ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ: ಚಿಕ್ಕಮಗಳೂರು, ಬೀದರ್​​ನಲ್ಲಿ ಜೋರು ಮಳೆ

ಚಿಕ್ಕಮಗಳೂರು ಮತ್ತು ಬೀದರ್​ನಲ್ಲಿ ಜೋರು ಮಳೆ ಆಗಿದೆ. ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಮಲೆನಾಡಿಗರಿಗೆ ವರುಣದೇವ ತಂಪೆರೆದಿದ್ದಾನೆ. ಐದಳ್ಳಿ, ಕಣತಿ, ಮಾಗೋಡು ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆ ಸುರಿದಿದೆ. ಕಳೆದ ಐದು ದಿನದ ಹಿಂದೆ ಮಲೆನಾಡಿನಲ್ಲಿ ಮೊದಲ ಮಳೆಯಾಗಿತ್ತು. ಬಿಸಲಿನ ತಾಪದಿಂದ ಬಸವಳೆದಿದ್ದ ಜನತೆಗೆ ವರುಣನ ಸಿಂಚನವಾಗಿದೆ.

ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ: ಚಿಕ್ಕಮಗಳೂರು, ಬೀದರ್​​ನಲ್ಲಿ ಜೋರು ಮಳೆ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 17, 2024 | 9:10 PM

ಚಿಕ್ಕಮಗಳೂರು, ಮಾರ್ಚ್​​ 17: ಬಿಸಿಲ ಝಳಕ್ಕೆ ಕಂಗೆಟ್ಟಿದ್ದ ಮಲೆನಾಡಿಗರಿಗೆ ವರುಣದೇವ (Rain) ತಂಪೆರೆದಿದ್ದಾನೆ. ಐದಳ್ಳಿ, ಕಣತಿ, ಮಾಗೋಡು ಹುಣಸೇಹಳ್ಳಿ, ಕಡಬಗೆರೆ ಸುತ್ತಮುತ್ತ ಮಳೆ ಸುರಿದಿದೆ. ಸಾಧಾರಣಕ್ಕಿಂತ ಜೋರಾಗೇ ಸುರಿದ ಮಳೆಯಿಂದ ಜನರು ಸಂತಸ ಪಟ್ಟಿದ್ದಾರೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತವರಣವಿತ್ತು. ಬಿಸಿಲ ಧಗೆಗೆ ಕಾಫಿ-ಮೆಣಸು ಉಳಿಸಿಕೊಳ್ಳುವುದು ಸವಾಲಾಗಿತ್ತು. ಮಳೆಯಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಐದು ದಿನದ ಹಿಂದೆ ಮಲೆನಾಡಿನಲ್ಲಿ ಮೊದಲ ಮಳೆಯಾಗಿತ್ತು. ಅದೇ ರೀತಿಯಾಗಿ ಬೀದರ್​ ನಗರ‌ ಸೇರಿದಂತೆ ಔರಾದ್ ತಾಲೂಕಿನ ಕೆಲವು ಕಡೆ ಮಳೆ ಆಗಿದೆ.  ಬಿಸಲಿನ ತಾಪದಿಂದ ಬಸವಳೆದಿದ್ದ ಜನತೆಗೆ ವರುಣನ ಸಿಂಚನವಾಗಿದೆ. ಜನರು ಖಷಿಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us