ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ನಾನೇ ಮುಖ್ಯಮಂತ್ರಿ: ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೆ ನಾನೇ ಮುಖ್ಯಮಂತ್ರಿ: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 12, 2024 | 11:05 AM

ಅವರ ಮನೆಗಳಿಗೆ ಹೋಗಿ ಅವರ ಪಾದಗಳಿಗೆ ನಮಸ್ಕರಿಸುವ ಜರೂರತ್ತು ಏನಿದೆ? ಇಲ್ಲಿಯ ಜನ ತಮ್ಮ ಹೊಲಗಳಲ್ಲಿ ಕಬ್ಬು ಬೆಳೆಯುತ್ತಾರೆಯೇ ಹೊರತು ಜಾರಕಿಹೊಳಿ ಅವರಿಗೆ ಸೇರಿದ ಹೊಲಗಳಲ್ಲಿ ಅಲ್ಲ, ಕಷ್ಟಪಟ್ಟು ದುಡಿಯುವ ರೈತರು ಸಾಹುಕಾರರ ಕಾಲಿಗೆ ಬೀಳುವ ಅವಶ್ಯಕತೆ ಏನಿದೆ ಎಂದು ಕೇಳಿದರು.

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಪರ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ನಿಸ್ಸಂದೇಹವಾಗಿ ಸ್ಟಾರ್ ಪ್ರಚಾರಕ. ಅವರೊಬ್ಬ ಮಾಸ್ ಲೀಡರ್ (mass leader) ಮತ್ತು ಅವರಿದ್ದಲ್ಲಿ ಜನ ಸೇರುತ್ತಾರೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿಯಲ್ಲಿ ಅವರು ಬಿಜೆಪಿ ಅಣ್ಣಾ ಸಾಹೇಬ ಜೊಲ್ಲೆ (Anna Saheb Jolle) ಪ್ರಚಾರ ಮಾಡಿದ ಯತ್ನಾಳ್ ಸ್ಥಳೀಯ ಜನ ಸತೀಶ್ ಜಾರಕಿಹೊಳಿ ಅವರಿಗೆ ಅಗತ್ಯಕ್ಕಿಂತ ಹೆಚ್ಚು ಗೌರವ ನೀಡುವುದನ್ನು ನಿಲ್ಲಿಸಿ ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳಿದರು. ಅವರ ಮನೆಗಳಿಗೆ ಹೋಗಿ ಅವರ ಪಾದಗಳಿಗೆ ನಮಸ್ಕರಿಸುವ ಜರೂರತ್ತು ಏನಿದೆ? ಇಲ್ಲಿಯ ಜನ ತಮ್ಮ ಹೊಲಗಳಲ್ಲಿ ಕಬ್ಬು ಬೆಳೆಯುತ್ತಾರೆಯೇ ಹೊರತು ಜಾರಕಿಹೊಳಿ ಅವರಿಗೆ ಸೇರಿದ ಹೊಲಗಳಲ್ಲಿ ಅಲ್ಲ, ಕಷ್ಟಪಟ್ಟು ದುಡಿಯುವ ರೈತರು ಸಾಹುಕಾರರ ಕಾಲಿಗೆ ಬೀಳುವ ಅವಶ್ಯಕತೆ ಏನಿದೆ ಎಂದು ಕೇಳಿದರು. ಮುಂದಿನ ಸಲ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಕ್ಕರೆ ತಾನೇ ರಾಜ್ಯದ ಮುಖ್ಯಮಂತ್ರಿಯಾಗೋದು ಎಂದು ಬಿಎಸ್ ಯಡಿಯೂರಪ್ಪ ಕುಟುಂಬವನ್ನು ಯತ್ನಾಳ್ ಪರೋಕ್ಷವಾಗಿ ಕೆಣಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಸನಗೌಡ ಪಾಟೀಲ್ ಯತ್ನಾಳ್ ಮಾತುಗಳಲ್ಲಿ ವೈರಾಗ್ಯದ ಛಾಯೆ ಇಣುಕುತ್ತಿರುವುದು ಆಶ್ಚರ್ಯ ಮೂಡಿಸುತ್ತದೆ!