ಮತ್ತು 12 ನೇ ತರಗತಿಯ ಪರೀಕ್ಷಾ ಫಲಿತಾಂಶಗಳು ಪ್ರಕಟವಾದ 48 ಗಂಟೆಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಎಲ್ಲರನ್ನು ಉತ್ತೀರ್ಣ ಎಂದು ಘೋಷಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ