ಖಲಿಸ್ತಾನಿ ಅಮೃತಪಾಲ್ ಸಿಂಗ್ ಮಾತು ಕೂಡಾ ರಾಹುಲ್ ಗಾಂಧಿಯಂತೆಯೇ ಇದೆ: ಹಿಮಂತ ಬಿಸ್ವಾ ಶರ್ಮಾ
1947 ರ ಮೊದಲು ಭಾರತ ಇರಲಿಲ್ಲ, ಇಂಡಿಯಾ ಇರಲಿಲ್ಲ. ಇದು ರಾಜ್ಯಗಳ ಒಕ್ಕೂಟವಾಗಿದೆ. ನಾವು ಒಕ್ಕೂಟಗಳನ್ನು ಗೌರವಿಸಬೇಕು. ನಾವು ರಾಜ್ಯಗಳನ್ನು ಗೌರವಿಸಬೇಕು. ಭಾರತದ ವ್ಯಾಖ್ಯಾನವನ್ನು ನಾನು ಒಪ್ಪುವುದಿಲ್ಲ ಎಂದು ಅಮೃತಪಾಲ್ ಸಿಂಗ್ ಟಿವಿ ವಾಹಿನಿಯೊಂದರಲ್ಲಿ ಹೇಳಿದ್ದರು
ಪಂಜಾಬ್‌ನ ತೀವ್ರಗಾಮಿ ನಾಯಕ, ಸ್ವಯಂ ಘೋಷಿತ ಖಲಿಸ್ತಾನಿ ಅಮೃತಪಾಲ್ ಸಿಂಗ್ (Amritpal Singh) ಅವರು ರಾಹುಲ್ ಗಾಂಧಿ (Rahul Gandhi) ಅವರ ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕರು “ವಿಭಜನೆಯುಂಟು ಮಾಡುವ ಭಾಷೆ” ಬಳಸಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಶರ್ಮಾ ಪಟ್ಟು ಹಿಡಿದಿದ್ದಾರೆ. ರಾಹುಲ್ ಗಾಂಧಿಯವರ ಭಾಷೆ ಯಾರು ಮಾತನಾಡುತ್ತಾರೆ ನೋಡಿ. ಅಮೃತಸರದ ಪೊಲೀಸ್ ಠಾಣೆಗೆ ಧಿಕ್ಕಾರದ ರೀತಿಯಲ್ಲಿ ದಾಳಿ ಮಾಡಿದ ಅಮೃತಪಾಲ್ ಸಿಂಗ್ ಅವರ ಮಾತನ್ನು ಅನುಕರಿಸುತ್ತಾರೆ ಎಂದು ಅಸ್ಸಾಂ ಪೊಲೀಸರು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ಅನ್ನು ಬಂಧಿಸಿದ ಒಂದು ದಿನದ ನಂತರ ಶರ್ಮಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಪ್ರಧಾನಿ ಮೋದಿಯವರ ‘ನರೇಂದ್ರ ಗೌತಮ್‌ದಾಸ್’ ಎಂದು ವ್ಯಂಗ್ಯವಾಡಿದ್ದಕ್ಕಾಗಿ ಅವರನ್ನು ಬುಧವಾರ ಬಂಧಿಸಲಾಗಿತ್ತು.
1947 ರ ಮೊದಲು ಭಾರತ ಇರಲಿಲ್ಲ, ಇಂಡಿಯಾ ಇರಲಿಲ್ಲ. ಇದು ರಾಜ್ಯಗಳ ಒಕ್ಕೂಟವಾಗಿದೆ. ನಾವು ಒಕ್ಕೂಟಗಳನ್ನು ಗೌರವಿಸಬೇಕು. ನಾವು ರಾಜ್ಯಗಳನ್ನು ಗೌರವಿಸಬೇಕು. ಭಾರತದ ವ್ಯಾಖ್ಯಾನವನ್ನು ನಾನು ಒಪ್ಪುವುದಿಲ್ಲ ಎಂದು ಅಮೃತಪಾಲ್ ಸಿಂಗ್ ಟಿವಿ ವಾಹಿನಿಯೊಂದರಲ್ಲಿ ಹೇಳಿದ್ದರು. ಈ ವಿಡಿಯೊದ ಜತೆಗೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾಡಿದ ಭಾಷಣದ ವಿಡಿಯೊ ಟ್ವೀಟ್ ಮಾಡಿದ ಶರ್ಮಾ, ಖಲಿಸ್ತಾನಿಗಳು ರಾಹುಲ್ ಗಾಂಧಿಯವರ ಮಾತು ಅನುಸರಿಸುತ್ತಾರೆ ಎಂದಿದ್ದಾರೆ.
See who speaks the language of Rahul Gandhi!
Amritpal Singh, who stormed a police station in Amritsar in a brazen act of defiance, is imitating his words.
Congress, its leaders & all those who use divisive language to disintegrate the sanctity of ‘Akhand Bharat’ must apologise! pic.twitter.com/jDefg2EE6a
— Himanta Biswa Sarma (@himantabiswa) February 24, 2023
ಶುಕ್ರವಾರ ಬಿಡುಗಡೆಯಾದ ಲವ್‌ಪ್ರೀತ್ ತೂಫಾನ್ ಬಂಧನಕ್ಕೆ ಸಂಬಂಧಿಸಿದಂತೆ ಖಲಿಸ್ತಾನಿ ಅಮೃತಪಾಲ್ ಸಿಂಗ್ ಅವರ ಬೆಂಬಲಿಗರು ಮತ್ತು ಪೊಲೀಸರ ನಡುವೆ ಭಾರಿ ಘರ್ಷಣೆ ನಡೆದಿದ್ದು ಈ ಹೊತ್ತಲ್ಲೇ, ಅಸ್ಸಾಂ ಮುಖ್ಯಮಂತ್ರಿ ಕಾಂಗ್ರೆಸ್ ಅನ್ನು ದೂಷಿಸಿದ್ದಾರೆ.
ಇದನ್ನೂ ಓದಿ: ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್ ಜೈಲಿನಿಂದ ಬಿಡುಗಡೆ
‘ಭಿಂದ್ರನ್‌ವಾಲೆ 2.0’ ಎಂದು ಕರೆಯಲ್ಪಡುವ, ದೀಪ್ ಸಿಧು ಅವರ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರು ಇತ್ತೀಚೆಗೆ ಖಲಿಸ್ತಾನ್ ಬೇಡಿಕೆಯನ್ನು ಪುನಃ ಎತ್ತಿದ್ದಾರೆ. ಹಲವಾರು ಸಂದರ್ಶನಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಅವರು ಖಲಿಸ್ತಾನ್ ಪಿಡುಗು ಅಲ್ಲ, ದುಃಖವನ್ನು ಕೊನೆಗೊಳಿಸುವುದು ಬೇಡಿಕೆಯಾಗಿದೆ ಎಂದು ಹೇಳಿದರು. “ಖಾಲಿಸ್ತಾನ ಭಾವನೆ ಉಳಿಯುತ್ತದೆ, ನೀವು ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಖಲಿಸ್ತಾನ್ ಅನ್ನು ಸೈದ್ಧಾಂತಿಕ ದೃಷ್ಟಿಕೋನವಾಗಿ ನೋಡಬೇಕು ಎಂದಿದ್ದರು ಅವರು.
ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ. ಭಾರತವನ್ನು ರಾಷ್ಟ್ರವೆಂದು ವಿವರಿಸಲಾಗಿಲ್ಲ, ಆದರೆ ರಾಜ್ಯಗಳ ಒಕ್ಕೂಟವಾಗಿದೆ. ಇದು ಪಾಲುದಾರಿಕೆಯಾಗಿದೆ, ಸಾಮ್ರಾಜ್ಯವಲ್ಲ, ”ಎಂದು ರಾಹುಲ್ ಗಾಂಧಿ 2022 ರಲ್ಲಿ ಲೋಕಸಭೆಯಲ್ಲಿ ಹೇಳಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Fri, 24 February 23