ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್ ಜೈಲಿನಿಂದ ಬಿಡುಗಡೆ

ಅಮೃತಪಾಲ್ ಸಿಂಗ್ ಮತ್ತು ಅವರ 30 ಬೆಂಬಲಿಗರ ವಿರುದ್ಧ ರೂಪನಗರ ಜಿಲ್ಲೆಯ ಚಮ್ಕೌರ್ ಸಾಹಿಬ್ ನಿವಾಸಿ ಬರೀಂದರ್ ಸಿಂಗ್ ಎಂಬವರನ್ನು ಅಪಹರಿಸಿ ಥಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ

ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್ ಜೈಲಿನಿಂದ ಬಿಡುಗಡೆ
ಲವ್‌ಪ್ರೀತ್ ತೂಫಾನ್

Updated on: Feb 24, 2023 | 5:42 PM

ವಾರಿಸ್ ಪಂಜಾಬ್ ದೇ (Waris Punjab De)ಮುಖ್ಯಸ್ಥ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್‌ನ್ನು(Lovepreet Toofan) ಶುಕ್ರವಾರ ಪಂಜಾಬ್‌ನ ಅಜ್ನಾಲಾ ನ್ಯಾಯಾಲಯವು ಬಿಡುಗಡೆ ಮಾಡಲು ಆದೇಶಿಸಿದ ನಂತರ ಅಮೃತಸರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಒಂದು ದಿನದ ಹಿಂದೆ ಅಮೃತಪಾಲ್ ಸಿಂಗ್ ಬೆಂಬಲಿಗರು ಕತ್ತಿಮತ್ತು ಬಂದೂಕುಗಳನ್ನು ಝಳಪಿಸುತ್ತಾ, ಬ್ಯಾರಿಕೇಡ್‌ಗಳನ್ನು ಭೇದಿಸಿ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿದ್ದರು. ಅಪಹರಣ ಪ್ರಕರಣದ ಆರೋಪಿ ಲವ್‌ಪ್ರೀತ್ ಸಿಂಗ್ ಅಲಿಯಾಸ್ ತೂಫಾನ್‌ನನ್ನು ಬಿಡುಗಡೆ ಮಾಡಬೇಕೆಂದು ಬೆಂಬಲಿಗರು ಪೊಲೀಸ್ ಠಾಣೆಗೆ ನುಗ್ಗಿದ್ದರು.ಇದಕ್ಕೂ ಮೊದಲು, ದುಬೈನಿಂದ ಹಿಂದಿರುಗಿದ ಅಮೃತಪಾಲ್ ಸಿಂಗ್, ‘ವಾರಿಸ್ ಪಂಜಾಬ್ ದೇ’ ಎಂಬ ಸಂಘಟನೆಯ ಮುಖ್ಯಸ್ಥರು, ತಮ್ಮ ಬೆಂಬಲಿಗ ಲವ್‌ಪ್ರೀತ್ ಸಿಂಗ್ ಬಿಡುಗಡೆಗೆ ಸುಗ್ರೀವಾಜ್ಞೆ ನೀಡಿದ್ದರು.

ಅಮೃತಪಾಲ್ ಸಿಂಗ್ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಗತಿಯೇ ಶಾ ಅವರಿಗೆ ಬರಲಿದೆ ಎಂದಿದ್ದ ಸಿಂಗ್.


ಅಮೃತಪಾಲ್ ಸಿಂಗ್ ಮತ್ತು ಅವರ 30 ಬೆಂಬಲಿಗರ ವಿರುದ್ಧ ರೂಪನಗರ ಜಿಲ್ಲೆಯ ಚಮ್ಕೌರ್ ಸಾಹಿಬ್ ನಿವಾಸಿ ಬರೀಂದರ್ ಸಿಂಗ್ ಎಂಬವರನ್ನು ಅಪಹರಿಸಿ ಥಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ, ಕಾರ್ಯಕರ್ತ ದೀಪ್ ಸಿಧು ಅವರು ಸ್ಥಾಪಿಸಿದ ‘ವಾರಿಸ್ ಪಂಜಾಬ್ ದೇ’ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ ಅಮೃತಪಾಲ್ ಸಿಂಗ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Fri, 24 February 23