ಕಾಂಗ್ರೆಸ್ 50 ವರ್ಷಗಳಲ್ಲಿ ಮಾಡದ್ದನ್ನು ಕೇವಲ 10 ವರ್ಷಗಳಲ್ಲಿ ಮಾಡಿರುವ ಪ್ರಧಾನಿ ಮೋದಿ ಒಬ್ಬ ಕ್ರಾಂತಿಪುರುಷ: ಬಸನಗೌಡ ಯತ್ನಾಳ್
ಆ ಶಿವಾಜಿ ನಂತರ ಈಗ ದೇಶದಲ್ಲಿ ಮತ್ತೊಬ್ಬ ಶಿವಾಜಿ ಅವತರಿಸಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪದಲ್ಲಿ ಎಂದು ಯತ್ನಾಳ್ ಹೇಳಿದರು. ಮೋದಿಯವರು ಏನು ಮಾಡಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಕಾಂಗ್ರೆಸ್ 50-60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಕೇವಲ 10 ವರ್ಷದಲ್ಲಿ ಮಾಡಿದ್ದಾರೆ, ಅವರೊಬ್ಬ ಕ್ರಾಂತಿ ಪುರುಷ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಕಾರವಾರ: ನಗರದಲ್ಲಿಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಪರ ಪ್ರಚಾರ ಮಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು, ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿರೋದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗಾಗಿ ಅಲ್ಲ, ಈ ದೇಶವನ್ನು ರಕ್ಷಿಸಲು ಮತ್ತು ಹಿಂದೂತ್ವವನ್ನು ಉಳಿಸಲು ಎಂದು ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮಾತಾಡಿದ ಯತ್ನಾಳ್, ಹಿಂದೂತ್ವ ಉಳಿಸಲು ಅವರು ಮಾಡಿದ್ದು ಸಾಮಾನ್ಯ ಕೆಲಸವಲ್ಲ, ಅವರಿಲ್ಲದೆ ಹೋಗಿದ್ದರೆ ಇವತ್ತು ಭಾರತದ ಹಿಂದೂಗಳೆಲ್ಲ ಸುನ್ನತಿ ಮಾಡಿಕೊಂಡು ದಾಡಿಬಿಟ್ಟುಕೊಂಡು ತಿರುಗಬೇಕಾಗುತಿತ್ತು ಎಂದರು. ಆ ಶಿವಾಜಿ ನಂತರ ಈಗ ದೇಶದಲ್ಲಿ ಮತ್ತೊಬ್ಬ ಶಿವಾಜಿ ಅವತರಿಸಿದ್ದಾರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪದಲ್ಲಿ ಎಂದು ಯತ್ನಾಳ್ ಹೇಳಿದರು. ಮೋದಿಯವರು ಏನು ಮಾಡಿದ್ದಾರೆ ಅಂತ ಕಾಂಗ್ರೆಸ್ ನವರು ಕೇಳುತ್ತಾರೆ. ಕಾಂಗ್ರೆಸ್ 50-60 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಕೇವಲ 10 ವರ್ಷದಲ್ಲಿ ಮಾಡಿದ್ದಾರೆ, ಅವರೊಬ್ಬ ಕ್ರಾಂತಿ ಪುರುಷ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ನಾನೇ ಮುಖ್ಯಮಂತ್ರಿ: ಬಸನಗೌಡ ಪಾಟೀಲ್ ಯತ್ನಾಳ್
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

