Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೇಮರ್ ಗಳ ಸಂವಾದ ನಡೆಸಿ ಭಾರತದಲ್ಲಿ ಗೇಮಿಂಗ್ ಭವಿಷ್ಯ ಮತ್ತು ಇತರ ಆಯಾಮಗಳನ್ನು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ

ಸಂವಾದದ ಸಮಯದಲ್ಲಿ ಪ್ರಧಾನಿ ಮೋದಿಯವರು ವಿಅರ್, ಪಿಸಿ, ಕನ್ಸೋಲ್ ಮತ್ತು ಮೊಬೈಲ್ ಗೇಮಿಂಗ್ ಮೊದಲಾದವುಗಳನ್ನು ಆಡಿ ಸಂಭ್ರಮಿಸಿದರು. ಇದೇ ಸಮಯದಲ್ಲಿ ಪ್ರಧಾನಿ ಮೋದಿಯವರು ಆನ್ ಲೈನ್ ಗೇಮಿಂಗ್ ಗೆ ನಿಯಮಾವಳಿಗಳನ್ನು ರೂಪಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚನೆಗಳನ್ನು ನೀಡಿದರು ಮತ್ತು ಈ-ಸ್ಪೋರ್ಟ್ಸ್ ಉಸ್ತುವಾರಿಯನ್ನು ವಹಿಸಿಕೊಳ್ಳಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಸೂಚಿಸಿದರು.

ಗೇಮರ್ ಗಳ ಸಂವಾದ ನಡೆಸಿ ಭಾರತದಲ್ಲಿ ಗೇಮಿಂಗ್ ಭವಿಷ್ಯ ಮತ್ತು ಇತರ ಆಯಾಮಗಳನ್ನು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ
ಗೇಮರ್ ಗಳ ಜೊತೆ ಪ್ರಧಾನಿ ಮೋದಿ ಸಂವಾದ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 13, 2024 | 11:05 AM

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಶುಕ್ರವಾರದಂದು ದೇಶದ ಟಾಪ್ ಗೇಮರ್ ಗಳ (top gamers) ಜೊತೆ ಸಮಾಲೋಚನೆ ನಡೆಸಿ ಗೇಮಿಂಗ್ ಉದ್ಯಮ ಭವಿಷ್ಯದ ಬಗ್ಗೆ ಚರ್ಚಿಸಿದರು. ವಿಡಿಯೋದಲ್ಲಿ ನಿಮಗೆ ಕಾಣುವ ಹಾಗೆ ಭಾರತದ ಟಾಪ್ ಗೇಮರ್ ಗಳಾದ ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಟಾನ್ಕರ್, ಪಾಯಲ್ ಧರೆ, ಅನ್ಷು ಬಿಶ್ತ್ ಮೊದಲಾದವರರೊಂದಿಗೆ ಗೇಮಿಂಗ್ ಬಗ್ಗೆ ಒಂದು ಮುಕ್ತ ಸಂವಾದವನನ್ನು ಪ್ರಧಾನಿ ನಡೆಸಿದರು. ಭಾರತದ ಪೌರಾಣಿಕ (mythological) ವಿಷಯಗಳ ಮೇಲೆ ಹೆಚ್ಚುತ್ತಿರುವ ಗೇಮ್ ಗಳ ಸಂಖ್ಯೆ, ಗೇಮಿಂಗನ್ನು ಒಂದು ವೃತ್ತಿಯಾಗಿ ಪರಿಗಣಿಸುವ ಆಥವಾ ಆಯ್ದುಕೊಳ್ಳುವುದು ಮತ್ತು ಉದ್ಯಮದಲ್ಲಿ ಮಹಿಳೆಯರ ತೊಡಗಿಸಿಕೊಳ್ಳುವಿಕೆಯ ಬಗ್ಗೆ ಮೇಲೆ ಪ್ರಧಾನಿ ಮೋದಿ ಗೇಮರ್ ಗಳ ಚರ್ಚೆ ನಡೆಸಿದರು.

ಎಲ್ಲಾ ಉದ್ಯಮಗಳಲ್ಲಿ ಎದುರಾಗುವ ಸವಾಲುಗಳ ಹಾಗೆ ಗೇಮಿಂಗ್ ಉದ್ಯಮದಲ್ಲಿರುವವರಿಗೂ ಸಾಕಷ್ಟು ಸವಾಲುಗಳಿವೆ ಮತ್ತು ಗೇಮಿಂಗ್ ಬಗ್ಗೆ ನಮ್ಮ ದೇಶದಲ್ಲಿ ಹಲವಾರಯ ತಪ್ಪು ಗ್ರಹಿಕೆಗಳಿವೆ. ಈ ಸಂಗತಿಗಳನ್ನು ಕುರಿತು ಪ್ರಧಾನಿ ಮೋದಿ ಯುವ ಗೇಮರ್ ಗಳ ಅನಿಸಿಕೆ ಮತ್ತು ಆಬಿಪ್ರಾಯಗಳನ್ನು ಕೇಳಿದರು. ಕೌಶಲ್ಯ-ಆಧಾರಿತ ಗೇಮ್ ಗಳು ಮತ್ತು ತ್ವರಿತ ಗತಿಯಲ್ಲಿ ಆದಾಯ ತಂದುಕೊಡುವ ಗೇಮ್ ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗೇಮರ್ ಗಳು ಎದುರಿಸುವ ಗೊಂದಲ ಮತ್ತು ನಿವಾರಣೆಗಳನ್ನು ಪ್ರಧಾನಿ ಮೋದಿ ಕೇಳಿ ತಿಳಿದುಕೊಂಡರು. ಎರಡು ಬಗೆಯ ಗೇಮ್ ಗಳ ನಡುವೆ ವ್ಯತ್ಯಾಸವಿರಬೇಕೆನ್ನುವ ಸಂಗತಿಯನ್ನು ಗೇಮರ್ ಗಳು ಪ್ರಧಾನಿಯವರ ಗಮನಕ್ಕೆ ತಂದರು. ಕೆಲವರು ಇದನ್ನೇ ಚಟವಾಗಿಸಿಕೊಂಡು ಗೇಮಿಂಗ್ ವ್ಯಸನಿಗಳಾಗುವ ವಿಷಯದಲ್ಲಿ ಗೇಮರ್ ಗಳು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ:  PM Modi, Bill Gates: ​ಪ್ರಧಾನಿ ಮೋದಿ, ಬಿಲ್ ಗೇಟ್ಸ್ ಸಂವಾದದ ವಿಡಿಯೋ ಇಲ್ಲಿದೆ ನೋಡಿ

ಸಂವಾದದ ಸಮಯದಲ್ಲಿ ಪ್ರಧಾನಿ ಮೋದಿಯವರು ವಿಅರ್, ಪಿಸಿ, ಕನ್ಸೋಲ್ ಮತ್ತು ಮೊಬೈಲ್ ಗೇಮಿಂಗ್ ಮೊದಲಾದವುಗಳನ್ನು ಆಡಿ ಸಂಭ್ರಮಿಸಿದರು. ಇದೇ ಸಮಯದಲ್ಲಿ ಪ್ರಧಾನಿ ಮೋದಿಯವರು ಆನ್ ಲೈನ್ ಗೇಮಿಂಗ್ ಗೆ ನಿಯಮಾವಳಿಗಳನ್ನು ರೂಪಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯಕ್ಕೆ ಸೂಚನೆಗಳನ್ನು ನೀಡಿದರು ಮತ್ತು ಈ-ಸ್ಪೋರ್ಟ್ಸ್ ಉಸ್ತುವಾರಿಯನ್ನು ವಹಿಸಿಕೊಳ್ಳಲು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸೂಚಿಸಿದರು.

ಪ್ರಧಾನಿ ಮೋದಿ ಗೇಮರ್ ಗಳ ಜೊತೆ ನಡೆಸಿದ ಸಂವಾದದ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರ ಕಾಮೆಂಟ್ ಗಳು ನಕಾರಾತ್ಮಕ ಧೋರಣೆಯಲ್ಲಿದ್ದರೆ ಬಹಳಷ್ಟು ಜನ ಮೋದಿಯವರ ಈ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ಮತ್ತು ಸಂತಸ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಭಾರತದ ಗೇಮರ್ ಗಳು ಗ್ಲೋಬಲ್ ಗೇಮರ್ ಗಳ ಜೊತೆ ಪೈಪೋಟಿ ನಡೆಸಲು ಶಕ್ತರಾಗಿದ್ದಾರೆ, ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಮೋದೀಜೀ ಅವರು ಗಿಟಿಎ 6 ಕ್ಕಿಂತ ಮೊದಲು ಗೇಮ್ ಗಳನ್ನು ಆಡುವುದು ನಾವು ನೋಡಿದ್ದೇವೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ 50 ವರ್ಷಗಳಲ್ಲಿ ಮಾಡದ್ದನ್ನು ಕೇವಲ 10 ವರ್ಷಗಳಲ್ಲಿ ಮಾಡಿರುವ ಪ್ರಧಾನಿ ಮೋದಿ ಒಬ್ಬ ಕ್ರಾಂತಿಪುರುಷ: ಬಸನಗೌಡ ಯತ್ನಾಳ್

Published On - 11:00 am, Sat, 13 April 24