ಮಧ್ಯಪ್ರದೇಶ: ತೆರೆದ ಬೋರ್​ಬೋಲ್​​ಗೆ ಬಿದ್ದ 6 ವರ್ಷದ ಬಾಲಕ, ಮುಂದುವರಿದ ಕಾರ್ಯಾಚರಣೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 13, 2024 | 11:16 AM

ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಆರು ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿರುವ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಗಡಿ ಸಮೀಪದ ಮಾಣಿಕಾ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕ ತೆರೆದ ಬೋರ್‌ವೆಲ್ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ರೇವಾ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಅವರು ಹೇಳಿರುವ ಪ್ರಕಾರ, ಮಗು ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದೆ.

ಮಧ್ಯಪ್ರದೇಶ, ಏ.13: ವಿಜಯಪುರದಲ್ಲಿ ಇತ್ತೀಚಗೆ 2 ವರ್ಷದ ಬಾಲಕ ಬೋರ್​ಬೋಲ್​ಗೆ ಬಿದ್ದ ಘಟನೆಯೊಂದು ನಡೆದಿತ್ತು. ಅನೇಕರ ಪ್ರಾರ್ಥನೆ, ರಕ್ಷಣೆ ಕಾರ್ಯಚರಣೆಯಿಂದ ಆ ಮಗು ಬದುಕಿ ಬಂದಿದೆ. ಇದೀಗ ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಶುಕ್ರವಾರ ಆರು ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿರುವ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಗಡಿ ಸಮೀಪದ ಮಾಣಿಕಾ ಗ್ರಾಮದಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕ ತೆರೆದ ಬೋರ್‌ವೆಲ್ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ರೇವಾ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಅವರು ಹೇಳಿರುವ ಪ್ರಕಾರ, ಮಗು ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದೆ. ಘಟನೆಯ ನಂತರ, ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆಯ (SDERF) ತಂಡವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ವಾರಣಾಸಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ನ್ನು ಕರೆಸಲಾಗಿದೆ.

ಅಧಿಕಾರಿಗಳು ಪೈಪ್ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಬಾಲಕನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿಸಿಟಿವಿ ಕ್ಯಾಮೆರಾವನ್ನು ಸಹ ಇಳಿಸಲಾಗಿದೆ. ಆದರೂ, ಕೆಲವು ಅಡಚಣೆಗಳಿಂದ ಕ್ಯಾಮೆರಾ ಬಾಲಕನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಬೋರ್‌ವೆಲ್ ಸುಮಾರು 70 ಅಡಿ ಆಳವಿದ್ದು, ಮಗುವನ್ನು ರಕ್ಷಿಸಲು ಸಮಾನಾಂತರ ಹೊಂಡವನ್ನು ತೋಡಲಾಗುತ್ತಿದೆ ಎಂದು ಹೇಳಿದ್ದಾರೆ.

20 ಗಂಟೆಗಳ ಕಾರ್ಯಾಚರಣೆ, ಸಾತ್ವಿಕ್ ಪ್ರಾಣ ರಕ್ಷಣೆ:

ವಿಜಯಪುರದಲ್ಲಿ ಸುಮಾರು 20 ಗಂಟೆಗಳ ಕಾರ್ಯಾಚರಣೆಯ ನಂತರ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಎರಡು ವರ್ಷದ ಬಾಲಕ ಸಾತ್ವಿಕ್​ನನ್ನು ರಕ್ಷಿಸಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ 32 ಸದಸ್ಯರ ತಂಡವು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿಯಿಂದ ಕಾರ್ಯಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಚುನಾವಣೆ, ಪ್ರಚಾರ ವೀಕ್ಷಿಸಲು 25 ವಿದೇಶಿ ನಾಯಕರಿಗೆ ಬಿಜೆಪಿ ಆಹ್ವಾನ

40 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದು 30 ವರ್ಷದ ವ್ಯಕ್ತಿ ಸಾವು:

ಕಳೆದ ತಿಂಗಳು ದೆಹಲಿ ಜಲ ಮಂಡಳಿ (ಡಿಜೆಬಿ) ಒಳಚರಂಡಿ ಸಂಸ್ಕರಣಾ ಘಟಕದಲ್ಲಿ 40 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದು 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದರು. ಸುಮಾರು 14 ಗಂಟೆಗಳ ಕಾರ್ಯಾಚರಣೆಯ ನಂತರ ಆ ವ್ಯಕ್ತಿ ಹೊರತೆಗೆಯಲಾಯಿತು. ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

 

Published On - 10:48 am, Sat, 13 April 24