ಜೋರು ಹಿಡಿದ ಆಪರೇಶನ್ ಹಸ್ತ, ಚನ್ನಪಟ್ಟಣದ ಸುಮಾರು 300 ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ!
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬೇರೆ ಬೇರೆ ಭಾಗಗಳ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಲೇ ಇದ್ದಾರೆ ಇದುವರೆಗೆ ಏನಿಲ್ಲವೆಂದರೂ ಸುಮಾರು 5,000 ಮುಖಂಡರು ಪಕ್ಷಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಹೊಸದಾಗಿ ಪಕ್ಷ ಸೇರಿದವರಿಗೆ ಸಮಯ ವ್ಯರ್ಥ ಮಾಡದಂತೆ ತಿಳಿಸಿರುವುದಾಗಿ ಹೇಳಿದ ಶಿವಕುಮಾರ್ ಅವರ ಭವಿಷ್ಯ ಮುಖ್ಯ ಮತ್ತು ಅದರ ಬಗ್ಗೆಯೂ ತಮ್ಮ ಪಕ್ಷ ಯೋಚಿಸಬೇಕಾಗುತ್ತದೆ ಎಂದರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಆಪರೇಶನ್ ಹಸ್ತ ಮುಂದುವರಿಸಿದ್ದಾರೆ ಮತ್ತು ಚುನಾವಣೆ ಹತ್ತಿರವಾಗುತ್ತಿರುವಂತೆ ಅದು ಮತ್ತಷ್ಟು ಜೋರು ಹಿಡಿದಿದೆ. ಗುರುವಾರ ತಡರಾತ್ರಿ ಚನ್ನಪಟ್ಟಣ, ಮಾಗಡಿ, ಆನೇಕಲ್ ಮತ್ತು ಕುಣಿಗಲ್ ಭಾಗಗಳ ಸುಮಾರು 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು (JDS workers) ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಅವರನ್ನ ಪಕ್ಷಕ್ಕೆ ಬರಮಾಡಿಕೊಂಡು ಮಾತಾಡಿದ ಶಿವಕುಮಾರ್ ಮೊನ್ನೆ ರಾತ್ರಿ ಸಹ 12-13 ಜೆಡಿಎಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅವರೆಲ್ಲ ಹೆಚ್ ಡಿ ಕುಮಾರಸ್ವಾಮಿಯವರ (HJD Kumaraswamy) ಕಟ್ಟಾ ಬೆಂಬಲಿರಾಗಿದ್ದರು ಎಂದು ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬೇರೆ ಬೇರೆ ಭಾಗಗಳ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಲೇ ಇದ್ದಾರೆ ಇದುವರೆಗೆ ಏನಿಲ್ಲವೆಂದರೂ ಸುಮಾರು 5,000 ಮುಖಂಡರು ಪಕ್ಷಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಹೊಸದಾಗಿ ಪಕ್ಷ ಸೇರಿದವರಿಗೆ ಸಮಯ ವ್ಯರ್ಥ ಮಾಡದಂತೆ ತಿಳಿಸಿರುವುದಾಗಿ ಹೇಳಿದ ಶಿವಕುಮಾರ್ ಅವರ ಭವಿಷ್ಯ ಮುಖ್ಯ ಮತ್ತು ಅದರ ಬಗ್ಗೆಯೂ ತಮ್ಮ ಪಕ್ಷ ಯೋಚಿಸಬೇಕಾಗುತ್ತದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರದಲ್ಲಿ ಕೃಷಿ ಸಚಿವನಾಗುವ ಕನಸು ಕಾಣೋದ್ರಲ್ಲಿ ತಪ್ಪೇನೂ ಇಲ್ಲ: ಡಿಕೆ ಶಿವಕುಮಾರ್