ಗೇಮಿಂಗ್ ಮೇಲೆ ನಿಬಂಧನೆ, ಕಟ್ಟಳೆಗಳನ್ನು ಹೇರುವ ಅವಶ್ಯಕತೆಯಿಲ್ಲ: ಪ್ರಧಾನಿ ನರೆಂದ್ರ ಮೋದಿ
ಗೇಮಿಂಗ್ ಅನ್ನು ಕಾನೂನು ವ್ಯಾಪ್ತಿಗೆ ಒಳಪಡಡಿಸುವ ಬಗ್ಗೆ ಮಾತು ಬಂದಾಗ ಪ್ರಧಾನಿ ಮೋದಿ, ಅದರ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಗೇಮಿಂಗ್ ಮೇಲೆ ಒಂದು ನಿಯಂತ್ರಣ ಸಂಸ್ಥೆ ಸ್ಥಾಪಿಸುವುದು ಅಥವಾ ಅದರ ಮೇಲೆ ಕಟ್ಟಳೆಗಳನ್ನು ಹೇರುವುದು ಅಸಮಂಜಸ ಅನಿಸುತ್ತದೆ. ಮೂಗು ತೂರಿಸುವುದು ಸರ್ಕಾರದ ಸ್ವಾಭಾವಿಕ ಪ್ರಕ್ರಿಯೆ, ಗೇಮಿಂಗ್ ಒಂದು ನಿಬಂಧನೆಯ ಅಡಿ ತಂದು ಸರ್ಕಾರದ ಹಸ್ತಕ್ಷೇಪ ನಡೆಸುವುದು ಬೇಕಿಲ್ಲ ಎಂದು ಪ್ರಧಾನಿ ಹೇಳುತ್ತಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಸ್ವಭಾವವೇ ಹಾಗೆ, ಯುವಕರೊಂದಿಗೆ ಯುವಕರಾಗುತ್ತಾರೆ, ಮಕ್ಕಳೊಂದಿಗೆ ಮಕ್ಕಳಾಗುತ್ತಾರೆ. ನಿನ್ನೆ ಅವರು ದೇಶದ ಖ್ಯಾತ ಗೇಮರ್ ಗಳ (Gamers) ಜೊತೆ ಒಂದು ಸಂವಾದ (interaction) ನಡೆಸಿದಾಗ ಈ ಅಂಶ ಮತ್ತೊಮ್ಮೆ ಸಾಬೀತಾಯಿತು. ಸಂವಾದದಲ್ಲಿ ಭಾಗಿಯಾಗಿದ್ದ ಪಾಯಲ್ ಧರ್ ಹೆಸರಿನ ಯುವತಿ, ಸರ್ ನಿಮ್ಮ ಜೊತೆ ಮಾತಾಡುವಾಗ ನೀವು ದೇಶದ ಪ್ರಧಾನಿ ಮತ್ತು ನಮಗಿಂತ ಬಹಳ ಹಿರಿಯರು ಅನ್ನುವ ಭಾವನೆ ಮೂಡುತ್ತಿಲ್ಲ ಅಂತ ಹೇಳಿದಾಗ ತಟ್ಟನೆ ಉತ್ತರಿಸಿದ ಪ್ರಧಾನಿ ಮೋದಿ, ನಾನು ಹಿರಿಯ ಅಂತ ಯಾರು ಹೇಳಿದ್ದು, ಜನಕ್ಕೆ ಪ್ರಬುದ್ಧನಂತೆ ಕಾಣಲು ತಲೆಗೂದಲು, ಹಾಗೂ ಗಡ್ಡಮೀಸೆಗೆ ಬಿಳಿ ಬಣ್ಣ ಹಾಕುತ್ತೇನೆ ಅಂತ ನಗುತ್ತಾ ಹೇಳಿದರು.
ನಿಮಗೆ ಗೊತ್ತಿರಬಹುದು, ಗೇಮಿಂಗ್ ನಲ್ಲಿ ತೊಡಗಿರುವವರು, ತಮ್ಮ ಮೂಲನಾಮ ಬಿಟ್ಟು ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡಿರುತ್ತಾರೆ. ಈ ವಿಷಯ ಚರ್ಚೆಗೆ ಬಂದಾಗ ಪ್ರಧಾನಿ ಮೋದಿ, ಜನ ಬಹಳ ಸಮಯದ ಹಿಂದೆಯೇ ಜನ ತನಗೆ ‘ನಮೋ’ ಎಂಬ ಹೆಸರು ನೀಡಿದ್ದಾರೆ ಎಂದರು.
ವಿಡಿಯೋ ನೋಡುವಾಗ, ಪ್ರಧಾನಿ ಮೋದಿ ತಮಗಿಂತ ಬಹಳ ಚಿಕ್ಕವಯಸ್ಸಿನ ಯುವಕರೊಂದಿಗೆ ಮಾತಾಡುತ್ತಿದ್ದಾರೆ ಅಂತ ನಿಮಗೂ ಅನಿಸುವುದಿಲ್ಲ. ಗೇಮಿಂಗ್ ನಲ್ಲಿ ಆಸಕ್ತಿ ಇಲ್ಲದವರು ಅಥವಾ ಅವುಗಳ ಬಗ್ಗೆ ನಕಾರಾತ್ಮಕ ಧೋರಣೆ ಉಳ್ಳವರು ಗೇಮರ್ ಗಳನ್ನು ಥಗ್ ಗಳೆಂದು ಉಲ್ಲೇಖಿಸುತ್ತಾರೆ. ಆದರಿಂದ ನಿಮಗೆ ಬೇಸರ ಅನಿಸದೇ ಅಂತ ಪ್ರಧಾನಿ ಮೋದಿ ಕೇಳಿದಾಗ ಗೇಮರ್ ಒಬ್ಬರು, ಖಂಡಿತ ಇಲ್ಲ, ಗೇಮಿಂಗ್ ಜೂಜಲ್ಲ. ಮನೆಗಳಲ್ಲೂ ತಂದೆತಾಯಿಗಳ ಬೆಂಬಲ ನಮಗಿದೆ ಮತ್ತು ಗೇಮಿಂಗ್ ಈಗ ಎಲ್ಲೆಡೆ ಗುರುತಿಸಿಕೊಳ್ಳುತ್ತಿದೆ ಮತ್ತು ಅದಕ್ಕೆ ಮಾನ್ಯತೆ ಸಿಗುತ್ತಿದೆ ಅನ್ನುತ್ತಾರೆ. ಆಗ ಪ್ರಧಾನಿ ಮೋದಿ, ಥಗ್ ಸೇ ಆಪ್ ಥಕ್ತೆ ನಹೀಂ! ಅಂದಾಗ ಯುವಕರೆಲ್ಲ ಜೋರಾಗಿ ನಗುತ್ತಾರೆ.
ಇದನ್ನೂ ಓದಿ: ಗೇಮರ್ ಗಳ ಸಂವಾದ ನಡೆಸಿ ಭಾರತದಲ್ಲಿ ಗೇಮಿಂಗ್ ಭವಿಷ್ಯ ಮತ್ತು ಇತರ ಆಯಾಮಗಳನ್ನು ಚರ್ಚಿಸಿದ ಪ್ರಧಾನಿ ನರೇಂದ್ರ ಮೋದಿ
ಗೇಮಿಂಗ್ ಅನ್ನು ಕಾನೂನು ವ್ಯಾಪ್ತಿಗೆ ಒಳಪಡಡಿಸುವ ಬಗ್ಗೆ ಮಾತು ಬಂದಾಗ ಪ್ರಧಾನಿ ಮೋದಿ, ಅದರ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಗೇಮಿಂಗ್ ಮೇಲೆ ಒಂದು ನಿಯಂತ್ರಣ ಸಂಸ್ಥೆ ಸ್ಥಾಪಿಸುವುದು ಅಥವಾ ಅದರ ಮೇಲೆ ಕಟ್ಟಳೆಗಳನ್ನು ಹೇರುವುದು ಅಸಮಂಜಸ ಅನಿಸುತ್ತದೆ. ಮೂಗು ತೂರಿಸುವುದು ಸರ್ಕಾರದ ಸ್ವಾಭಾವಿಕ ಪ್ರಕ್ರಿಯೆ, ಗೇಮಿಂಗ್ ಒಂದು ನಿಬಂಧನೆಯ ಅಡಿ ತಂದು ಸರ್ಕಾರದ ಹಸ್ತಕ್ಷೇಪ ನಡೆಸುವುದು ಬೇಕಿಲ್ಲ, ದೇಶದ ಬಡವರ್ಗಕ್ಕೆ ಸರಕಾರದ ಮಧ್ಯಸ್ಥಿಕೆ ಅವಶ್ಯಕತೆಯಿರುತ್ತದೆ. ನಮ್ಮ ಸರ್ಕಾರದ ಗುರಿ ಮತ್ತು ಉದ್ದೇಶಗಳು ಭಿನ್ನವಾಗಿವೆ. 2047ರ ಹೊತ್ತಿಗೆ, ದೇಶದ ಎಲ್ಲ ಮಧ್ಯಮ ವರ್ಗದ ಕುಟುಂಬಗಳನ್ನು ಸಂಕಷ್ಟಗಳಿಂದ ದೂರ ಮಾಡುವುದು ನಮ್ಮ ದ್ಯೇಯವಾಗಿದೆ ಎಂದು ಪ್ರಧಾನಿ ಹೇಳಿದರು,
ಸಂವಾದಲ್ಲಿ ಭಾಗವಹಿಸಿದ್ದ ಅನಿಮೇಶ್ ಅಗರ್ವಾಲ್, ಮಿಥಿಲೇಶ್ ಪಟನ್ಕರ್, ಪಾಯಲ್ ಧರೆ, ನಮನ್ ಮಾಥುರ್ ಮತ್ತು ಅನ್ಷು ಬಿಶ್ತ್ ಮೊದಲಾದವರು ಪ್ರಧಾನಿ ಮೋದಿಯವರೊಂದಿಗೆ ಮಾತಾಡುವ ಅವಕಾಶ ಸಿಕ್ಕಿದ್ದು ತಮ್ಮ ಸೌಭಾಗ್ಯ ಮತ್ತು ಬದುಕಿನಲ್ಲಿ ಕೇವಲ ಒಮ್ಮೆಮಾತ್ರ ಎದುರಾಗಬಹುದಾದ ಅದೃಷ್ಟ ಎಂದರು. ಪ್ರಧಾನಿ ಮೋದಿ ನಮ್ಮ ದೇಶದ ಅತಿದೊಡ್ಡ ಇನ್ ಫ್ಲುಯೆನ್ಸರ್ ಆಗಿದ್ದಾರೆ ಅಂತ ಯುವಕರು ಅಭಿಮಾನದಿಂದ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇಶದ ಅಖಂಡತೆ ಮತ್ತು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಅಂತ ಜನಕ್ಕೆ ಅರ್ಥವಾಗಿದೆ: ಡಾ ಕೆ ಸುಧಾಕರ್