ಲೋಕಸಭಾ ಚುನಾವಣೆ: ಚುನಾವಣೆ, ಪ್ರಚಾರ ವೀಕ್ಷಿಸಲು 25 ವಿದೇಶಿ ನಾಯಕರಿಗೆ ಬಿಜೆಪಿ ಆಹ್ವಾನ

ಬೇರೆ ದೇಶ ರಾಜಕೀಯ ನಾಯಕರನ್ನು ಭಾರತದ ಚುನಾವಣೆ ಹಾಗೂ ಪ್ರಚಾರವನ್ನು ವೀಕ್ಷಿಸಲು ಆಹ್ವಾನ ನೀಡಲಾಗಿದೆ. ಈ ಬಾರಿ ಬಿಜೆಪಿ ಪ್ರಚಾರದಲ್ಲಿ ವಿದೇಶಿ ನಾಯಕರು ಭಾಗಿಯಾಗುತ್ತಿದ್ದಾರೆ. ಬಿಜೆಪಿಯು 25 ರಾಷ್ಟ್ರಗಳ ರಾಜಕೀಯ ಪಕ್ಷಗಳಿಗೆ ಆಹ್ವಾನವನ್ನು ಕಳುಹಿಸಿದ್ದು, ಹದಿಮೂರು ಪಕ್ಷಗಳು ಇದುವರೆಗೆ ಆಹ್ವಾನವನ್ನು ಸ್ವೀಕರಿಸಿವೆ

ಲೋಕಸಭಾ ಚುನಾವಣೆ: ಚುನಾವಣೆ, ಪ್ರಚಾರ ವೀಕ್ಷಿಸಲು 25 ವಿದೇಶಿ ನಾಯಕರಿಗೆ ಬಿಜೆಪಿ ಆಹ್ವಾನ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 13, 2024 | 10:09 AM

ಈ ಬಾರಿ ಲೋಕಸಭೆ ಚುನಾವಣೆ (Lok Sabha Elections) ಪ್ರಚಾರ ಕಾವೇರಿದೆ. ಎಲ್ಲ ಕಡೆ ತಮ್ಮ ಪಕ್ಷಗಲ ಪರ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು ಎಲ್ಲ ರೀತಿಯ ಪ್ರಚಾರ ತಂತ್ರಗಳನ್ನು ರಾಜಕೀಯ ಪಕ್ಷಗಳು ಮಾಡುತ್ತಿದೆ. ಇದರ ನಡುವೆ ಬಿಜೆಪಿ ಶತಾಯಗತಾಯ ಈ ಬಾರಿ ಮತ್ತೆ ನಾವು ಅಧಿಕಾರಕ್ಕೆ ಬರಲೇಬೇಕು, 400ಕ್ಕಿಂತ ಹೆಚ್ಚು ಸ್ಥಾನವನ್ನು NDA ಮಿತ್ರ ಪಕ್ಷ ಪಡೆಯಲೇಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದೆ. ಬಿಜೆಪಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪ್ರಾರಂಭಿಸಿದೆ. ಇನ್ನು ಈ ಪ್ರಚಾರಕ್ಕೆ ಸ್ಟಾರ್ ನಟ-ನಟಿಯರನ್ನು ಕೂಡ ಬಳಸಿಕೊಂಡಿದೆ. ಇದೇ ಮೊದಲ ಬಾರಿಗೆ ಬೇರೆ ದೇಶ ರಾಜಕೀಯ ನಾಯಕರನ್ನು ಭಾರತದ ಚುನಾವಣೆ ಹಾಗೂ ಪ್ರಚಾರವನ್ನು ವೀಕ್ಷಿಸಲು ಆಹ್ವಾನ ನೀಡಲಾಗಿದೆ. ಈ ಬಾರಿ ಬಿಜೆಪಿ ಪ್ರಚಾರದಲ್ಲಿ ವಿದೇಶಿ ನಾಯಕರು ಭಾಗಿಯಾಗುತ್ತಿದ್ದಾರೆ.

ಈ ನಾಯಕರು ಭಾರತೀಯ ಜನತಾ ಪಕ್ಷದ ಆಹ್ವಾನದ ಮೇರೆಗೆ ಭಾರತದಲ್ಲಿರುತ್ತಾರೆ. ಭಾರತೀಯ ಎಕ್ಸ್‌ಪ್ರೆಸ್‌ ಪ್ರತಿಕೆ ವರದಿಯ ಪ್ರಕಾರ ಇದು ವಿಶ್ವದ ಅತಿದೊಡ್ಡ ಚುನಾವಣಾ ಪ್ರಚಾರವಾಗಿದೆ. ಸದ್ಯಕ್ಕೆ, ಬಿಜೆಪಿಯು 25 ರಾಷ್ಟ್ರಗಳ ರಾಜಕೀಯ ಪಕ್ಷಗಳಿಗೆ ಆಹ್ವಾನವನ್ನು ಕಳುಹಿಸಿದ್ದು, ಹದಿಮೂರು ಪಕ್ಷಗಳು ಇದುವರೆಗೆ ಆಹ್ವಾನವನ್ನು ಸ್ವೀಕರಿಸಿವೆ ಎಂದು ವರದಿ ಹೇಳಿದೆ.

ಯುನೈಟೆಡ್ ಸ್ಟೇಟ್ಸ್‌ನ ಎರಡು ರಾಜಕೀಯ ಪಕ್ಷಗಳು – ಆಡಳಿತಾರೂಢ ಡೆಮೋಕ್ರಾಟ್‌ಗಳು ಮತ್ತು ಆಪ್ ರಿಪಬ್ಲಿಕನ್‌ಗಳನ್ನು ಆಹ್ವಾನಿಸಲಾಗಿಲ್ಲ ಏಕೆಂದರೆ ಅಲ್ಲಿಯೂ ಕೂಡ ಚುನಾವಣೆ ನಡೆಯುವ ಕಾರಣ ಅವರು ಈ ಪ್ರಚಾರಕ್ಕೆ ಬರುತ್ತಿಲ್ಲ ಎಂದು ವರದಿ ಹೇಳಿದೆ. ಯುನೈಟೆಡ್ ಕಿಂಗ್‌ಡಮ್‌ನ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳು ಮತ್ತು ಜರ್ಮನಿಯ ಕ್ರಿಶ್ಚಿಯನ್ ಡೆಮಾಕ್ರಾಟ್‌ಗಳು ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಾದಿ ಪಕ್ಷವನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ ಎಂದು ಹೇಳಿ ಯೂಟರ್ನ್​ ಹೊಡೆದ ಮಿಸಾ ಭಾರ್ತಿ

ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ ಆಡಳಿತಾರೂಢ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ ಹಾಗೂ ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳೂ ಆಹ್ವಾನ ಪಟ್ಟಿಯಲ್ಲಿವೆ. ಇನ್ನು ಈ ಪ್ರಚಾರದಲ್ಲಿ ಭಾಗವಹಿಸುವ ನಾಯಕರು ಪ್ರಧಾನಿ ಮೋದಿ, ಗೃಹಸಚಿವ ಅಮಿತ್​ ಶಾ, ಜೆಪಿ ನಡ್ಡಾ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:05 am, Sat, 13 April 24