AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಜೋರುಗಾಳಿ ಸಹಿತ ಮಳೆ, ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ನಿರಾಳ

ದಾವಣಗೆರೆಯಲ್ಲಿ ಜೋರುಗಾಳಿ ಸಹಿತ ಮಳೆ, ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ನಿರಾಳ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 12, 2024 | 11:40 AM

ಇಂದು ಬೆಳಗ್ಗೆ ಬೆಂಗಳೂರಲ್ಲೂ ಸ್ವಲ್ಪ ಹೊತ್ತಿನ ಕಾಲ ಮೋಡ ಕವಿದ ವಾತಾವರಣವಿತ್ತು ಮತ್ತು ಮಳೆಯಾಗುವ ಲಕ್ಷಣವೂ ಕಂಡಿತ್ತು. ಎಲ್ಲೋ ದೂರದಲ್ಲಿ ಮಳೆಯಾಗಿರಬಹುದು ಅಂತ ಮನೆಗಳಲ್ಲಿ ಹಿರಿಯರು ಹೇಳಿದ್ದು ನಿಜವಾಯಿತು. ಆದರೆ ಮಾತ್ರ ಆಗಲಿಲ್ಲ ಮತ್ತು ತಾಪಮಾನ ಕ್ರಮೇಣ ಹೆಚ್ಚುತ್ತಾ ಹೋಗಿ ವಾತಾವರಣ ನಿನ್ನೆಯಂತೆ ಮಾರ್ಪಟ್ಟಿತು.

ದಾವಣಗೆರೆ: ತಲೆಯ ಮೇಲೆ ಸುಡುವ ಬಿಸಲು ಮತ್ತು ಝಳದಿಂದ ತತ್ತರಿಸಿದ್ದ ದಾವಣಗೆರೆ (Davanagere) ಜನರ ಮೇಲೆ ಇಂದು ವರುಣ (rain gods) ಕೃಪಾದೃಷ್ಟಿ ಬೀರಿದ್ದಾನೆ. ಬೆಳಗ್ಗೆ ನಗರದ ಹೆಬ್ಬಾಳ ಪ್ರದೇಶ (Hebbal area) ಸೇರಿ ಹಲವೆಡೆ ಮಳೆಯಾಗಿದೆ. ಮಳೆಯ ಜೊತೆ ಜೋರು ಗಾಳಿಯೂ ಬೀಸಿದ್ದರಿಂದ ಕೆಲ ಹಳೆಯ ಮನೆಗಳ ಹೆಂಚುಗಳು ಹಾರಿವೆ ಇಲ್ಲವೇ ಸ್ಥಾನಪಲ್ಲಟಗೊಂಡು ಮಾಳಿಗೆಗಳು ಸಡಿಲವಾಗುವಂತೆ ಮಾಡಿದೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ. ಈ ಒಂದು ಮಳೆಯಿಂದ ಕೆರೆಕುಂಟೆಗಳು ತುಂಬಲ್ಲ ಮತ್ತು ಅಂತರಜಲಮಟ್ಟ ಹೆಚ್ಚಿ ಕೊಳವೆಬಾವಿಗಳಲ್ಲಿ ನೀರು ಬರಲ್ಲ ನಿಜ, ಆದರೆ ನಗರದ ತಾಪಮಾನ ಕಡಿಮೆಯಾಗಿರುವುದರಿಂದ ಜನ ಒಂದು ಬಗೆಯ ನಿರಾಳತೆಯನ್ನು ಫೀಲ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಲ್ಲೂ ಸ್ವಲ್ಪ ಹೊತ್ತಿನ ಕಾಲ ಮೋಡ ಕವಿದ ವಾತಾವರಣವಿತ್ತು ಮತ್ತು ಮಳೆಯಾಗುವ ಲಕ್ಷಣವೂ ಕಂಡಿತ್ತು. ಎಲ್ಲೋ ದೂರದಲ್ಲಿ ಮಳೆಯಾಗಿರಬಹುದು ಅಂತ ಮನೆಗಳಲ್ಲಿ ಹಿರಿಯರು ಹೇಳಿದ್ದು ನಿಜವಾಯಿತು. ಆದರೆ ಮಾತ್ರ ಆಗಲಿಲ್ಲ ಮತ್ತು ತಾಪಮಾನ ಕ್ರಮೇಣ ಹೆಚ್ಚುತ್ತಾ ಹೋಗಿ ವಾತಾವರಣ ನಿನ್ನೆಯಂತೆ ಮಾರ್ಪಟ್ಟಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ: ಚಿಕ್ಕಮಗಳೂರು, ಬೀದರ್​​ನಲ್ಲಿ ಜೋರು ಮಳೆ